ವಿಜಯಪುರ: 116 ಕೆ.ಜಿ.ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದ ಯುವಕ

author img

By

Published : Aug 5, 2022, 10:54 AM IST

Achievement of Vijaypur youth

ದೇವರಹಿಪ್ಪರಗಿ ತಾಲೂಕಿನ ಪ್ರಕಾಶ್​ ಎಂಬಾತನ 116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ದೂರ ನಡೆದು ಸಾಹಸ ಮೆರೆದಿದ್ದಾನೆ.

ವಿಜಯಪುರ: ಇತ ರೀಲ್ ಬಾಹುಬಲಿ ಅಲ್ಲ, ರಿಯಲ್ ಬಾಹುಬಲಿ. 116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದುಕೊಂಡು ಹೋಗಿ ಸಾಹಸ ಮೆರೆದಿದ್ದಾನೆ.‌ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿ ಚಿಕ್ಕರೋಗಿ ಗ್ರಾಮದ ಪ್ರಕಾಶ ಬೈರವಾಡಗಿ ಈ ಸಾಧನೆ ಮಾಡಿದ ಯುವಕ.

116 ಕೆ.ಜಿ.ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದ ಯುವಕ

ದೇವರಹಿಪ್ಪರಗಿ ತಾಲೂಕಿನ ಮುಳ ಸಾವಳಗಿ ಕ್ರಾಸ್​​ನಿಂದ ಚಿಕ್ಕರೂಗಿ ಗ್ರಾಮದವರೆಗೆ ಗೋಧಿ ಮೂಟೆ ಹೊತ್ತು ನಡೆದ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇವರ ಸಾಧನೆಗೆ ಸ್ನೇಹಿತರು ದಾರಿ ಉದ್ಧಕ್ಕೂ ಟವೆಲ್​​ನಿಂದ ಗಾಳಿ ಬೀಸಿ ಸಾಥ್​ ನೀಡಿದ್ದಾರೆ. ಅಲ್ಲದೇ ಹಲಗೆ, ತಮಟೆ ಬಾರಿಸುತ್ತಾ ಹುರಿದುಂಬಿದ್ದಾರೆ.‌ ಬಳಿಕ ಸಾಧನೆ ಮಾಡಿದ ಪ್ರಕಾಶ್​​ಗೆ 50 ಗ್ರಾಂ ಬೆಳ್ಳಿ ಕಡಗವನ್ನು ಆತನ ಗೆಳೆಯರು ಕೈಗೆ ಹಾಕಿದ್ದಾರೆ.

ಇದನ್ನೂ ಓದಿ: ಶಿವ - ಕಾಳಿ ಮಾತೆ ಆಕ್ಷೇಪಾರ್ಹ ಫೋಟೋ: ನಿಯತಕಾಲಿಕೆ ವಿರುದ್ಧ ಬಿಜೆಪಿ ಮುಂಖಂಡನ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.