ಮಗುವಿನ ಜೊತೆ ಪ್ರಯಾಣ ಮಾಡುವಿರಾ? ಈ 10 ವಸ್ತುಗಳನ್ನು ಮರೆಯದಿರಿ..

author img

By

Published : Nov 25, 2022, 12:48 PM IST

ಮಗುವಿನ ಜೊತೆ ಪ್ರಯಾಣ ಮಾಡುವಾಗ ಈ 10 ವಸ್ತುಗಳನ್ನು ಕೊಂಡೊಯ್ಯವುದು ಮರೆಯಬೇಡಿ

ಮಕ್ಕಳ ವಸ್ತುಗಳನ್ನು ಪಟ್ಟಿ ಮಾಡುವುದು ದೊಡ್ಡ ವಿಷಯವಲ್ಲ. ಆದರೆ, ಎರಡು ದಿನದ ಟ್ರಿಪ್​ಗೆ ಯಾವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದೇ ಸಮಸ್ಯೆ. ಜೊತೆಗೆ ಲಗೇಜ್​ ಪಟ್ಟಿ ಉದ್ದವಾಗದಂತೆಯೂ ನೋಡಿಕೊಳ್ಳಬೇಕಿದೆ.

ಮಗುವಿನ ಜೊತೆ ದೂರ ಪ್ರಯಾಣ ಮಾಡುವಾಗ ಯಾವ ಯಾವ ವಸ್ತುಗಳನ್ನು ಕೊಂಡೊಯ್ಯಬೇಕು. ಯಾವುದನ್ನು ಕೊಂಡೊಯ್ಯಬಾರದು ಎಂಬ ಸಮಸ್ಯೆ ಅನೇಕ ತಾಯಂದಿರದ್ದು. ಯಾವ ವಸ್ತುಗಳು ಪ್ರಯಾಣಕ್ಕೆ ಅನವಶ್ಯಕ ಎಂಬುದು ತಾಯಂದಿರಿಗೆ ಸ್ಪಷ್ಟವಾಗಿ ಅರಿವಿರಬೇಕು.

ಮಕ್ಕಳ ವಸ್ತುಗಳನ್ನು ಪಟ್ಟಿ ಮಾಡುವುದು ದೊಡ್ಡ ವಿಷಯವಲ್ಲ. ಆದರೆ, ಎರಡು ದಿನದ ಟ್ರಿಪ್​ಗೆ ಯಾವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದು ಸಮಸ್ಯೆಯಾಗುತ್ತದೆ. ಜೊತೆಗೆ ಲಗೇಜ್​ ಪಟ್ಟಿ ಉದ್ದವಾಗದಂತೆಯೂ ನೋಡಿಕೊಳ್ಳಬೇಕಿದೆ.

ಕ್ಯಾರಿಯರ್/ ಸ್ಟ್ರೋಲರ್​

ಮಗುವನ್ನು ಸ್ಟ್ರೋಲರ್​ಒಳಗೆ ಕೂರಿಸಿ ಆರಾಮವಾಗಿ ಪ್ರವಾಸದ ವೇಳೆ ಸುತ್ತಾಡುವುದರ ಜೊತೆಗೆ ಮಗುವಿಗೆ ಸುರಕ್ಷತೆಯೂ ಸಿಗುತ್ತದೆ. ಪ್ರವಾಸದಲ್ಲಿ ಸೈಟ್​ ಸೀಯಿಂಗ್ ಅಥವಾ ಶಾಪಿಂಗ್​ ವೇಳೆ ಇದು ನಿಮ್ಮ ಮಗುವಿಗೆ ಹೆಚ್ಚು ಉಪಯುಕ್ತವಾಗಿದೆ. ಮಗು ದೊಡ್ಡದಾದಾಗ ಇದು ನಿಮಗೆ ಅವಶ್ಯಕತೆ ಇಲ್ಲ ಎನಿಸಿದರೂ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಓಡಾಡುವುದನ್ನು ತಪ್ಪಿಸಲಿದೆ.

ಶಬ್ದ ರಹಿತ ಆಟಿಕೆಗಳು

ವಿಮಾನ, ರಸ್ತೆ ಅಥವಾ ಸಮುದ್ರ ಪ್ರಯಾಣ ಮಾಡುವಾಗ ನಿಮ್ಮ ಪಕ್ಕದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸದ್ದು ಮಾಡದ ಸಾಫ್ಟ್​ ಆಟಿಕೆಗಳು ನಿಮ್ಮ ಜೊತೆಗಿರಲಿ.

ವೈಟ್​ ನಾಯ್ಸ್​​​ ಮಷಿನ್​

ಪ್ರಯಾಣದಲ್ಲಿ ಮಕ್ಕಳು ಹೆಚ್ಚು ನಿದ್ದೆ ಮಾಡುತ್ತಾರೆ. ಈ ನಿದ್ದೆಯಲ್ಲಿ ಯಾವುದೇ ತೊಂದರೆ ಇರದಂತೆ ಕಾಪಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ವಿಮಾನ ಪ್ರಯಾಣದಲ್ಲಿ ಅದರ ಶಬ್ಧ ಅಥವಾ ಹೋಟೆಲ್​ ರೂಮ್​, ಗಿಜಿಗುಡುವ ರಸ್ತೆಯ ಶಬ್ದಗಳು ಮಗುವಿನ ನಿದ್ರಾಭಂಗಕ್ಕೆ ತೊಂದರೆಯಾಗದಂತೆ ಕಾಪಾಡುತ್ತದೆ​.

