ಒಂದೇ ಒಂದು ಪೋನ್​ ಕರೆಗೆ ಐಪಿಎಸ್​ಗೆ ಬಡ್ತಿ: ಯತ್ನಾಳ್​

author img

By

Published : Dec 5, 2022, 6:32 PM IST

Updated : Dec 5, 2022, 6:38 PM IST

Promoted to IPS for a single phone call

ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಫೋನ್ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಐಪಿಎಸ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ವಿಜಯಪುರ: ಒಬ್ಬ ಪೊಲೀಸ್ ಅಧಿಕಾರಿಗೆ 6 ತಿಂಗಳ ಹಿಂದೆಯೇ ಐಪಿಎಸ್ ಬಡ್ತಿ ಹೊಂದಬೇಕಾಗಿತ್ತು. ಐಪಿಎಸ್ ಬಡ್ತಿ ನೀಡದೇ ಅವರನ್ನು ಸತಾಯಿಸಲಾಗುತ್ತಿತ್ತು. ಈ ವಿಷಯ ತಿಳಿದು ನಾನು ಫೋನ್ ಮಾಡಿ ಹೇಳಿದ ಮೇಲೆ ಗೃಹ ಸಚಿವರು ತಕ್ಷಣವೇ ಫೈಲ್ ಕ್ಲಿಯರ್ ಮಾಡಿದರು ಎಂದು ಬಸವನಗೌಡ ಪಾಟಿಲ್​ ಯತ್ನಾಳ್​ ಹೇಳಿದ್ದಾರೆ.

ಜಿಲ್ಲೆಯಲ್ಲಿ ನಡೆದ ಪಂಚಮಸಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬಹಳ ಜನ ಪ್ರಯತ್ನ ನಡೆಸಿದ್ದರು. ಆದರೆ, ಅದು ಅವರಿಂದ ಸಾಧ್ಯವಾಗಲಿಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಟಾಂಗ್ ಸಹ ನೀಡಿದರು.

ಶಾಸಕ ಬಸವನ ಗೌಡ ಪಾಟೀಲ್​ ಯತ್ನಾಳ್​

ಜನ ಅಭಿವೃದ್ಧಿ ನೋಡಿ ವೋಟ್​ ಹಾಕಿದರು: ನೀವು ರಾಜಕೀಯ ಏನೇ ಮಾಡಿದರು, ಉತ್ತಮ‌ ರಸ್ತೆ, ಕುಡಿಯುವ ನೀರಿನ ಸೌಲಭ್ಯ ನೀಡಿದ್ದೀರಿ ಎನ್ನುವ ಕಾರಣ ಜನ ಬೆಂಬಲಿಸಿ ಮತವನ್ನು ನೀಡುತ್ತಾರೆ ಎಂದು ಹೇಳಿದರು

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕಕ್ಕೆ ಬರಲು ಬಿಡುವುದಿಲ್ಲ: ಸಚಿವ ಆರ್.ಅಶೋಕ್

Last Updated :Dec 5, 2022, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.