ಒಂದೇ ವೇದಿಕೆಯಲ್ಲಿ ಸಿಪಿವೈ, ಹೆಚ್​ಡಿಕೆ, ಡಿ ಕೆ ಸುರೇಶ್​.. ಕೇಂದ್ರದ ವಿರುದ್ಧ ಕುಮಾರಸ್ವಾಮಿ ಕಿಡಿ

author img

By

Published : Sep 2, 2021, 4:01 PM IST

Updated : Sep 2, 2021, 7:35 PM IST

hdk dk suresh and cp yogeshwar  in same stage at ramnagar

ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ ಕಂಡುಬಂದಿದೆ. ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೆಚ್​ ಡಿ ಕುಮಾರಸ್ವಾಮಿ, ಸಂಸದ ಡಿಕೆ ಸುರೇಶ್​ ಹಾಗೂ ಮಾಜಿ ಸಚಿವ ಸಿ ಪಿ ಯೋಗೇಶ್ವರ್​ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ರಾಮನಗರ: ಚನ್ನಪಟ್ಟಣ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ' ಕವಿ ಸಿದ್ದಲಿಂಗಯ್ಯನವರ ನುಡಿನಮನ' ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಂದೇ ಕಡೆ ಸಮಾಗಮಗೊಂಡಿದ್ದಾರೆ.

ಒಂದೆ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು

ದೇಶವನ್ನ ಆಳುತ್ತಿರೋ ಪಕ್ಷ:

ಬಿಜೆಪಿಯವರು ಎರಡನೇ ಬಾರಿಗೆ ದೇಶವನ್ನ ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನ ಮೊದಲಿಗೆ ನಿಲ್ಲಿಸಬೇಕು. ನನಗೆ ಬುದ್ಧಿ ಹೇಳುವ ಮೊದಲು ಅವರ ನಡವಳಿಕೆ ಏನೆಂಬುದನ್ನ ನೋಡಿಕೊಳ್ಳಲಿ ಎಂದು ಮಾಜಿ ಸಿಎಂ‌ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ಗೆ ತಿರುಗೇಟು ನೀಡಿದರು.

ಪ್ರಧಾನಿ ಬಳಿ ಕೇಳಿ ತಿಳಿದುಕೊಳ್ಳಲಿ:

ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ. ನನ್ನ ಬಗ್ಗೆ, ನಮ್ಮ ಪಕ್ಷದ ಮಾಹಿತಿ ಇಲ್ಲ ಅಂದ್ರೆ ಪ್ರಧಾನಮಂತ್ರಿ ಅವರ ಹತ್ತಿರ ಕೇಳಿ ತಿಳಿದುಕೊಳ್ಳಲಿ ಎಂದರು.

ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ

ಬೆಲೆ ಏರಿಕೆ ಬಿಜೆಪಿ ಸರ್ಕಾರದ ಕೊಡುಗೆ:

ತೈಲಬೆಲೆ ಏರಿಕೆ ವಿಚಾರವಾಗಿ, ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳಲಿ. ಬಡ ಜನರ ಮೇಲೆ ತೆರಿಗೆ ಹೊರೆ ಏರಿಕೆ ಮಾಡಿದ್ದಾರೆ. ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರೋ ಕೊಡುಗೆ ಬೆಲೆ ಏರಿಕೆ ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜನಪ್ರಿಯ ಯೋಜನೆಗಳಿಗೆ ಹಣ ಸಂಗ್ರಹಿಸಬೇಕಿದೆ; ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮರ್ಥಿಸಿಕೊಂಡ ಅರುಣ್ ಸಿಂಗ್!

ಕರ್ನಾಟಕ ರಾಜ್ಯದ ಮ್ಯಾಪ್​ ಇದೆಯೋ ಕಿತ್ತಾಕಿದರೋ ಗೊತ್ತಿಲ್ಲ:

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಮ್ಯಾಪ್​ ಇದೆಯೋ ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನ್ ತೊಂದರೆ ಆಗುತ್ತಿದೆ, ಅನ್ಯಾಯವಾಗಿದೆ ಎಂಬುದನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ನೀಡಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ, ಕೇಂದ್ರ ಸರ್ಕಾರ ಜನರ ಸಾಮಾನ್ಯರಿಗೆ ಎಷ್ಟು ಸ್ಪಂದಿಸಿದೆ ಎಂದು ಜನರಿಗೆ ತಿಳಿಯಬೇಕು ಎಂದು ಕುಮಾರಸ್ವಾಮಿ ಹೇಳಿದ್ರು.

ಯೋಗೀಶ್ವರ್​​ಗೆ ಕುಟುಕಿದ ಸಂಸದ ಸುರೇಶ್​:

ಸಂಸದ ಡಿ ಕೆ ಸುರೇಶ್​ ಮಾತನಾಡಿ, ವೇದಿಕೆಯಲ್ಲಿ ಸ್ವಾಮೀಜಿಗಳು ಸಿಪಿವೈ ಸಚಿವರಾಗುತ್ತಾರೆ ಅಂತಾ ಹೇಳಿದ್ರು. ಹಾಗಾಗಿ ನಾನು ಒಳ್ಳೆಯದಾಗಲಿ ಅಂದೆ ಅಂತಾ ತಮ್ಮ ಬದ್ಧ ವೈರಿ ಯೋಗೀಶ್ವರ್​​ಗೆ ನಗುತ್ತಲೇ ಡಿ.ಕೆ. ಸುರೇಶ್ ಕುಟುಕಿದರು.

ಸಂಸದ ಡಿ ಕೆ ಸುರೇಶ್​ ಪ್ರತಿಕ್ರಿಯೆ

ಇನ್ನು ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬದುಕಿನ ಬಗ್ಗೆ ಕಾಳಜಿ ಇಲ್ಲ, ಪ್ರತಿಯೊಂದು ಹಂತದಲ್ಲಿ ತೆರಿಗೆ ಕಡಿಮೆ ಮಾಡಿ ಜನ್ರ ಮೇಲೆ ಆಗುತ್ತಿರುವ ಬೆಲೆ ಏರಿಕೆಯನ್ನ ಕಡಿಮೆ ಮಾಡುವುದು ಸರ್ಕಾರದ ಕರ್ತವ್ಯ. ಮನ್ ಕಿ ಬಾತ್​ನಲ್ಲಿ ಮೋದಿ ಕೂತು ಪ್ರಚಾರ ಪಡೆಯುವುದನ್ನ ಬಿಡಬೇಕು ಅಂತಾ ಲೇವಡಿ ಮಾಡಿದರು.

ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಏನ್ ಸಾಧನೆ ಮಾಡಿದ್ದಾರೆ ಅಂತಾ ಪ್ರಚಾರ ಪಡೆಯುತ್ತಿದ್ದಾರೊ ಗೊತ್ತಿಲ್ಲ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಹಿಂದಿನ ಸರ್ಕಾರಗಳು ಸಬ್ಸಿಡಿಗಳನ್ನ ನೀಡುತ್ತಾ ಬಂದಿವೆ. ಆದ್ರೆ ಈ ಬಿಜೆಪಿ ಸರ್ಕಾರ ಸಬ್ಸಿಡಿ ತೆಗೆದು ಬೆಲೆ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರ 4-5 ಕಂಪನಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ದೇಶವನ್ನ ಅಡ ಇಡುವ ಪರಿಸ್ಥಿತಿಗೆ ಹೋಗುತ್ತಿದ್ದೇವೆ ಅಂತಾ ಕೇಂದ್ರದ ವಿರುದ್ಧ ಕಿಡಿಕಾರಿದರು.

Last Updated :Sep 2, 2021, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.