ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಪರಿಸರ ಸ್ನೇಹಿ ಉತ್ಪನ್ನಗಳು ಯಾವುವು?

author img

By

Published : Jun 4, 2021, 8:42 PM IST

Green Menstruation

ಮಹಿಳೆಯರು ಜೈವಿಕ ವಿಘಟನೀಯ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಬಳಸಿದೆರೆ ಅದನ್ನು 'ಗ್ರೀನ್ ಮೆನ್ಸಟ್ರುಯೇಶನ್' ಎನ್ನಬಹುದು. ಏಕೆಂದರೆ ಅವು ಪರಿಸರ ಸ್ನೇಹಿಯಾಗಿರುತ್ತವೆ. ಇಂತಹ ಉತ್ಪನ್ನಗಳಲ್ಲಿ ಮುಟ್ಟಿನ ಕಪ್‌ಗಳು, ಸಾವಯವ ಹತ್ತಿ ಆಧಾರಿತ ಪ್ಯಾಡ್‌ಗಳು, ಮರುಬಳಕೆ ಮಾಡಬಹುದಾದ ಬಟ್ಟೆ ಪ್ಯಾಡ್‌ಗಳು ಮತ್ತು ಪೀರಿಯಡ್ ಪ್ಯಾಂಟಿಗಳು ಸೇರಿವೆ.

ಹೈದರಾಬಾದ್: "ನಾನು ಹಿತವಾಗಿರಲು ಮತ್ತು ಗುಣಮುಖನಾಗಲು ಪ್ರಕೃತಿಯೆಡೆಗೆ ಹೋಗುತ್ತೇನೆ ಮತ್ತು ಇದರಿಂದ ನನ್ನ ಇಂದ್ರಿಯಗಳನ್ನು ಚೆನ್ನಾಗಿ ಇರಿಸಿಕೊಳ್ಳುತ್ತೇನೆ" ಎಂದು ಜಾನ್ ಬರೋಸ್ ಹೇಳಿದ್ದಾರೆ. ಆದರೆ ಕಳೆದ ಕೆಲವು ಶತಮಾನಗಳಲ್ಲಿ, ಪ್ರಕೃತಿಯೊಂದಿಗೆ ಬದುಕುವ ಬದಲು ಮನುಷ್ಯ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಬಹುಶಃ ಅದಕ್ಕಾಗಿ ನಾವಿಂದು ಬೆಲೆ ತೆರುತ್ತಿದ್ದೇವೆ. ಮಾರಣಾಂತಿಕ ಸಾಂಕ್ರಾಮಿಕ ರೋಗಗಳು, ವಿನಾಶಕಾರಿ ಚಂಡಮಾರುತಗಳು, ಭೂಕುಸಿತಗಳು, ಜ್ವಾಲಾಮುಖಿಗಳು, ಭೂಕಂಪಗಳು ಸಂಭವಿಸುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಮತ್ತು ಪ್ರಕೃತಿಯೊಂದಿಗೆ ಬದುಕಲು ದಾರಿಗಳನ್ನು ಹುಡುಕುವ ಸಮಯ ಇದಾಗಿದೆ.

ಭಾರತದಲ್ಲಿ ಹಲವಾರು ಎನ್‌ಜಿಒಗಳು ಹಾಗೂ ಸೆಲೆಬ್ರಿಟಿಗಳು ಮುಟ್ಟಿನ ನೈರ್ಮಲ್ಯದ ಮೂಲಕ ಜನರಿಗೆ ಸಹಾಯ ಮಾಡುವಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಟ್ಟಿನ ನೈರ್ಮಲ್ಯ ಮತ್ತು ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುವ ಉತ್ಪನ್ನಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಇದರೊಂದಿಗೆ ಪ್ಲಾಸ್ಟಿಕ್ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಸುಮಾರು 8 ಪಟ್ಟು ಹೆಚ್ಚಳವಾಗಿದೆ.

