ಥರ್ಮಾಕೋಲ್​​ನಿಂದ ರಾಮ ಮಂದಿರ ನಿರ್ಮಿಸಿ ಗಮನ ಸೆಳೆದ ವಿಜಯಪುರದ ಬಾಲಕ

author img

By

Published : Sep 15, 2021, 11:39 PM IST

Boy who built the Ram Mandir from Thermocol

ಥರ್ಮಾಕೋಲ್​​ನಿಂದ ರಾಮ ಮಂದಿರ ನಿರ್ಮಿಸಿ ವಿಜಯಪುರದ ಬಾಲಕನೋರ್ವ ಎಲ್ಲರ ಗಮನ ಸೆಳೆದಿದ್ದಾನೆ.

ವಿಜಯಪುರ: ಗುಮ್ಮಟ ನಗರಿಯ 17 ವರ್ಷದ ಬಾಲಕನೋರ್ವ ತಾನು ದುಡಿದ ಹಣದಲ್ಲಿ ಥರ್ಮಾಕೋಲ್​​ನಿಂದ ರಾಮ ಮಂದಿರ ನಿರ್ಮಿಸಿ ಮುಖ್ಯದ್ವಾರದ ಮೇಲೆ ಶ್ರೀರಾಮ ವೇಷಧಾರಿ ಗಣೇಶನ ಮಾದರಿ ಪ್ರತಿಷ್ಠಾಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಥರ್ಮಾಕೋಲ್​​ನಿಂದ ರಾಮ ಮಂದಿರ ನಿರ್ಮಿಸಿ ಗಮನ ಸೆಳೆದ ವಿಜಯಪುರದ ಬಾಲಕ

ಪ್ರತಿ ವರ್ಷ ವಿಠ್ಠಲ ಗಜಾನನ ಮಂಡಳಿ ವಿಜಯಪುರದ ಖಾಜಾಮಿನ ಜೈಲ್ ದರ್ಗಾದ ವಿಠ್ಠಲ ಮಂದಿರದಲ್ಲಿ ವಿನೂತನವಾಗಿ ಮೂರ್ತಿ ಪ್ರತಿಷ್ಠಾಪಿಸುತ್ತಿತ್ತು. ಆದರೆ ಈ ಬಾರಿ ಟ್ರೈಲರಿಂಗ್​ ವೃತ್ತಿ ಮಾಡಿದ್ದ 17 ವರ್ಷದ ಬಾಲಕ ಶಂಕರ ಸುರೇಶ ಪೂಜಾರ ಎಂಬುವನು ಗಣೇಶ ಪ್ರತಿಷ್ಠಾಪನೆಗೆ ಅಯೋಧ್ಯೆ‌ ಮಂದಿರ ಮಾದರಿ ನಿರ್ಮಿಸುವುದಾಗಿ ಹಿರಿಯರ ಅಪ್ಪಣೆ ಪಡೆದಿದ್ದ. ಕಳೆದ ಮೂರು ತಿಂಗಳಿಂದ ಬಟ್ಟೆ ಹೊಲಿದ ಹಣ ಜೋಡಿಸಿ ಥರ್ಮಾಕೋಲ್ ತಂದು ಮನೆಯಲ್ಲಿ 5 ಅಡಿ ಎತ್ತರ ಹಾಗೂ 7 ಅಡಿ ಅಗಲವುಳ್ಳ ರಾಮ ಮಂದಿರ ನಿರ್ಮಿಸಿದ್ದಾನೆ.

Boy who built the Ram Mandir from Thermocol
ಥರ್ಮಾಕೋಲ್​​ನಿಂದ ನಿರ್ಮಾಣವಾದ ರಾಮ ಮಂದಿರ

ಇದಕ್ಕೆ 3 ಸಾವಿರರೂ. ಖರ್ಚು ಮಾಡಿದ್ದಾನೆ. ಇದರ ಜತೆ ಇತನ ಸಹೋದರ ಅಲ್ಪಸ್ಪಲ್ಪ ಸಹಾಯ ಮಾಡಿದ್ದಾನೆ.‌ ಇವರ ತಂದೆ ಸುರೇಶ ಓರ್ವ ಕಲಾವಿದ. ಶಿವಾಜಿ ಸರ್ಕಲ್​​ನಲ್ಲಿರುವ ಶಿವಾಜಿ ಪ್ರತಿಮೆ ತಯಾರಿಸಲು ಇವರದ್ದು ಅಲ್ಪ ಕಾಣಿಕೆ ಇದೆ. ಸದ್ಯ ಈ ರಾಮ ಮಂದಿರ ನೋಡಲು ದೂರ‌ ಕಡೆಯಿಂದ ಜನರು ಬರುತ್ತಿರುವುದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.