ಪೊಲೀಸರನ್ನು ಕೇಸರೀಕರಣ ಮಾಡಿರುವುದಕ್ಕೆ ಆಕ್ಷೇಪಿಸಿದ್ದೇನೆ ಅಷ್ಟೇ: ಸಿದ್ದರಾಮಯ್ಯ

author img

By

Published : Oct 18, 2021, 1:19 PM IST

Updated : Oct 18, 2021, 2:13 PM IST

Siddaramaiah reaction about His statement

ಸರ್ಕಾರಿ ಅಧಿಕಾರಿಗಳಾಗಿ ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ, ಶಾಲು ಧರಿಸಿದ್ದು ತಪ್ಪು. ಅದರ ಬದಲಿಗೆ ಬೇರೆ ಯಾವುದೇ ಬಟ್ಟೆ ಹಾಕಿಕೊಂಡಿದ್ದರೂ ಸಹ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ ಎಂದು ತಮ್ಮ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ: ರಾಜ್ಯದ ಕಾಪು ಹಾಗೂ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆಯ ದಿನ ಪೊಲೀಸರು ಕೇಸರಿ ಬಟ್ಟೆ ಧರಿಸಿರುವುದನ್ನು ನಾನು ವಿರೋಧ ಮಾಡಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್​ ಮನಗೂಳಿ ಪರ ಚುನಾವಣೆ ಪ್ರಚಾರಕ್ಕೆ ಮೋರಟಗಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿದ್ದರಾಮಯ್ಯ

ಸರ್ಕಾರಿ ಅಧಿಕಾರಿಗಳಾಗಿ ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ, ಶಾಲು ಧರಿಸಿದ್ದು ತಪ್ಪು. ಅದರ ಬದಲಿಗೆ ಬೇರೆ ಯಾವುದೇ ಬಟ್ಟೆ ಹಾಕಿಕೊಂಡಿದ್ದರೂ ಸಹ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಪೊಲೀಸರನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ. ಹಾಗೆ ಮಾಡಲು ಬರುವುದಿಲ್ಲ. ಆರ್​ಎಸ್​ಎಸ್‌ನವರು ಏನಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ನೌಕರರನ್ನು ಈ ರೀತಿ ಕೇಸರಿಕರಣ ಮಾಡಬಾರದು ಎಂದು ಹೇಳಿದರು.

ಇದನ್ನೂ ಓದಿ: ಪೊಲೀಸರ ದಿರಿಸು ಯಾಕೆ ಬದಲಾಯಿಸಿದಿರಿ, ಕೈಗೆ ತ್ರಿಶೂಲ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ.. ಸಿಎಂಗೆ ಸಿದ್ದು ಟ್ವೀಟಾಸ್ತ್ರ

Last Updated :Oct 18, 2021, 2:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.