ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್ ವೈರಾಲಾಜಿ ಘಟಕಕ್ಕೆ ಚಾಲನೆ

ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್ ವೈರಾಲಾಜಿ ಘಟಕಕ್ಕೆ ಚಾಲನೆ
Nipah Virus: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ತಿರುವನಂತಪುರಂ: ಕೇರಳದಲ್ಲಿ ನಿಫಾ ಸೋಂಕು ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಕೋಯಿಕ್ಕೋಡ್ನಲ್ಲಿ 39 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕು ದೃಢಪಟ್ಟಿರುವ ಕುರಿತು ಆರೋಗ್ಯ ಸಚಿವರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಅವರಲ್ಲಿ ಕಂಡು ಬಂದಿಲ್ಲ ಎಂದಿದ್ದಾರೆ.
ಮೊಬೈಲ್ ವೈರಾಲಾಜಿ ಘಟಕಕ್ಕೆ ಚಾಲನೆ: ಕೇರಳದಲ್ಲಿ ನಿಫಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸೋಂಕಿನ ಪರೀಕ್ಷೆಗೆ ಇಲ್ಲಿನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (ಆರ್ಜಿಸಿಬಿ) ಸುಸ್ಸಜ್ಜಿತ ಮೊಬೈಲ್ ವೈರಾಲಜಿ ಪರೀಕ್ಷಾ ಪ್ರಯೋಗಾಲಯವನ್ನು ಹೊರ ತಂದಿದೆ. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಲಾಗಿದೆ.
ಈ ಮೊಬೈಲ್ ವೈರಾಲಾಜಿ ಲ್ಯಾಬ್ಗೆ ಕೇರಳದ ವಿಧಾನಸಭೆ ಸಂಕೀರ್ಣದಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಚಾಲನೆ ನೀಡಿದರು. ಇದು ನಿಫಾ ಕಂಟೈನ್ಮೆಂಟ್ ಪ್ರದೇಶದಲ್ಲಿ ಈ ಆರ್ಜಿಸಿಬಿ ಮಹತ್ವದ ಸೌಲಭ್ಯ ಒದಗಿಸಲಿದೆ. ಕೋಯಿಕ್ಕೋರ್ ಪ್ರದೇಶದಲ್ಲಿ ಇದು ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸಲು ಸಹಾಯ ಮಾಡಲಿದೆ.
ಬಯೋಸೈಫ್ಟಿ ಲೆವೆಲ್ 2 (ಬಿಎಸ್ಎಲ್) ಪ್ಲಸ್ ಲೆವೆಲ್ 3 ತರಬೇತಿಯನ್ನು ಈ ಲ್ಯಾಬ್ನಲ್ಲಿ ಮಾಡಬಹುದಾಗಿದೆ. ಎರಡು ಮೆಷಿನ್ಗಳ ಸಮನಾಂತರವಾಗಿ ಕಾರ್ಯ ನಿರ್ವಹಿಸಲಿದೆ. ಯಾವುದೇ ಹೇಳಿದ ಸಮಯದಲ್ಲಿ ಮೆಷಿನ್ ಅನ್ನು 96 ಮಾದರಿಗಳನ್ನು ಪರೀಕ್ಷೆ ನಡೆಸಲಿದೆ. ಎರಡು ಮೆಷಿನ್ಗಳಿಂದ ಒಟ್ಟು 192 ಮಾದರಿಗಳನ್ನು ಪರಿಶೀಲಿಸಬಹುದಾಗಿದೆ ಎಂದು ಜಾರ್ಜ್ ತಿಳಿಸಿದರು. ಪುಣೆಯ ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಬಯೀಸೈನ್ಸ್ (ಎನ್ಐಬಿ) ಮೊಬೈಲ್ ಲ್ಯಾಬ್ಗಳು ಈಗಾಗಲೇ ಕೋಯಿಕ್ಕೋಡ್ಗೆ ಬಂದು ತಲುಪಿವೆ ಎಂದರು.
ಆರ್ಜಿಸಿಬಿ ನಿರ್ದೇಶಕ ಪ್ರೋ ಚಂದ್ರಭೋಸ್ ನಾರಾಯಣ್ ಮಾತನಾಡಿ, ಈ ಮೊಬೈಲ್ ಘಟಕದಲ್ಲಿ ಆರು ತಜ್ಞರ ಗುಂಪು ಸೇವೆಗೆ ಲಭ್ಯವಿದೆ. ಮಾದರಿ ಪರೀಕ್ಷೆ ನಡೆಸಿ, ಫಲಿತಾಂಶ ಬರಲು ಆರು ಗಂಟೆ ಆಯಿತು. ಮೊಬೈಲ್ ಲ್ಯಾಬ್ ಕಂಟೈನ್ಮೆಂಟ್ ವಲಯದಲ್ಲಿ ನಿಯೋಜಿಸಲಾಗಿದೆ. ಎಷ್ಟೇ ಸಣ್ಣ ಪ್ರಮಾಣದ ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
ಬಿಎಸ್ಎಲ್ 3 ಸೌಲಭ್ಯ, ಮೊಬೈಲ್ ಲ್ಯಾಬ್ ಡಬಲ್ ಏರ್ಲಾಕ್ ವ್ಯವಸ್ಥೆಯನ್ನು ಹೊಂದಿದೆ. ಸ್ಥಳದ;ಲ್ಲಿ ಪತ್ತೆ ಮಾಡುವ ಮತ್ತು ಜೈವಿಕ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಕ್ಟೀರಿಯಾ, ಶೀಲೀಂದ್ರ ಮತ್ತು ರೋಗಕಾರಕ ಜೀವಿಗಳಿಗೆ ಪರೀಕ್ಷೆಯನ್ನು ಮಾಡಬಹುದು ಎಂದು ನಾರಾಯಣ ಅವರು ತಿಳಿಸಿದ್ದಾರೆ.
ಆರ್ಜಿಸಿಬಿ ಅತ್ಯಾಧುನಿಕ ಯಂತ್ರೋಪಕರಣ ಹೊಂದಿದೆ. ರೋಗ ನಿರ್ಣಯ ಪರಿಣಿತಿಯನ್ನು ಹೊಂದಿರುವ ಸಿಬ್ಬಂದಿಗಳು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
