ಜಮೀನು ದಾಖಲೆ ಪಡೆಯಲು ಬಂದ ಬಡದಂಪತಿ ಕಷ್ಟಕ್ಕೆ ಸ್ಪಂದಿಸಿದ ತಹಶೀಲ್ದಾರ್​

author img

By

Published : Sep 23, 2021, 10:43 PM IST

tahashildhar-sharanabasappa

ಹಲವಾರು ವರ್ಷಗಳಿಂದ ಆಗದ ಕೆಲಸವನ್ನು ತಕ್ಷಣಕ್ಕೆ ಸ್ಪಂದಿಸಿ ಜಮೀನಿನ ದಾಖಲೆಗಳನ್ನು ನೀಡಿದ ತಹಶೀಲ್ದಾರ್​ ಕಾರ್ಯವೈಖರಿಗೆ ವೆಂಕಟರೆಡ್ಡಿ ದಂಪತಿ ಮನಸಾರೆ ಧನ್ಯವಾದ ಅರ್ಪಿಸಿದ್ದಾರೆ.

ಗುರುಮಠಕಲ್(ಯಾದಗಿರಿ): ಪಿತ್ರಾರ್ಜಿತ ಆಸ್ತಿ ಪತ್ರ ಪಡೆಯಲು ಕಳೆದ ಕೆಲವು ದಿನಗಳಿಂದ ಬಸ್ ನಿಲ್ದಾಣದಲ್ಲಿಯೇ ತಂಗಿದ್ದ ದಂಪತಿ ಸಂಕಷ್ಟಕ್ಕೆ ತಾಲೂಕು ತಹಶೀಲ್ದಾರ್​ ಶರಣಬಸಪ್ಪ ರಾಣಪ್ಪ ಸ್ಪಂದಿಸಿದ್ದಾರೆ.

ಆಸ್ತಿ ಪತ್ರಕ್ಕಾಗಿ ಕುಟುಂಬವೊಂದು ಇದೇ ತಿಂಗಳ 6ರಂದು ಹೈದರಾಬಾದ್​​ನಿಂದ ಗುರುಮಠಕಲ್​​ಗೆ ಆಗಮಿಸಿತ್ತು. ಆಸ್ತಿ ಸಂಬಂಧ ಅರ್ಜಿ ಸಲ್ಲಿಸಿ 16 ದಿನಗಳಾದರೂ ಕಂದಾಯ ಅಧಿಕಾರಿಗಳು ಮೂಲ ನಕಲು ಪ್ರತಿ ನೀಡಿರಲಿಲ್ಲ. ಹೀಗಾಗಿ, ದಂಪತಿ ನಗರದ ಬಸ್​ ನಿಲ್ದಾಣದಲ್ಲಿಯೇ ವಾಸವಾಗಿದ್ದರು.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ತಹಶೀಲ್ದಾರ್​ ಅವರು ದಂಪತಿಯನ್ನು ಕರೆಸಿ ವಿಷಯ ಆಲಿಸಿದ್ದಾರೆ. ನಂತರ ಅರ್ಜಿ ಸಲ್ಲಿಸಿದ್ದ ಜಮೀನಿನ ದಾಖಲೆಗಳನ್ನು ನೀಡಿ ಊರಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಅರ್ಜಿ ಸಲ್ಲಿಸಿ 16 ದಿನಗಳೇ ಕಳೆದವು: ಹೈದರಾಬಾದ್​ನಿಂದ ಬಂದು ಬಸ್ ನಿಲ್ದಾಣದಲ್ಲಿಯೇ ತಂಗಿದ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.