ಲಸಿಕೆ ಹಾಕಿಸಿಕೊಂಡ ತಾಯಂದಿರಿಂದ ಶಿಶುಗಳಿಗೆ COVID-19 antibodies ರವಾನೆ: ಸಂಶೋಧನೆ

author img

By

Published : Jan 10, 2022, 5:44 PM IST

ಸಂಶೋಧನೆ

ಲಸಿಕೆ ಹಾಕಿಸಿಕೊಂಡ ತಾಯಂದಿರ ಶಿಶುಗಳ ಮಲದ ಮಾದರಿಯಲ್ಲಿ SARS-CoV-2 ಪ್ರತಿಕಾಯವನ್ನು ಪತ್ತೆ ಹಚ್ಚಲಾಗಿದೆ. ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 23 ತಿಂಗಳವರೆಗಿನ ಮಕ್ಕಳಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ ಎಂದು ಲೇಖಕ ವಿಘ್ನೇಶ್ ನಾರಾಯಣಸ್ವಾಮಿ ಹೇಳಿದ್ದಾರೆ.

ಕೋವಿಡ್​-19 ಲಸಿಕೆ ಪಡೆದ ಮಹಿಳೆಯರು ಎದೆಹಾಲುಣಿಸುವಾಗ ತಮ್ಮ ಮಕ್ಕಳಿಗೆ SARS-CoV-2 ಪ್ರತಿಕಾಯ(Antibodies)ಗಳನ್ನು ವರ್ಗಾಯಿಸುತ್ತಾರೆ. ಇದರಿಂದ ಮಕ್ಕಳ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಎಂದು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದ ಅಮ್ಹೆರ್ಸ್ಟ್ ಸಂಶೋಧನೆಯಿಂದ ತಿಳಿದುಬಂದಿದೆ.

ತಾಯಂದಿರ ಎದೆ ಹಾಲು ಮತ್ತು ಎದೆಹಾಲು ಕುಡಿದ ಶಿಶುಗಳ ಮಲ ಎರಡರಲ್ಲೂ ಕೋವಿಡ್​​-19ನ mRNA ಲಸಿಕೆ ಪತ್ತೆಯಾಗಿದೆ. ಲಸಿಕೆ ಹಾಕಿಸಿಕೊಂಡ ತಾಯಂದಿರ ಶಿಶುಗಳ ಮಲದ ಮಾದರಿಯಲ್ಲಿ SARS-CoV-2 ಪ್ರತಿಕಾಯವನ್ನು ಪತ್ತೆಹಚ್ಚಿರುವ ಮೊದಲ ಸಂಶೋಧನೆ ಇದಾಗಿದೆ ಎಂದು ಲೇಖಕ ವಿಘ್ನೇಶ್ ನಾರಾಯಣಸ್ವಾಮಿ ಹೇಳಿದ್ದಾರೆ.

ಈ ಅಧ್ಯಯನ ತುಂಬಾ ಮುಖ್ಯವಾಗಿದೆ. ಏಕೆಂದರೆ ತಾಯಂದಿರು ತಮ್ಮ ಮಕ್ಕಳು ಈ ಪ್ರತಿಕಾಯಗಳನ್ನು ಹೊಂದಿದ್ದಾರೆಯೇ ಎಂದು ತಿಳಿಯಲು ಬಯಸುತ್ತಾರೆ. ನಮ್ಮ ಅಧ್ಯಯನವು ಎದೆ ಹಾಲಿನ ಮೂಲಕ ಪ್ರತಿಕಾಯಗಳನ್ನು ವರ್ಗಾಯಿಸಬಹುದು ಎಂಬುದನ್ನು ತೋರಿಸುತ್ತದೆ. ಮಹಿಳೆಯರು ಲಸಿಕೆಯನ್ನು ಪಡೆದ ನಂತರ ಈ ಬಲವಾದ ಪುರಾವೆಯನ್ನು ಒದಗಿಸುವುದರಿಂದ ಅವರು ಹಾಲುಣಿಸುವುದನ್ನು ಮುಂದುವರಿಸಲು ಸಹಕಾರಿಯಾಗುತ್ತದೆ. ಅಲ್ಲದೇ ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 23 ತಿಂಗಳವರೆಗಿನ ಮಕ್ಕಳಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ ಎಂದು ವಿಘ್ನೇಶ್ ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಸರಿಯಾಗಿ ನಿದ್ರೆ ಮಾಡದ ಮಕ್ಕಳು ಸಕ್ಕರೆ ಅಂಶದ ಆಹಾರ ಹೆಚ್ಚು ಸೇವಿಸುತ್ತಾರೆ.. ಅಧ್ಯಯನ

