ಮಲ್ಪೆ ಬಂದರಿನಲ್ಲಿ ಪತ್ತೆಯಾದ ಅಪರೂಪದ 'ನೆಮ್ಮೀನ್'ಗೆ ಕೇರಳಿಗರಿಂದ ಬೇಡಿಕೆ

author img

By

Published : Oct 5, 2021, 8:58 AM IST

Updated : Oct 5, 2021, 9:08 AM IST

Neymeen Fish

ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ನೆಮ್ಮೀನ್ ಎಂಬ ಅಪರೂಪದ ಮೀನು ಪತ್ತೆಯಾಗಿದ್ದು, ಕೇರಳ ಮೂಲದವರು ಇದನ್ನು ಕೆ.ಜಿಗೆ ರೂ. 50ರಂತೆ ಖರೀದಿ ಮಾಡಿದ್ದಾರೆ.

ಉಡುಪಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಭಾರಿ ಗಾತ್ರದ ಅಪರೂಪದ ಮೀನು ಪತ್ತೆಯಾಗಿದೆ. ಉಡುಪಿಯ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟಿಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್​ನ ಬಲೆಗೆ ಈ ಮೀನು ಬಿದ್ದಿದೆ.

ಅಪರೂಪದ 'ನೆಮ್ಮೀನ್' ಮೀನು

ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದ್ದು, ಹೆಲಿಕಾಪ್ಟರ್ ಫಿಶ್ ಎಂದೂ ಸಹ ಕರೆಯಲಾಗುತ್ತದೆ. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ರುಚಿ ಇಷ್ಟವಾಗುವುದಿಲ್ಲ. ಹೀಗಾಗಿ ಈ ಮೀನನ್ನು ಕೇರಳ ಮೂಲದವರು ಕೆ.ಜಿಗೆ ರೂ. 50ರಂತೆ ಖರೀದಿ ಮಾಡಿದ್ದಾರೆ.

ಈ ಮೀನಿನ ಬೆನ್ನಿನ ಮೇಲೆ ಅಗಲಗಲ ರೆಕ್ಕೆಯಿದ್ದು, ಬರೋಬ್ಬರಿ 84 ಕೆ.ಜಿ ತೂಕ ಇರುತ್ತದೆ.

Last Updated :Oct 5, 2021, 9:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.