ಮಗನ ಸಾವಿನ ವಿಷಯ ತಿಳಿದು ಜೀವ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ..
Published on: Nov 30, 2022, 10:49 PM IST

ಮಗನ ಸಾವಿನ ವಿಷಯ ತಿಳಿದು ಜೀವ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ..
Published on: Nov 30, 2022, 10:49 PM IST
ಮಗನ ಸಾವಿನ ವಿಷಯ ತಿಳಿದು ಗಂಟೆಯೊಳಗಡೆ ತಾಯಿ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ: ಮಗನ ಸಾವಿನ ವಿಷಯ ತಿಳಿದು ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂಡಿ ತಾಲೂಕಿನ ತಡವಲ ಗ್ರಾಮದಲ್ಲಿ ನಡೆದಿದೆ.
ಮಗ ಶರಣಪ್ಪ ಚನ್ನಮಲ್ಲಪ್ಪ ರೂಗಿ (48), ಸುಗಲಾಬಾಯಿ ಚನ್ನಮಲ್ಲಪ್ಪ ರೂಗಿ (65) ಮೃತರು. ಇಂದು ಸಂಜೆ ಅನಾರೋಗ್ಯದಿಂದ ಮಗ ಶರಣಪ್ಪ ಮೃತಪಟ್ಟಿರುತ್ತಾರೆ. ಇನ್ನು ವಿಷಯ ತಿಳಿದು ಒಂದು ಗಂಟೆಯಲ್ಲೇ ತಾಯಿ ಸುಗಲಾಬಾಯಿ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು ಗ್ರಾಮಸ್ಥರು ಸಹ ತಾಯಿ ಮಗನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವು

Loading...