ಗಾಂಧಿ ಜಯಂತಿಯಂದು 2 ಟನ್ ಗೋಮಾಂಸ ಸಾಗಣೆ: ಕಾರವಾರದಲ್ಲಿ ಐವರು ಆರೋಪಿಗಳ ಬಂಧನ

author img

By

Published : Oct 3, 2022, 6:46 AM IST

ಐವರು ಆರೋಪಿಗಳ ಬಂಧನ

ಅಕ್ರಮವಾಗಿ 2,220 ಕೆ.ಜಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ ಬಳಿ ಪೊಲೀಸರು ಬಂಧಿಸಿದ್ದಾರೆ.

ಕಾರವಾರ(ಉತ್ತರ ಕನ್ನಡ): ಹುಬ್ಬಳ್ಳಿಯಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮೂರು ವಾಹನಗಳ ಸಮೇತ ಬಂಧಿಸಿರುವ ಘಟನೆ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ನಲ್ಲಿ ಭಾನುವಾರ ನಡೆದಿದೆ.

ಹುಬ್ಬಳ್ಳಿಯಿಂದ ಗೋವಾ ಕಡೆಗೆ ಹಸುಗಳನ್ನು ವಧೆ ಮಾಡಿ ಮಾಂಸವನ್ನು ಎರಡು ಮಹೀಂದ್ರ ಬುಲೆರೋ ಪಿಕಪ್ ಹಾಗೂ ಒಂದು ಟಾಟಾ 407 ವಾಹನದಲ್ಲಿ ಗೋವಾಕ್ಕೆ ಸಾಗಿಸುತ್ತಿದ್ದ ಬಗ್ಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಪನ್ನೇಕರ್ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು.‌ ಅದರಂತೆ ಪಿಎಸ್‌ಐ ಪ್ರಮೇನಗೌಡ ಪಾಟೀಲ ನೇತೃತ್ವದಲ್ಲಿ ರಾಮನಗರ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಮತ್ತು ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ

ನಿನ್ನೆ ಬೆಳಗ್ಗೆ 5.30ರ ಸುಮಾರಿಗೆ ಪೊಲೀಸ್ ತಂಡ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ ಬಳಿ ಕಾಯುತ್ತಿದ್ದ ವೇಳೆ ಮಾಂಸ ತುಂಬಿಕೊಂಡಿದ್ದ ಮೂರು ವಾಹನಗಳು ಒಂದರ ಮೇಲೊಂದರಂತೆ ಬಂದಿದೆ. ಈ ವೇಳೆ ತಡೆದು ಪರಿಶೀಲಿಸಿದಾಗ ತಮ್ಮ ಬಳಿ ಮಾಂಸ ಸಾಗಣೆಯ ಪರವಾನಗಿ ಇದೆ ಎಂದು ಆರೋಪಿತರು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ.

transport beef illegally
ಮೂರು ವಾಹನಗಳು ಪೊಲೀಸ್​ ವಶಕ್ಕೆ

ತಕ್ಷಣ ಮೂರೂ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಮೂರರಿಂದಲೂ 3.10 ಲಕ್ಷ ರೂ. ಮೌಲ್ಯದ 2,220 ಕೆ.ಜಿ ದನದ ಮಾಂಸ ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಅಳ್ನಾವರದ ಸಾದಿಕ್, ಇಲಿಯಾಸ್, ದಾವಲ್, ಖಾನಾಪುರದ ರಾಜಾಸಾಬ ಹಾಗೂ ಶಾಹೀದ್ ಗೂಡುಸಾಬ ಎಂಬುರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ- 2020ರ ಕಲಂ 4, 7, 12 ಮತ್ತು ಮೋಟಾರು ವಾಹನ ಕಾಯ್ದೆ 192 (ಎ) ಅಡಿಯಲ್ಲಿ ರಾಮನಗರ ಪೊಲೀಸ್ ಠಾಣೆಯ ತನಿಖಾ ಪಿಎಸ್‌ಐ ಲಕ್ಷ್ಮಣ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಾಗರ : ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದವನ ಬಂಧನ..

ಗಾಂಧಿ ಜಯಂತಿಯಂದು ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟ ನಿಷೇಧವಿರುತ್ತದೆ. ಹೀಗಾಗಿ, ಮೊನ್ನೆ ತಡರಾತ್ರಿಯೇ ಹಸುಗಳನ್ನು ಹುಬ್ಬಳ್ಳಿಯಲ್ಲಿ ವಧೆ ಮಾಡಿ, ನಿನ್ನೆ ಗಾಂಧಿ ಜಯಂತಿ ಆಗಿರುವುದರಿಂದ ಮಾಂಸದ ಬಗ್ಗೆ ಯಾರಿಗೂ ಅನುಮಾನ ಬರಲಿಕ್ಕಿಲ್ಲ ಎಂಬ ಆಲೋಚನೆಯಲ್ಲಿ ಆರೋಪಿಗಳು ಮಾಂಸ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಅದರಲ್ಲೂ, ಹುಬ್ಬಳ್ಳಿ ಭಾಗದಿಂದ ಗೋವಾಕ್ಕೆ ತರಕಾರಿ ವಾಹನಗಳು ನಿರಂತರವಾಗಿ ಓಡಾಡುತ್ತಿರುವೆ. ಭಾನುವಾರ ಈ ವಾಹನಗಳ ಸಂಖ್ಯೆ ಕೊಂಚ ಹೆಚ್ಚೇ ಇರುತ್ತದೆ. ಈ ನೆಪದಲ್ಲೂ ಮಾಂಸ ಸಾಗಿಸಲಾಗುತ್ತಿದ್ದರು ಎನ್ನಾಲಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.