ನವದೆಹಲಿ: ದೀಪಾವಳಿ ಆರಂಭವಾಗುತ್ತಿದ್ದಂತೆ ದೆಹಲಿ - ಎನ್ಸಿಆರ್ಗಳಲ್ಲಿ ಗಾಳಿ ಮಟ್ಟ ಕುಸಿಯುತ್ತದೆ. ಈ ವಾಯು ಮಾಲಿನ್ಯವೂ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಇದು ಆತಂಕ, ಖಿನ್ನತೆ ಮತ್ತು ಸ್ಮರಣೆ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಈ ಕುರಿತು ಎಚ್ಚರಿಸಿರುವ ವೈದ್ಯರು, ಮಾಲಿನ್ಯವೂ ಮನುಷ್ಯನ ಯೋಗಕ್ಷೇಮಕ್ಕೆ ಹಾನಿ ಮಾಡುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ.
ಪರಿಸರದ ಬದಲಾವಣೆಗಳ ಪರಿಣಾಮ: ಏಮ್ಸ್ನ ಸೈಕಿಯಾಟ್ರಿಕ್ ವಿಭಾಗದ ಪ್ರೋ ಡಾ. ನಂದ ಕುಮಾರ್ ಮಾತನಾಡಿ, ವಾಯು ಮಾಲಿನ್ಯದ ಹೊರತಾಗಿ, ಪರಿಸರದಲ್ಲಿನ ಬದಲಾವಣೆಗಳು ಮತ್ತು ಪ್ರವಾಹ, ಬಿರುಗಾಳಿಗಳಂತಹ ಹವಾಮಾನದ ಅತಿರೇಕ ಘಟನೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ರೀತಿಯ ಹವಾಮಾನ ಬದಲಾವಣೆಗೆ ಒಳಗಾಗುವ ಜನರಲ್ಲಿ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು ಅಭಿವೃದ್ಧಿಯಾಗುತ್ತದೆ. ಉದಾಹರಣೆಗೆ ಪಿಟಿಎಸ್ಡಿ, ಖಿನ್ನತೆ ಅಥವಾ ಪರ್ಯಾಯ ಸಮಸ್ಯೆಗಳು ಕಾಣಿಸಬಹುದು ಎಂದರು. ವಾಯುಮಾಲಿನ್ಯ ದೆಹಲಿಯಲ್ಲಿ ವಾಸಿಸುವ ಜನರ ಬದುಕುಳಿಯುವ ಅವಧಿಯನ್ನು 11.9ರಷ್ಟು ಕಡಿಮೆ ಮಾಡಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದೆ. ಅಲ್ಲದೇ, ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರ ಎಂಬ ಬಿರುದನ್ನು ದೆಹಲಿ ಪಡೆದುಕೊಂಡಿದೆ.
ಚಿಕಾಗೋ ಎನರ್ಜಿ ಪಾಲಿಸಿ ಇನ್ಸುಟಿಟ್ಯೂಟ್ ಯುನಿವರ್ಸಿಟಿ ವಾಯು ಗುಣಮಟ್ಟ ಜೀವನ ಸೂಚ್ಯಂಕ (ಎಕ್ಯೂಎಲ್ಐ) 2023ರ ವರದಿ ಪ್ರಕಾರ, ಭಾರತ ಜಾಗತಿಕವಾಗಿ ಎರಡನೇ ಹೆಚ್ಚು ಮಾಲಿನ್ಯ ದೇಶವಾಗಿದ್ದು, ಜಗತ್ತಿನಲ್ಲೆ ಹೆಚ್ಚು ಮಾಲಿನ್ಯ ನಗರ ಎಂದರೆ ಅದು ದೆಹಲಿಯಾಗಿದೆ.
