ಭೂಸ್ವಾಧೀನ ಕಚೇರಿಗೆ ಬೀಗ ಹಾಕಿ ರೈತರ ಪ್ರತಿಭಟನೆ

author img

By

Published : Oct 1, 2019, 2:20 PM IST

ನೋಟಿಸ್​ ನೀಡಿಲ್ಲ ಅತ್ತ ಪರಿಹಾರವೂ ಇಲ್ಲ. ಇದ್ದ ಜಮೀನು ಬಿಟ್ಟು ಹೋಗುವಂತೆ ಅಧಿಕಾರಿಗಳ ಎಚ್ಚರಿಕೆ. ಇದರಿಂದ ಆಕ್ರೋಶಗೊಂಡ ರೈತರು ಭೂಸ್ವಾಧೀನ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್​ನಲ್ಲಿ ನಡೆದಿದೆ.

ತುಮಕೂರು: ತಾಲೂಕಿನ ಕುಣಿಗಲ್​ನ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ದಿಢೀರ್​ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘಟನೆ.

ರಾಜ್ಯ ರೈತ ಸಂಘದಿಂದ ಭೂಸ್ವಾಧೀನಾಧಿಕಾರಿ ಕಚೇರಿ ಬೀಗ ಹಾಕಿ, ಪ್ರತಿಭಟನೆ

ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ, ನ್ಯಾಯ ಕೊಡಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಸಮಾಧಾನ ಪಡಿಸುವಲ್ಲಿ ಪೊಲೀಸ್​ ವಿಫಲ ಯತ್ನ ನಡೆಸಿದ ಘಟನೆ ನಡೆಯಿತು.

ನೋಟಿಸ್​ ಕೊಡದೆ, ಪರಿಹಾರವನ್ನು ಸೂಚಿಸದೇ ಜಮೀನು ಬಿಟ್ಟು ಹೋಗುವಂತೆ ಅಧಿಕಾರಿಗಳ ಎಚ್ಚರಿಕೆ ನೀಡಿದ್ದರಿಂದ ಆಕ್ರೋಶಗೊಂಡ ರೈತರು ಭೂಸ್ವಾಧೀನ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.

Intro:ತುಮಕೂರು: ಕುಣಿಗಲ್ ತಾಲೂಕಿನಲ್ಲಿ ಹೇಮಾವತಿ ಚಾನೆಲ್ ಮಾಡುವ ನಿಟ್ಟಿನಲ್ಲಿ ಏಕಾಏಕಿ ರೈತರ ಜಮೀನಿಗೆ ಪ್ರವೇಶ ಮಾಡಿ ಯಾವುದೇ ನೋಟಿಸ್ ನೀಡದೆ ಪರಿಹಾರ ನೀಡದೆ ಮನಸೋಇಚ್ಛೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಹೇಮಾವತಿ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೀಲ್ ಆರೋಪಿಸಿದರು.


Body:ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳಿಗೆ ಆಕ್ರೋಶಗೊಂಡ ರೈತರು ಕಚೇರಿಗೆ ಬೀಗ ಜಡಿದು ದಿಡೀರ್ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ತುಮಕೂರು, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ರೈತರು ಸರಿಯಾದ ಪರಿಹಾರ ಸಿಗದೆ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ ಕೆಲಸ ಮಾಡುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಾರೆ ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರಿಸುತ್ತಾರೆ. ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಇದನ್ನು ಸರಿಪಡಿಸದೆ ಹೋದರೆ ಉಗ್ರವಾದ ಹೋರಾಟಕ್ಕೆ ಮುಂದಾಗಲಾಗುವುದು ಎಂದರು.
ಬೈಟ್: ಕೆಂಕೆರೆ ಸತೀಶ್,‌ ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಕಳೆದ ಏಳು ವರ್ಷಗಳಿಂದ ಕಾಮಗಾರಿ ನೆಪದಲ್ಲಿ ರೈತರ ಜಮೀನುಗಳನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಯಾವುದೇ ಭೂಸ್ವಾಧೀನಾಧಿಕಾರಿಗಳು ಪತ್ರವ್ಯವಹಾರ ಮಾಡದೆ ಕೇವಲ ಮಾತುಕತೆಯಲ್ಲಿ ಮಾತನಾಡಿ ರೈತರನ್ನು ಬೆದರಿಸಿ ಜಮೀನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅಂದು ಯಾವುದೇ ರೀತಿಯ ಸರ್ವೇ ಮಾಡಿಲ್ಲ ಜಮೀನಿನಲ್ಲಿ ಎಷ್ಟು ತೆಂಗಿನ ಮರಗಳು ಇದ್ದವು ಇತರ ಜಾತಿಯ ಮರಗಳು ಎಷ್ಟು ಇದ್ದವು ಎಂಬುದನ್ನು ಕೂಡ ಸರಿಯಾಗಿ ಸರ್ವೆ ಮಾಡದೆ ಕಾಮಗಾರಿ ಮಾಡಿಸಿದ್ದಾರೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ನೀಡಲು ಸರ್ಕಾರದಲ್ಲಿ ಹಣ ಇರುತ್ತದೆ ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ಮಾತ್ರ ಹಣ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಟ್: ಆನಂದ್ ಪಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ


Conclusion:ಈ ಹಿಂದೆ ಇದ್ದಂತಹ ಭೂಸ್ವಾಧೀನಾಧಿಕಾರಿಗಳು ರೈತರೊಂದಿಗೆ ಮಾತನಾಡಿ ಕಾಮಗಾರಿ ಪ್ರಾರಂಭ ಮಾಡಿದ್ದಾರೆ ಎಂದು ರೈತರಿಗೆ ನೋಟಿಸ್ ನೀಡದಿರುವುದರ ಬಗ್ಗೆ ಮಾಹಿತಿ ಇಲ್ಲ ನಾವು ಸರ್ವೆ ಮಾಡಿಸಿದ್ದೇವೆ ಈ ಬಗ್ಗೆ ದಾಖಲೆಗಳನ್ನು ಇಲಾಖೆಗೆ ಕಳುಹಿಸಲಾಗುತ್ತದೆ ಕೂಡಲೇ ಈ ಬಗ್ಗೆ ಕ್ರಮ ಜರುಗಿಸಲು ಮನವಿ ಮಾಡಲಾಗುವುದು ಎಂದು ಹೇಮಾವತಿ ಇಲಾಖೆಯ ಎಇಇ ನರಸಿಂಹರಾಜು ತಿಳಿಸಿದರು.
ಬೈಟ್: ನರಸಿಂಹರಾಜು, ಹೇಮಾವತಿ ಇಲಾಖೆಯ ಎಇಇ

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.