ಸಿದ್ದರಾಮಯ್ಯ ಹಿಂದೂಗಳ ವೋಟ್​ ಬೇಡ ಅಂತಾ ಹೇಳಲಿ ನೋಡೋಣ: ಮಾಜಿ ಸಿಎಂಗೆ ಈಶ್ವರಪ್ಪ ಸವಾಲು

author img

By

Published : Sep 29, 2022, 4:31 PM IST

Updated : Sep 29, 2022, 4:50 PM IST

ks-eshwarappa-statement-against-siddaramaih

ರಾಷ್ಟ್ರಭಕ್ತ ಸಂಘಟನೆ ಆರ್​ಎಸ್​ಎಸ್ ಅ​ನ್ನು ನಿಷೇಧಿಸಲು ಕಾಂಗ್ರೆಸ್​ನ ಯಾವುದೇ ನಾಯಕರಿಂದ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ: ಆರ್​ಎಸ್​ಎಸ್ ರಾಷ್ಟ್ರಭಕ್ತ ಸಂಘಟನೆ, ಇದನ್ನು ನಿಷೇಧಿಸಲು ಯಾವ ಕಾಂಗ್ರೆಸ್ ನಾಯಕನಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆರ್​ಎಸ್​ಎಸ್ ನಿಷೇಧ ಮಾಡಬೇಕು ಎನ್ನುತ್ತಾರೆ. ಯಾರು ಸೆರಗು ಹಿಡಿದುಕೊಂಡು ಹೋಗಿದ್ದಾರಲ್ಲಾ ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ ಅವರುಗಳಿಂದಲೇ ಆರ್​​ಎಸ್​ಎಸ್​​ನ ಒಂದು‌ ಕೂದಲನ್ನೂ ಅಲ್ಲಾಡಿಸಲು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಜಿನ್ನಾ ಸಂತತಿಯವರು : ಸಿದ್ದರಾಮಯ್ಯ ಜಿನ್ನಾ ಸಂತತಿಯವರು,ಕನಕದಾಸ ಸಂತತಿಯವರಲ್ಲ. ನಮ್ಮದು ಸಂಗೊಳ್ಳಿರಾಯಣ್ಣ, ಕನಕದಾಸ ರಕ್ತ. ಸಿದ್ದರಾಮಯ್ಯ ಅವರದ್ದು ಜಿನ್ನಾ ಅವರ ರಕ್ತ. ಹೀಗಾಗಿ ಪಿಎಫ್ ಐ ಮೇಲೆ ಬಹಳ ಪ್ರೀತಿ ತೋರುತ್ತಿದ್ದಾರೆ. ಪಿಎಫ್ ಐ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಇದರಿಂದ ಆರ್​ಎಸ್​ಎಸ್ ದ್ವೇಷ ಮಾಡುತ್ತಿದ್ದಾರೆ. ಆರ್​ಎಸ್​ಎಸ್ ದ್ವೇಷ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್ ನಿರ್ನಾಮ‌ ಆಗಿದೆ. ಅದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹಿಂದೂಗಳ ವೋಟ್​ ಬೇಡ ಅಂತಾ ಹೇಳಲಿ ನೋಡೋಣ,ಮಾಜಿ ಸಿಎಂಗೆ ಈಶ್ವರಪ್ಪ ಸವಾಲು

ಕಟೀಲ್​ ವಿದೂಷಕ ಅಲ್ಲ ನಮ್ಮ ಪಕ್ಷದ ಸಂಘಟಕ : ಇನ್ನು ಸಿದ್ದರಾಮಯ್ಯ ನಳಿನ್​ ಕುಮಾರ್​ ನ್ನು ವಿದೂಷಕ ಎಂದು ಟೀಕಿಸಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ವಿಲನ್, ರಾಜ್ಯಕ್ಕೂ ವಿಲನ್, ದೇಶಕ್ಕೂ ವಿಲನ್​. ಕಟೀಲ್ ವಿದೂಷಕ ಅಲ್ಲ, ನಮ್ಮ ರಾಜ್ಯದಲ್ಲಿ ಪಕ್ಷ ಕಟ್ಟುತ್ತಿರುವ ಸಂಘಟನೆಯ ನೇತಾರರು.

ಹಾಗಾಗಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೂ ವಿಲನ್, ಕಾಂಗ್ರೆಸ್ ಗೂ ವಿಲನ್. ಸಿದ್ದರಾಮಯ್ಯ ಹಿಂದುಗಳ ಓಟು ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಹಿಂದೂಗಳ ಸಂಘಟನೆ ಮಾಡುತ್ತಿರುವುದೇ ಆರ್​ಎಸ್​ಎಸ್. ನಮಗೆ‌ ಹಿಂದೂಗಳ ವೋಟ್​ ಬೇಡ, ಕೇವಲ ಮುಸಲ್ಮಾನರ ವೋಟ್​ ಮಾತ್ರ ಬೇಕು ಎಂದು ಹೇಳಲಿ ನೋಡೋಣ. ಈ ಬಗ್ಗೆ ರಾಷ್ಟ್ರ ಭಕ್ತ ಮುಸಲ್ಮಾನರೂ ಸಿದ್ದರಾಮಯ್ಯ ಅವರ ಮಾತುಗಳನ್ನು ಒಪ್ಪುವುದಿಲ್ಲ. ಕೆಲ ಮುಸಲ್ಮಾನರು ಆರ್​ಎಸ್​ಎಸ್ ಕಚೇರಿ, ಶಾಖೆಗೆ ಬರುತ್ತಿದ್ದಾರೆ. ರಾಷ್ಟ್ರ ಭಕ್ತರು ಆರ್​ಎಸ್​ಎಸ್ ಶಾಖೆಗೆ ಬರುತ್ತಿದ್ದಾರೆ. ರಾಷ್ಟ್ರ ದ್ರೋಹಿಗಳು ಪಿಎಫ್ ಐ ಜೊತೆ ಹೋಗುತ್ತಿದ್ದಾರೆ, ಸಿದ್ದರಾಮಯ್ಯ ಅವರ ಜೊತೆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡಿ ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ವಿಚಾರ : ಡಿ.ಕೆ.ಶಿವಕುಮಾರ್ ಮನೆಯಲ್ಲಿ ಬಂಡಲ್ ಗಟ್ಟಲೆ ನೋಟು ಸಿಕ್ಕಿದೆ.ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ನೋಡಿದೆ. ಬಂಡಲ್ ಗಟ್ಟಲೆ ಅಕ್ರಮ ಹಣ ಸಿಕ್ಕಿದೆಯಲ್ಲ ಇದು ಸುಳ್ಳಾ. ಹಾಗಾದ್ರೆ ಅವರ ಮನೆ ರೇಡ್ ಮಾಡಿದ್ದು ತಪ್ಪಾ, ಕಳ್ಳತನ ಮಾಡಿದರೆ ಹಾಗೇ ಬಿಡಬೇಕಾ ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ಬಿಜೆಪಿಯವರ ಮನೆ ಮೇಲೂ ದಾಳಿ ನಡೆಸಿದೆ. ಅಲ್ಲಿಯೂ ಹಣ ಸಿಕ್ಕಿದೆ. ಕಾಂಗ್ರೆಸ್ ನವರ ಮನೆಯಲ್ಲಿ ಸ್ವಲ್ಪ ಜಾಸ್ತಿ ಸಿಕ್ಕಿದೆ ಎಂದು ಹೇಳಿದರು.ಕಾಂಗ್ರೆಸ್​ ಸ್ವತಂತ್ರ ಬಂದ ದಿನದಿಂದ ಜಾಸ್ತಿ ಲೂಟಿ ಮಾಡಿದ್ದಾರೆ. ಜಾಸ್ತಿ ಲೂಟಿ ಮಾಡಿದ್ದರಿಂದಲೇ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ.

ನಲಪಾಡ್ ಏಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾ. ಜೈಲಿಗೆ ಹೋಗಿ ಬಂದವರ ಕೈಯಲ್ಲಿ ಕಾಂಗ್ರೆಸ್ ಇದೆ. ರಾಜ್ಯದ ಜನ ಜೈಲಿಗೆ ಹೋಗಿ ಬಂದವರ ಸಹವಾಸ ಬೇಡ ಎಂದು ಬಿಜೆಪಿಗೆ ಸೇರುತ್ತಿದ್ದಾರೆ ಎಂದರು.

ಪೇ ಸಿಎಂ ಅಭಿಯಾನದ ಹೆಸರಿನಲ್ಲಿ ನಿರ್ಲಜ್ಜ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಲು‌ ಕಾಂಗ್ರೆಸ್ ಗೆ ಯಾವ ಯೋಗ್ಯತೆ ಇಲ್ಲ. ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಆರ್​ಎಸ್​ಎಸ್​ನವರ ಪಾಪದ ಕೂಸು ಬಿಜೆಪಿ.. ಬಿಎಸ್​ವೈ ಏಟಿಗೆ ಸಿದ್ದರಾಮಯ್ಯ ತಿರುಗೇಟು

Last Updated :Sep 29, 2022, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.