2021ರ ಪಿಎಂ2.5 ದತ್ತಾಂಶ ಆಧಾರಿತ ಸಂಶೋಧನೆಗಳು ಭಾರತದಲ್ಲಿ ಮಾಲಿನ್ಯವು 2020 ರಲ್ಲಿ 56.2 ಮೈಕ್ರೋಗ್ರಾಂಗಳಷ್ಟು ಘನ ಮೀಟರ್ ಗಾಳಿಯಿಂದ 2021 ರಲ್ಲಿ 58.7 ಮೈಕ್ರೋಗ್ರಾಂಗಳಷ್ಟು ಘನ ಮೀಟರ್ ಗಾಳಿಗೆ ಹೆಚ್ಚಾಗಿದೆ ಎಂದು ಅಂಕಿ- ಅಂಶಗಳು ತೋರಿಸಿವೆ.
ಆರೋಗ್ಯ ಮೇಲಿನ ಪರಿಣಾಮ: ವಾಯು ಮಾಲಿನ್ಯವೂ ಜಾಗತಿಕ ಸಮಸ್ಯೆಯಾಗಿದ್ದು ಇದು ಜಾಗತಿಕವಾಗಿ ಮಿಲಿಯಂತರ ಮಂದಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಉಸಿರಾಟ ಸಮಸ್ಯೆಯಿಂದ ಹೃದಯ ರಕ್ತನಾಳದವರೆಗೆ ಹಲವು ದೈಹಿಕ ಆರೋಗ್ಯ ಸಮಸ್ಯೆಯೊಂದಿಗೂ ಇದು ಸಂಬಂಧ ಹೊಂದಿದೆ. ಆದಾಗ್ಯೂ, ಮಾನಸಿಕ ಆರೋಗ್ಯದ ಮೇಲೆ ವಾಯು ಮಾಲಿನ್ಯದ ಪರಿಣಾಮ ಕಡಿಮೆ ಮಟ್ಟದಲ್ಲಿ ಅನ್ವೇಷಿಸಲಾಗಿದೆ. ಆದರೆ ಸಮನ ಕಾಳಜಿ ಅಂಶವಾಗಿದೆ.
ಹಾರ್ವಡ್ ಯುನಿವರ್ಸಿಟಿ ಸಂಶೋಧಧಕರು ಮಾರ್ಚ್ನಲ್ಲಿ ಬಿಡುಗಡೆ ಮಾಡಿದ ಅಧ್ಯಯನದಲ್ಲಿ ವಾಯು ಮಾಲಿನ್ಯವೂ ಡೆಮನ್ಶಿಯಾ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದ್ದರು. ಈ ಹಿಂದಿನ ಹಲವು ಅಧ್ಯಯನಗಳು ಕೂಡ ಮಾಲಿನ್ಯವೂ ಒತ್ತಡ, ಮಾನಸಿಕ ಸಮಸ್ಯೆ, ಅಲ್ಝೈಮರ್ನಂತರ ರೋಗ, ಖಿನ್ನತೆ ಕಾರಣದೊಂದಿಗೆ ಸಂಪರ್ಕ ನೀಡಿದ್ದರು.
ಮೆದಾಂತ್ ಆಸ್ಪತ್ರೆಯ ನ್ಯೂರೋಸೈಕಿಯಾಟ್ರಿಸ್ಟ್ನ ಹಿರಿಯ ಕನ್ಸಲ್ಟಂಟ್ ಡಅ ವಿಪುಲ್ ರುಸ್ತೋಗಿ ಹೇಳುವಂತೆ, ಅನೇಕ ಜನರು ತಮ್ಮ ಉದ್ಯೋಗದಿಂದಾಗಿ ದೆಹಲಿ ಎನ್ಸಿಆರ್ನಲ್ಲಿ ವಾಸಿಸುತ್ತಿದ್ದು, ಅವರ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಎದುರಾಗಿದೆ. ಇವುಗಳಿಂದ ಅವರ ಜೀವನ ಇದೀಗ ತಲೆ ಕೆಳಗಾಗುವಂತಹ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Air pollution: ಭಾರತೀಯರ ಜೀವಿತಾವಧಿಯನ್ನು 5 ವರ್ಷ ಕಡಿಮೆ ಮಾಡಿದೆ ವಾಯುಮಾಲಿನ್ಯ; ಅಧ್ಯಯನ