ಪ್ರಥಮ ಪಿಯುಸಿ ಆಂಗ್ಲಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆ; ಮಾರ್ಚ್​ 6ಕ್ಕೆ ಎಕ್ಸಾಮ್​ ಮುಂದೂಡಿಕೆ

author img

By

Published : Feb 21, 2023, 11:22 AM IST

paper

ಪ್ರಥಮ ಪಿಯುಸಿ ಆಂಗ್ಲಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆ- ಮಾರ್ಚ್​ 6ಕ್ಕೆ ಎಕ್ಸಾಮ್​ ಮುಂದೂಡಿಕೆ- ಸೈಬರ್ ಠಾಣೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ದೂರು

ತುಮಕೂರು: ಪ್ರಥಮ ಪಿಯುಸಿ ಆಂಗ್ಲಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಆಂಗ್ಲ ಭಾಷೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ ಆರಂಭವಾಗಿದ್ದ ಪ್ರಥಮ ಪಿಯುಸಿ ಪರೀಕ್ಷೆಗಳು, ಇಂದು ನಡೆಯಬೇಕಿದ್ದ ಆಂಗ್ಲಭಾಷೆ ಪರೀಕ್ಷೆಯನ್ನು ಮಾರ್ಚ್​ 6ಕ್ಕೆ ಮುಂದೂಡಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಾಟ್ಸಾಪ್​ಗಳಲ್ಲಿ ಹರಿದಾಡುತಿತ್ತು ಎಂಬ ವದಂತಿ ಹಿನ್ನೆಲೆ, ತನಿಖೆಗೆ ಹಿರಿಯ ಪ್ರಾಂಶುಪಾಲರ ನೇತೃತ್ವದಲ್ಲಿ ತ್ರಿ ಸದಸ್ಯರ ಕಮಿಟಿ ರಚನೆ ಮಾಡಲಾಗಿತ್ತು. ಇದೀಗ ಪರೀಕ್ಷೆಯನ್ನು ಮಾರ್ಚ್​ 6ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಲಾಗಿದೆ. ಸೈಬರ್ ಠಾಣೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ದೂರು ನೀಡಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸೇವಾ ಆಯೋಗದ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಸರ್ಕಾರದ ವಿರುದ್ಧ ಹೋರಾಟದಲ್ಲಿ 4 ಜನ ಅಧಿಕಾರಿಯೊಂದಿಗೆ 10 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.