ಸರಾಸರಿ ಮಹಿಳೆಯು ಸುಮಾರು 450 ಋತುಚಕ್ರಗಳನ್ನು ಹೊಂದುತ್ತಾಳೆ ಎಂದು ನಿರೀಕ್ಷಿಸಲಾಗಿದೆ. ರೋಚೆಸ್ಟರ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿ ವರದಿಯ ಪ್ರಕಾರ, 450 ಚಕ್ರಗಳಲ್ಲಿ ಸರಾಸರಿ ಮಹಿಳೆ 12000 - 15000 ಪ್ಯಾಡ್, ಟ್ಯಾಂಪೂನ್ ಮತ್ತು ಪ್ಯಾಂಟಿ ಲೈನರ್ ಬಳಸುತ್ತಾರೆ. ಒಂದು ಸ್ಯಾನಿಟರಿ ಪ್ಯಾಡ್‌ನಲ್ಲಿ ಐದು ಪ್ಲಾಸ್ಟಿಕ್ ಚೀಲಗಳಿಗೆ ಸಮಾನವಾದ ಪ್ಲಾಸ್ಟಿಕ್ ಇದೆ. ಆದ್ದರಿಂದ ಒಬ್ಬ ಮಹಿಳೆ 60,000 - 75,000 ಪ್ಲಾಸ್ಟಿಕ್ ಚೀಲಗಳಿಗೆ ಸಮಾನವಾದ ಮುಟ್ಟಿನ ಸ್ಯಾನಿಟರಿ ಉತ್ಪನ್ನಗಳನ್ನು ಬಳಸುತ್ತಿದ್ದಾಳೆ. ಒಂದು ಸ್ಯಾನಿಟರಿ ಪ್ಯಾಡ್ ಕೊಳೆಯಲು 500-800 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ಈ ಅಂಕಿಅಂಶಗಳು ಸ್ಯಾನಿಟರಿ ಪ್ಯಾಡ್‌ಗಳ ಹೊರಗಿನ ಪ್ಲಾಸ್ಟಿಕ್ ಕವರ್​ಗಳು, ಟ್ಯಾಂಪೂನ್‌ಗಳು ಮತ್ತು ಟ್ಯಾಂಪೂನ್‌ಗಳ ಪ್ಲಾಸ್ಟಿಕ್ ಕವರ್​ ಅನ್ನು ಹೊರತುಪಡಿಸಿವೆ.

ಈ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಭಾರತದಲ್ಲಿ 355 ಮಿಲಿಯನ್ ಮುಟ್ಟಾಗುವ ಮಹಿಳೆಯರು ಇದ್ದಾರೆ ಎಂದು ಪರಿಗಣಿಸಿದ್ದು, ಅದರಲ್ಲಿ ಮೂರನೇ ಎರಡರಷ್ಟು ಜನರು ಟ್ಯಾಂಪೂನ್ ಮತ್ತು ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ. ಇದರ ಪ್ರಕಾರ ಮಹಿಳೆಯರು ವರ್ಷಕ್ಕೆ ಸುಮಾರು 12 ಬಿಲಿಯನ್ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ಸ್ಯಾನಿಟರಿ ಪ್ಯಾಡ್‌ಗಳನ್ನು ಹೂತರೆ ಅವು ಮಣ್ಣಿನಲ್ಲಿ ಕರಗುವುದಿಲ್ಲ. ಅವುಗಳನ್ನು ಸುಟ್ಟುಹಾಕಿದರೆ ಅವು ಫ್ಯೂರನ್ ಮತ್ತು ಡೈಆಕ್ಸಿನ್‌ಗಳಂತಹ ವಿಷಕಾರಿ ಕ್ಯಾನ್ಸರ್ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ನಾವು ತಿಳಿಯದೇ ಭೂಮಿಗೆ ಹೆಚ್ಚಿನ ಹಾನಿ ಮಾಡಿದ್ದೇವೆ. ಪ್ರತಿಯೊಬ್ಬರೂ ಸುಸ್ಥಿರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಬಳಸಬೇಕು ಮತ್ತು 'ಗ್ರೀನ್ ಮೆನ್ಸಟ್ರುಯೇಶನ್' ಕಡೆಗೆ ಸಾಗಬೇಕು.