ನರ್ಸಿಂಗ್ ಕವರ್​

ಮಗುವಿನ್ನೂ ತಾಯಿ ಹಾಲು ಕುಡಿಯುತ್ತಿದ್ದರೆ, ಇದು ನಿಮಗೆ ಅವಶ್ಯಕವಾಗಿ ಬೇಕು. ಮಗು ಹಸಿದಾಗ ಹಾಲಿಲ್ಲದೇ ಸುಮ್ಮನಾಗುವುದಿಲ್ಲ. ಪ್ರಯಾಣಿಸುವ ವೇಳೆ ಎಲ್ಲಿಯಾದರೂ, ಮುಜಗರವಿಲ್ಲ, ಆರಾಮವಾಗಿ ನೀವು ಹಾಲುಣಿಸಬಹುದು.

ಸ್ನಾಕ್​ ಕಪ್​

ದೊಡ್ಡವರೇ ಇರಲಿ, ಚಿಕ್ಕ ಮಗುವಿರಲಿ, ಊಟದ ಸಮಯದ ಹೊರತು ಕೆಲ ಸ್ನಾಕ್​ ತಿನ್ನುವ ರೂಢಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಸ್ನಾಕ್​ ಕಪ್​ಗಳು ನಿಮಗೆ ಸಹಾಯಕವಾಗಲಿದೆ. ಈ ಸ್ನಾಕ್​ ಕಪ್​ಗಳಲ್ಲಿ ಮಗುವಿಗೆ ಬೇಕಾದ ವಸ್ತುಗಳನ್ನು ಕ್ಯಾರಿ ಮಾಡಬಹುದಾಗಿದೆ.

ಹಗುರವಾದ ಬ್ಲಾಂಕೆಟ್​

ಮಗುವಿನ ನಿದ್ದೆ ಸೇರಿದಂತೆ ಇನ್ನಿತರ ಸಮಯದಲ್ಲಿ ಮಗುವಿನ ರಕ್ಷಣೆಗೆ ಸಣ್ಣ ಹಗುರವಾದ ಬ್ಲಾಂಕೆಟ್​ ಅವಶ್ಯಕ. ಹೀಗಾಗಿ ಇವುಗಳನ್ನು ಮರೆಯಬೇಡಿ.

ಬೇಬಿ ಥರ್ಮೋಮೀಟರ್​​

ಪ್ರಯಾಣದ ಸಮಯದಲ್ಲಿ ಹವಾಮಾನ ಬದಲಾವಣೆ, ನೀರು, ಉಟದ ವ್ಯತ್ಯಾಸದಿಂದ ಮಗುವಿನ ಆರೋಗ್ಯ ತಾಪಮಾನದಲ್ಲಿ ಏರಿಳಿತ ಕಂಡು ಬರಬಹುದು. ಹಾಗಾಗಿ ಈ ವಸ್ತುವನ್ನು ಪ್ರಯಾಣದಲ್ಲಿ ಮರೆಯದಂತೆ ಕೊಂಡೊಯ್ಯಿರಿ.

ಟೀಥರ್​

ಹಲ್ಲು ಬರುತ್ತಿರುವ ಮಕ್ಕಳಿಗೆ ವಸ್ತುಗಳನ್ನು ಕಡಿಯುವ ಅಭ್ಯಾಸ ಶುರುವಾಗುತ್ತದೆ. ಮಗುವಿನ ಆರೋಗ್ಯದ ದೃಷ್ಠಿಯಿಂದ ಈ ಟೀಥರ್​ ಅನುಕೂಲಕರ.

ಆ್ಯಂಟಿ ಬ್ಯಾಕ್ಟೀರಿಯಲ್​ ವೆಟ್​ ವೈಪ್ಸ್​

ಪ್ರಯಾಣದಲ್ಲಿ ಮಗುವಿನ ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು. ಅದರಲ್ಲೂ ದೀರ್ಘ ಪ್ರಯಾಣದಲ್ಲಿ ಮಗುವಿನ ಕೈ, ಬಾಯಿ ಅಂಗಾಂಗಗಳನ್ನು ಪದೇ ಪದೇ ಒರೆಸುತ್ತಿರಬೇಕು. ಇದು ನಿಮಗೆ ಅವಶ್ಯಕ.

ಇದನ್ನೂ ಓದಿ: ಮಧುಮೇಹಿಗಳಿಗೆ ಡಯಟ್​ಗೆ ತಕ್ಕಂತೆ ರುಚಿಕರ ಆರೋಗ್ಯಕರ ಊಟದ ರೆಸಿಪಿಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.