ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಬಿ ಎಮ್ ಪಾಟೀಲ ಒತ್ತಾಯ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಬಿ ಎಮ್ ಪಾಟೀಲ ಒತ್ತಾಯ
ಪಂಚಮಸಾಲಿ ಸಮುದಾಯಕ್ಕೆ ಡಿಸೆಂಬರ್ 12 ರಿಂದ 19 ರ ಒಳಗೆ ಹಿಂದುಳಿದ ವರ್ಗದ ಆಯೋಗದಿಂದ ವರದಿ ತರಿಸಿಕೊಂಡು, 2 ಎ ಮೀಸಲಾತಿ ನೀಡಬೇಕು, ಇಲ್ಲದಿದ್ದರೆ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಬಿ ಎಮ್ ಪಾಟೀಲ ಹೇಳಿದರು.
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಡಿಸೆಂಬರ್ 12 ರಿಂದ 19 ರ ಒಳಗೆ ಹಿಂದುಳಿದ ವರ್ಗದ ಆಯೋಗದಿಂದ ವರದಿ ತರಿಸಿಕೊಂಡು, 2 ಎ ಮೀಸಲಾತಿ ನೀಡಬೇಕು, ಇಲ್ಲದಿದ್ದರೆ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಬಿ ಎಮ್ ಪಾಟೀಲ ಹೇಳಿದರು.
ಈ ಕುರಿತು ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಬಿ ಎಮ್ ಪಾಟೀಲ ಮಾತನಾಡುತ್ತ ಡಿಸೆಂಬರ್ 19 ರ ಒಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಸಿಎಂ ಘೋಷಣೆ ಮಾಡದೇ ಇದ್ದರೆ, ಬೆಳಗಾವಿ ಸುವರ್ಣ ಸೌಧದ ಮುಂದು ಡಿಸೆಂಬರ್ 22 ರಂದು 25 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದರು.
ಒಂದು ವೇಳೆ ಮೀಸಲಾತಿ ನೀಡಿದರೆ ಅದೇ ಡಿಸೆಂಬರ್ 22 ರಂದು ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಪಂಚಮಸಾಲಿ ಸಮುದಾಯವನ್ನು ಇನ್ನಷ್ಟು ಸಂಘಟಿಸುವ ನಿಟ್ಟಿನಲ್ಲಿ ಇಂದು ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಗೌರವ ಅಧ್ಯಕ್ಷರನ್ನು ನೇಮಕ ಮಾಡಿ ಅವರಿಗೆ ಆದೇಶ ಪ್ರತಿಗಳನ್ನು ಕೊಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ
