ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ.. ರಾಜ್ಯಪಾಲ ಗೆಹ್ಲೋಟ್‌

author img

By

Published : Nov 24, 2021, 8:00 PM IST

thawar-chand-gehlot

ಇಂಗ್ಲಿಷ್ ಭಾಷೆ ಕಲಿತರಷ್ಟೇ ನಾವು ವೈದ್ಯರಾಗುತ್ತೇವೆ, ಇಂಜಿನಿಯರ್ ಆಗುತ್ತೇವೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ..

ಶಿವಮೊಗ್ಗ : ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ನಗರದ ಪಿ‌ಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿರುವುದು..

ಇಂಗ್ಲಿಷ್ ಭಾಷೆ ಕಲಿತರಷ್ಟೇ ನಾವು ವೈದ್ಯರಾಗುತ್ತೇವೆ, ಇಂಜಿನಿಯರ್ ಆಗುತ್ತೇವೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ, ಜರ್ಮನಿ, ಜಪಾನ್​ ಸೇರಿದಂತೆ ಅನೇಕ ದೇಶಗಳಲ್ಲಿ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಲಾಗಿದೆ ಎಂದರು.

ಹಲವಾರು ಆಯಾಮಗಳಲ್ಲಿ ಯೋಚಿಸಿ, ಚಿಂತಿಸಿ, ಹಲವಾರು ಅನುಭವಸ್ಥರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ.

ಇಡೀ ದೇಶದಲ್ಲಿ ಕರ್ನಾಟಕವೇ ಪ್ರಥಮವಾಗಿ ನೂತನ ನೀತಿ ಒಪ್ಪಿಕೊಂಡಿರುವ ರಾಜ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಪ್ರಮುಖರಾದ ಬಿ.ವೈ ಅರುಣಾದೇವಿ ಸೇರಿದಂತೆ ಹಲವರಿದ್ದರು.

ಓದಿ: ಕೇಂದ್ರ ಸರ್ಕಾರ ಆಯ್ತು, ರಾಜ್ಯದಲ್ಲೂ ಕೃಷಿ ಕಾಯ್ದೆಗಳ ವಾಪಸ್​ಗೆ ರೈತ ಸಂಘ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.