ಮಹಿಳೆಯರು ಜೈವಿಕ ವಿಘಟನೀಯ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಬಳಸಿದರೆ ಅದನ್ನು 'ಗ್ರೀನ್ ಮೆನ್ಸ​ಟ್ರುಯೇಶನ್' ಎನ್ನಬಹುದು. ಏಕೆಂದರೆ ಅವು ಪರಿಸರ ಸ್ನೇಹಿಯಾಗಿರುತ್ತವೆ. ಇಂತಹ ಉತ್ಪನ್ನಗಳಲ್ಲಿ ಮುಟ್ಟಿನ ಕಪ್‌ಗಳು, ಸಾವಯವ ಹತ್ತಿ ಆಧಾರಿತ ಪ್ಯಾಡ್‌ಗಳು, ಮರುಬಳಕೆ ಮಾಡಬಹುದಾದ ಬಟ್ಟೆ ಪ್ಯಾಡ್‌ಗಳು ಮತ್ತು ಪೀರಿಯಡ್ ಪ್ಯಾಂಟಿಗಳು ಸೇರಿವೆ. ಇವುಗಳು ಪರಿಸರ ಸ್ನೇಹಿ ಮಾತ್ರವಲ್ಲದೆ ಪಾಕೆಟ್ ಸ್ನೇಹಿ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಹಾಗೂ ಯೋನಿಯ ಆರೋಗ್ಯಕ್ಕೂ ಒಳ್ಳೆಯದು.

ಪಾಕೆಟ್ ಸ್ನೇಹಿ ಏಕೆಂದರೆ ಪ್ರತಿ ಋತುಚಕ್ರಕ್ಕೆ 10 ಸ್ಯಾನಿಟರಿ ಪ್ಯಾಡ್​ಗಳ ಬದಲು 1 ಮುಟ್ಟಿನ ಕಪ್ ಅಥವಾ 5 ಮರುಬಳಕೆ ಮಾಡಬಹುದಾದ ಹತ್ತಿ ಅಥವಾ ಬಟ್ಟೆ ಪ್ಯಾಡ್‌ಗಳನ್ನು ಸುಮಾರು 12 ಋತುಚಕ್ರಗಳಲ್ಲಿ ಬಳಸಬಹುದು.

ಇವುಗಳು ಸಂತಾನೋತ್ಪತ್ತಿ ಮತ್ತು ಯೋನಿಯ ಆರೋಗ್ಯ ಸ್ನೇಹಿ. ಏಕೆಂದರೆ ಅವುಗಳ ಬಳಕೆಯು ತುರಿಕೆ ಹಾಗೂ ಯೋನಿ ಸೋಂಕುಗಳು ಕಡಿಮೆ ಮಾಡುತ್ತವೆ ಮತ್ತು ಎಂಡೊಮೆಟ್ರಿಯೊಸಿಸ್, ಅಡೆನೊಮೈಯೋಸಿಸ್, ಗರ್ಭಕಂಠದ ಕ್ಯಾನ್ಸರ್​ನಂತಹ ಆರೋಗ್ಯ ಸಮಸ್ಯೆಗಳ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಪ್ಲಾಸ್ಟಿಕ್ ಪ್ಯಾಡ್‌ಗಳಲ್ಲಿನ ಹಾನಿಕಾರಕ ರಾಸಾಯನಿಕಗಳಾದ ಡೈಆಕ್ಸಿನ್‌ಗಳು ಮತ್ತು ಫ್ಯೂರನ್‌ಗಳಿಂದ ಈ ಸಮಸ್ಯೆಗಳು ಉದ್ಭವಿಸುತ್ತವೆ. ಪ್ಲಾಸ್ಟಿಕ್ ಪ್ಯಾಡ್‌ಗಳಿಗೆ ಹೋಲಿಸಿದರೆ ಈ ಸುಸ್ಥಿರ ಉತ್ಪನ್ನಗಳು ಕೇವಲ 0.6 ಪ್ರತಿಶತದಷ್ಟು ತ್ಯಾಜ್ಯವನ್ನು ಉತ್ಪಾದಿಸುತ್ತವೆ.

ಮುಟ್ಟಿನ ಶಿಕ್ಷಣದ ಜೊತೆಗೆ ನಾವು ಮಹಿಳೆಯರಿಗೆ ಸುಸ್ಥಿರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳು ಮತ್ತು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸೂಕ್ತ ಸಮಯ ಇದಾಗಿದೆ. ಮುಟ್ಟಿನ ಉತ್ಪನ್ನಗಳನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್ಲರಿಗೂ ಉಚಿತವಾಗಿ ನೀಡಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ಬದಲು ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಕೊಡುವುದು ಮತ್ತು ಆ ಕುರಿತು ಶಿಕ್ಷಣ ನೀಡುವುದು ಸೂಕ್ತವಾಗಿದೆ. ಇದು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.