ಮೂರು ವರ್ಷಗಳಲ್ಲಿ ಐದು ನೂರಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಿದ ಭಾಷಾಸಾಬ್‌

author img

By

Published : Sep 15, 2022, 5:49 PM IST

KN_15_1_M

ಕಳೆದ ಮೂರು ವರ್ಷಗಳಲ್ಲಿ ಹಾವು ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಯುವಕ ಈ ವರೆಗೂ 500ಕ್ಕೂ ಹೆಚ್ಚು ಹಾವುಗಳನ್ನ ರಕ್ಷಣೆ ಮಾಡಿದ್ದಾರೆ

ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಯುವಕರೊಬ್ಬರು ಕಳೆದ ಮೂರು ವರ್ಷಗಳಿಂದ ಹಾವುಗಳನ್ನು ರಕ್ಷಣೆ ಮಾಡುವ ಮತ್ತು ಹಾವಿನ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳಲ್ಲಿ 500ಕ್ಕೂ ಹೆಚ್ಚು ಹಾವುಗಳನ್ನ ರಕ್ಷಣೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉರಗ ರಕ್ಷಕ ಭಾಷಾಸಾಬ್‌

ಭಾಷಾಸಾಬ್ ಎಂಬುವವರು ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡವರು. ಭಾಷಾಸಾಬ್​ ಅವರ ದೊಡ್ಡಪ್ಪ ಹಾಗೂ ದೊಡ್ಡಪ್ಪನ ಮಗ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದರು. ಅಂದಿನಿಂದ ಹಾವುಗಳ ರಕ್ಷಣೆ ಕಾರ್ಯಕ್ಕೆ ಮುಂದಾಗಿರುವ ಭಾಷಾಸಾಬ್​ ನಾಗರಹಾವು, ಗರಗಸ ಹಾವು, ಕೊಳಕು ಮಂಡಲ ಹಾವು ಸೇರಿದಂತೆ 500ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಹಾವನ್ನು ರಕ್ಷಣೆ ಮಾಡುವ ಮತ್ತು ಅವುಗಳನ್ನು ಹಿಡಿಯುವ ಕುರಿತು ಸಂಪೂರ್ಣ ಅಧ್ಯಯನ ನಡೆಸಿ ರಕ್ಷಣೆ ಕಾರ್ಯ ಪ್ರಾರಂಭಿಸಿರುವುದಾಗಿ ಭಾಷಾ ತಿಳಿಸಿದ್ದಾರೆ.

ತಂಗಡಗಿ ಭಾಗದಲ್ಲಿ ಸ್ನೇಕ್ ಭಾಷಾಸಾಬ್ ಎಂದೇ ಹೆಸರು ಮಾಡಿರುವ ಅವರು, ಹಾವಿನ ರಕ್ಷಣೆ ಕಾರ್ಯಕ್ಕೆ ಕೆಲವು ಸಾಮಗ್ರಿಗಳ ಅವಶ್ಯಕತೆ ಇದ್ದು, ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಅವರಿಗೆ ನೆರವು ಕೊಡುವ ಕಾರ್ಯ ಮಾಡಬೇಕಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸ್ನೇಕ್ ಭಾಷಾಸಾಬ್ ಅವರ ಮೊಬೈಲ್​ ಸಂಖ್ಯೆ: 8296683377

ಇದನ್ನೂ ಓದಿ: ಪೊಲೀಸ್ ಠಾಣೆಗೆ ಹಾವುಗಳ ರಕ್ಷಣೆ: ಇಡುಕ್ಕಿಯಲ್ಲೊಂದು ಅಚ್ಚರಿ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.