ಅಮೆರಿಕದ ಮಹಿಳೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲಾ ಜನವರಿ ಮತ್ತು ಏಪ್ರಿಲ್ 2021 ರ ನಡುವೆ ಕೋವಿಡ್​​-19ನ mRNA ಲಸಿಕೆಯನ್ನು ಪಡೆದಿದ್ದಾರೆ. ಈ ಎಲ್ಲಾ ಮಹಿಳೆಯರು ಲಸಿಕೆ ಹಾಕುವ ಮೊದಲು ಎದೆ ಹಾಲಿನ ಮಾದರಿಗಳನ್ನು ನೀಡಿದ್ದಾರೆ. ಬಳಿಕ ಎರಡೂ ಡೋಸ್​ ಲಸಿಕೆ ಹಾಕಿಸಿಕೊಂಡ ನಂತರ ರಕ್ತದ ಮಾದರಿಯನ್ನು ನೀಡಿದ್ದಾರೆ. ಇದನ್ನು ಪರೀಕ್ಷಿಸಿದಾಗ ಅವರಲ್ಲಿ ಪ್ರತಿಕಾಯಗಳು ಉತ್ಪತಿಯಾಗಿರುವುದು ಪತ್ತೆಯಾಗಿದೆ.

ರಿಸೆಪ್ಟರ್-ಬೈಂಡಿಂಗ್ ಡೊಮೇನ್ (RBD)-ನಿರ್ದಿಷ್ಟ ಇಮ್ಯುನೊಗ್ಲಾಬ್ಯುಲಿನ್ (Ig)A ಮತ್ತು IgG ಪ್ರತಿಕಾಯಗಳಿಗಾಗಿ ಮಾದರಿಗಳನ್ನು ಪರೀಕ್ಷಿಸಲಾಯಿತು. ಎದೆ ಹಾಲಿನ ಮಾದರಿಗಳಲ್ಲಿ, RBD-ವಿರೋಧಿ IgG ಪ್ರತಿಕಾಯಗಳು SARS-CoV-2 ನ ಪ್ರೊಟೀನ್ ಸ್ಪೈಕ್ ಅನ್ನು ತಟಸ್ಥಗೊಳಿಸುವುದು ಕಂಡುಬಂದಿವೆ. ಆ್ಯಂಟಿ-ಆರ್‌ಬಿಡಿ ಐಜಿಜಿ ಮತ್ತು ಆರ್‌ಬಿಡಿ- ಆ್ಯಂಟಿ ಐಜಿಎ ಪ್ರತಿಕಾಯಗಳು ಕ್ರಮವಾಗಿ ಶೇ.33ರಷ್ಟು ಮತ್ತು ಶೇ.30ರಷ್ಟು ಶಿಶುವಿನ ಮಲದ ಮಾದರಿಗಳಲ್ಲಿ ಪತ್ತೆಯಾಗಿವೆ.

ಲಸಿಕೆಯಿಂದ ಅನಾರೋಗ್ಯಕ್ಕೆ ಒಳಗಾದ ಮಹಿಳೆಯರ ಶಿಶುಗಳ ಮಲದಲ್ಲಿ ಹೆಚ್ಚಿನ ಪ್ರತಿಕಾಯಗಳು ಇದ್ದವು ಎಂದು ಅರ್ಕಾರೊ ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.