ಪರಿಸರ ಜಾಗೃತಿಗಾಗಿ ಕೇರಳದಿಂದ ಸಿಂಗಪುರಕ್ಕೆ ಉಡುಪಿಯ ಹರ್ಷೇಂದ್ರ ಸೈಕಲ್ ಯಾತ್ರೆ

author img

By

Published : Sep 21, 2022, 5:36 PM IST

udupi-youth-cycle-ride-for-awareness-about-environmental-pollution

ಪರಿಸರ ಮಾಲಿನ್ಯ ಬಗ್ಗೆ ಜಾಗೃತಿ ಮೂಡಿಸಲು ಉಡುಪಿಯ ಹರ್ಷೇಂದ್ರ ಎಂಬ ಯುವಕ ಕೇರಳದಿಂದ ಸಿಂಗಪುರಕ್ಕೆ ಸುಮಾರು 11,000 ಕಿ.ಮೀ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

ಯಾದಗಿರಿ : ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಯುವಕನೋರ್ವ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಹರ್ಷೇಂದ್ರ ಆಚಾರ್ಯ(23) ಎಂಬ ಯುವಕ ಸೈಕಲ್ ಮೂಲಕ ಕೇರಳದಿಂದ ಸಿಂಗಪುರಕ್ಕೆ ಸುಮಾರು 11,000 ಕಿಲೋಮೀಟರ್ ಯಾತ್ರೆ ಕೈಗೊಂಡಿದ್ದಾರೆ.

11000 ಕಿಲೋಮೀಟರ್ ಯಾತ್ರೆ : ಬ್ರಹ್ಮಾವರದಲ್ಲಿ ಪ್ರೌಢಶಿಕ್ಷಣ ಮತ್ತು ನಿಟ್ಟೆಯಲ್ಲಿ ಡಿಪ್ಲೊಮೋ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರು ಶಿವರಾಮ ಕಾರಂತರ (ಕೋಶಿಕಾ)ನಾಟಕ ತಂಡದ ಕಲಾವಿದನಾಗಿದ್ದಾರೆ. ಜೊತೆಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ತಾಲ್ಲೂಕಿನ ಯರಗೋಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಾದು ಹೋಗುವಾಗ ಮಾತನಾಡಿದ ಅವರು, ರಜೆ ದಿನಗಳಲ್ಲಿ ಲ್ಯಾಂಬ್ರಟ್ ಸ್ಕೂಟರ್ ಮತ್ತು ಜಾವ ಬೈಕ್ ನಲ್ಲಿ ದಕ್ಷಿಣಕನ್ನಡದ ಚಾರಣ ಪ್ರದೇಶಗಳನ್ನು ಸುತ್ತಿದ್ದೇನೆ. ಅಕ್ಟೋಬರ್ 2021ರಲ್ಲಿ 2700 ಕಿಲೋಮೀಟರ್ ಕಾಲು ನಡಿಗೆಯಲ್ಲಿ 'ಕರ್ನಾಟಕದಿಂದ ಕಾಶ್ಮೀರಕ್ಕೆ' ಹೋಗಿ 'ಹುಲಿಕುಣಿತ' ಪ್ರದರ್ಶಿಸಿದ್ದೇವೆ. ಆಗಸ್ಟ್ 15 ರಂದು ಕೇರಳದಿಂದ ಸಿಂಗಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ರಾಷ್ಟ್ರಧ್ವಜ ನೀಡಿ ಶುಭ ಹಾರೈಸಿದ್ದಾರೆ ಎಂದು ಹೇಳಿದರು.

ಪರಿಸರ ಜಾಗೃತಿಗಾಗಿ ಕೇರಳದಿಂದ ಸಿಂಗಾಪುರಕ್ಕೆ ಉಡುಪಿಯ ಹರ್ಷೇಂದ್ರ ಸೈಕಲ್ ಯಾತ್ರೆ

ಸದ್ಯ 1600 ಕಿಲೋಮಿಟರ್ ಸೈಕಲ್ ಯಾತ್ರೆ ಪೂರ್ಣಗೊಂಡಿದ್ದು, ಕೇರಳದ ತಿರುವನಂತಪುರಂ, ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ, ಬೆಂಗಳೂರು, ಮಂತ್ರಾಲಯ, ರಾಯಚೂರು ಮೂಲಕ ಯಾದಗಿರಿ ತಲುಪಿದ್ದಾರೆ. ಮುಂದಿನ 6 ತಿಂಗಳಲ್ಲಿ ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ರಾಜ್ಯಗಳ ಮೂಲಕ ನೇಪಾಳ, ಬರ್ಮಾ, ಭೂತಾನ್, ಥೈಲ್ಯಾಂಡ್, ಮಲೇಶಿಯಾ ಮಾರ್ಗವಾಗಿ ಸಿಂಗಪುರ ತಲುಪಲಿದ್ದೇನೆ ಎಂದು ಹೇಳಿದರು.

ಬೆಳಗ್ಗೆ 6 ಗಂಟೆಗೆ ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿ, ಫಲಹಾರ ಸೇವಿಸಿ ಯಾತ್ರೆ ಪ್ರಾರಂಭಿಸುತ್ತಾರೆ. ಮಧ್ಯಾಹ್ನ ಹಣ್ಣುಗಳನ್ನು ಸೇವಿಸುತ್ತಾರೆ. ಸಂಜೆ 6 ಕ್ಕೆ ಮಂದಿರ, ಪೊಲೀಸ್ ಠಾಣೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ತಂಗುತ್ತಾರೆ. ಇವರಿಗೆ 'ಬ್ಯಾಗ್ ಟು ಬ್ಯಾಗ್' ಸಂಸ್ಥೆ ನೆರವು ನೀಡುತ್ತಿದೆ. ತನ್ನ ಕ್ಯಾಮರಾದಲ್ಲಿ ಸೆರೆಹಿಡಿದ ದೃಶ್ಯಗಳನ್ನು ತಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ತುಳುನಾಡ ಕಾರ್ಣಿಕ ದೈವ ಕೊರಗಜ್ಜನಿಗೆ ಇರಿಸಿದ ವೀಳ್ಯದೆಲೆಯಲ್ಲಿ ಮೂಡಿದ ಬೇರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.