ಮಾಜಾಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಟೈಗರ್ಸ್ ಶಾರ್ಕ್ ಕಳೆಬರ ಪತ್ತೆ

author img

By

Published : Sep 21, 2021, 10:25 PM IST

ಟೈಗರ್ಸ್ ಶಾರ್ಕ್ ಕಳೆಬರ ಪತ್ತೆ

ತಿಮಿಂಗಲ, ಮನುಷ್ಯರು ಸೇರಿ ಇನ್ನಿತರ ಸಮುದ್ರ ಜೀವಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಟೈಗರ್ ಶಾರ್ಕ್ ಈಗ ಅಳಿವಿನಂಚಿನಲ್ಲಿರುವ ಮೀನು ಎಂದು ಕೆಂಪು ಪುಸ್ತಕದಲ್ಲಿ ದಾಖಲಿಸಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್​ಗೆ ಭಾರೀ ಬೇಡಿಕೆ ಇದ್ದು, ಇದರ ಸೂಪ್ ಮಾಡಿ ಅಲ್ಲಿನ ಜನ ಸೇವನೆ ಮಾಡುತ್ತಾರಂತೆ..

ಕಾರವಾರ : ದುಬಾರಿ ಬೆಲೆಯ ಹಾಗೂ ಅಳಿವಿನಂಚಿನಲ್ಲಿರುವ ಟೈಗರ್ಸ್ ಶಾರ್ಕ್ ಕಳೆಬರವೊಂದು ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಮಂಗಳವಾರ ಪತ್ತೆಯಾಗಿದೆ.

ಮಾಜಾಳಿ ಕಡಲತೀರದಲ್ಲಿ ಟೈಗರ್ಸ್ ಶಾರ್ಕ್ ಕಳೆಬರ ಪತ್ತೆ..

ಎರಡು ಮೀಟರ್ ಉದ್ದದ ಸುಮಾರು 30 ಕೆಜಿ ತೂಕದ ಹೆಣ್ಣು ಟೈಗರ್ ಶಾರ್ಕ್​ ಇದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದೆಯಾದರೂ ಸ್ಥಳೀಯರು ಮಾತ್ರ ರುಚಿಯಾಗಿಲ್ಲ ಎಂಬ ಕಾರಣಕ್ಕೆ ತಿನ್ನಲು ಇಷ್ಟಪಡುವುದಿಲ್ಲವಂತೆ. ಆದರೆ, ಶಾರ್ಕ್ ಮೀನಿನ ಇತರೆ ಪ್ರಭೇದದ ಮೀನುಗಳನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆಜಿ ತೂಕ ಹಾಗೂ 6 ಮೀಟರ್ ಉದ್ದದವರೆಗೂ ಬೆಳೆಯುತ್ತದೆ. ಇವುಗಳು 30 ರಿಂದ 40 ವರ್ಷದವರೆಗೆ ಜೀವಿಸುತ್ತವೆ. ಸಮುದ್ರದ ಬಲಿಷ್ಠ ಮೀನುಗಳಲ್ಲಿ ಒಂದಾಗಿದೆ.

ತಿಮಿಂಗಲ, ಮನುಷ್ಯರು ಸೇರಿ ಇನ್ನಿತರ ಸಮುದ್ರ ಜೀವಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಟೈಗರ್ ಶಾರ್ಕ್ ಈಗ ಅಳಿವಿನಂಚಿನಲ್ಲಿರುವ ಮೀನು ಎಂದು ಕೆಂಪು ಪುಸ್ತಕದಲ್ಲಿ ದಾಖಲಿಸಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್​ಗೆ ಭಾರೀ ಬೇಡಿಕೆ ಇದ್ದು, ಇದರ ಸೂಪ್ ಮಾಡಿ ಅಲ್ಲಿನ ಜನ ಸೇವನೆ ಮಾಡುತ್ತಾರಂತೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.