ಜಿಲ್ಲಾಡಳಿತ ನಿರ್ಬಂಧದ ನಡುವೆಯೂ ನಡೆದ ಕೊಂಡಮ್ಮ ದೇವಿ ಚೇಳಿನ ಜಾತ್ರೆ

author img

By

Published : Aug 14, 2021, 2:37 PM IST

Kondamma Devi Fair

ಕೊಂಡಮ್ಮ ದೇವಿ ಬೆಟ್ಟದಲ್ಲಿ ಜಾತ್ರೆಯ ದಿನದಂದು ಮಾತ್ರ ಚೇಳುಗಳು ಕಾಣಿಸಿಕೊಳ್ಳುತ್ತವೆ. ಅಂದು ಅವುಗಳನ್ನು ಹಿಡಿದರೂ ಕಚ್ಚುವುದಿಲ್ಲ. ಒಂದು ವೇಳೆ ಕಚ್ಚಿದರೂ ದೇವಿಯ ಭಂಡಾರ ಹಚ್ಚಿದರೆ ಸಾಕು ನೋವು ಮಾಯವಾಗುತ್ತದೆ. ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಅಂದುಕೊಂಡ ಕಾರ್ಯ ಸಾಧ್ಯವಾಗುತ್ತದೆ ಎಂಬುವುದು ಭಕ್ತರ ನಂಬಿಕೆ..

ಗುರುಮಠಕಲ್ : ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮ್ಮದೇವಿ (ಚೇಳಿನಮೂರ್ತಿ)ಯ ಜಾತ್ರೆ ಶುಕ್ರವಾರ ನಡೆಯಿತು.

ಪ್ರತಿವರ್ಷ ನಾಗರ ಪಂಚಮಿಯ ದಿನದಂದು ಗ್ರಾಮಕ್ಕೆ ಹೊಂದಿಕೊಂಡಿರುವ ಕೊಂಡಮ್ಮ ದೇವಿ ಬೆಟ್ಟ ಹತ್ತಿ ಅಲ್ಲಿನ ಕೊಂಡಮ್ಮ ದೇವಿ (ಚೇಳಿನಮೂರ್ತಿ) ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆಯುವ ಗ್ರಾಮಸ್ಥರು. ಬಳಿಕ ಬೆಟ್ಟದ ಕಲ್ಲಿನ ಅಡಿಯಲ್ಲಿರುವ ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುತ್ತಾರೆ.

ನಿರ್ಬಂಧದ ನಡುವೆಯೂ ನಡೆದ ಕೊಂಡಮ್ಮ ದೇವಿ ಜಾತ್ರೆ..

ಕೋವಿಡ್ ಹಿನ್ನೆಲೆ ಈ ಬಾರಿಯ ಕಂದಕೂರು ಕೊಂಡಮ್ಮ ದೇವಿ ಜಾತ್ರೆ ಆಚರಿಸದಂತೆ ಮತ್ತು ಗ್ರಾಮಸ್ಥರು ಬೆಟ್ಟಕ್ಕೆ ತೆರಳದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಜನ ಪ್ರತಿ ವರ್ಷದಂತೆ ಜಾತ್ರೆ ಆಚರಿಸಿದ್ದಾರೆ. ಹಾಗಾಗಿ, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕೊಂಡಮ್ಮದೇವಿ ಜಾತ್ರೆಯ ವಿಶೇಷತೆ ಎಂದರೆ, ಜನ ಚೇಳುಗಳೊಂದಿಗೆ ಆಡುವುದು. ಮೈಮೇಲೆ ಚೇಳುಗಳನ್ನು ಬಿಟ್ಟುಕೊಂಡು ಜನ ಭಕ್ತಿ ಮೆರೆಯುತ್ತಾರೆ. ಸಾಮಾನ್ಯವಾಗಿ ಚೇಳು ವಿಷಕಾರಿಯಾಗಿರುವುದರಿಂದ, ಅದು ಕಚ್ಚಿದರೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಆದರೆ, ಕೊಂಡಮ್ಮ ದೇವಿ ಬೆಟ್ಟದ ಮಣ್ಣಿನ ಗುಣದಿಂದಾಗಿ, ಇಲ್ಲಿ ಚೇಳುಗಳಲ್ಲಿ ವಿಷದ ಅಂಶ ತೀರಾ ಕಡಿಮೆ ಇದೆ. ಹಾಗಾಗಿ, ಚೇಳುಗಳು ಕಚ್ಚಿದರೂ ಸ್ವಲ್ಪ ನೋವಾಗಬಹುದೇ ಹೊರತು, ಇನ್ನೇನು ಆಗುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕೊಂಡಮ್ಮ ದೇವಿ ಬೆಟ್ಟದಲ್ಲಿ ಜಾತ್ರೆಯ ದಿನದಂದು ಮಾತ್ರ ಚೇಳುಗಳು ಕಾಣಿಸಿಕೊಳ್ಳುತ್ತವೆ. ಅಂದು ಅವುಗಳನ್ನು ಹಿಡಿದರೂ ಕಚ್ಚುವುದಿಲ್ಲ. ಒಂದು ವೇಳೆ ಕಚ್ಚಿದರೂ ದೇವಿಯ ಭಂಡಾರ ಹಚ್ಚಿದರೆ ಸಾಕು ನೋವು ಮಾಯವಾಗುತ್ತದೆ. ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಅಂದುಕೊಂಡ ಕಾರ್ಯ ಸಾಧ್ಯವಾಗುತ್ತದೆ ಎಂಬುವುದು ಭಕ್ತರ ನಂಬಿಕೆ.

ಕೊಂಡಮ್ಮ ದೇವಿ ಜಾತ್ರೆಗೆ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಯಾದಗಿರಿಯ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದು ಚೇಳುಗಳೊಂದಿಗೆ ಆಟವಾಡಿ ಸಂಭ್ರಮಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.