ಈಗಲ್ ಟನ್ ರೆಸಾರ್ಟ್​​ನಿಂದ ಜಾಗ ಒತ್ತುವರಿ : 77 ಎಕರೆ ಜಮೀನು ಜಿಲ್ಲಾಡಳಿತದ ವಶಕ್ಕೆ

author img

By

Published : Sep 14, 2021, 5:16 PM IST

Eagleton resort acquired 77 acres of government land issue

ಅಕ್ರಮವಾಗಿ ಗೋಮಾಳ ಒತ್ತುವರಿ ಮಾಡಿಕೊಂಡಿದ್ದ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್​ ಲಿಮಿಟೆಡ್​ ಒತ್ತುವರಿ ಜಾಗದ ಮೌಲ್ಯ ಇಂದಿಗೆ 928 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು..

ರಾಮನಗರ : ಈಗಲ್ ಟನ್ ರೆಸಾರ್ಟ್ ಒತ್ತುವರಿ‌ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಳ್ಳಲು ಮುಂದಾಗಿದೆ.

ಸರ್ಕಾರಿ ಜಾಗ ಒತ್ತುವರಿ ಜಮೀನು ಗುರುತಿಸಿ ನಂತರ ಕಾಂಪೌಂಡ್ ‌ನಿರ್ಮಾಣಕ್ಕೆ ರಾಮನಗರ ಜಿಲ್ಲಾಡಳಿತ ಮುಂದಾಗಿದೆ. ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಸರ್ಕಾರಿ ಗೋಮಾಳ ಜಿಲ್ಲಾಡಳಿತದ ವಶಕ್ಕೆ ಪಡೆಯುತ್ತಿದೆ.

ಅಕ್ರಮವಾಗಿ ಗೋಮಾಳ ಒತ್ತುವರಿ ಮಾಡಿಕೊಂಡಿದ್ದ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್​ ಲಿಮಿಟೆಡ್​ ಒತ್ತುವರಿ ಜಾಗದ ಮೌಲ್ಯ ಇಂದಿಗೆ 928 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.

ಈ ವಿಚಾರವಾಗಿ ರಾಮನಗರ ಜಿಲ್ಲಾಡಳಿತದ ವಿರುದ್ಧ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೆಟ್​ ಲಿಮಿಟೆಡ್ ಕೋರ್ಟ್ ಮೊರೆ ಹೋಗಿದೆ. 77 ಎಕರೆಗೆ 12.35 ಕೋಟಿ ಪಾವತಿಸಲು ಸಿದ್ಧ ಎಂದು ಅಂತಾ ಕೂಡ ಈಗಾಗಲೇ ಕೋರ್ಟ್ ಗೆ ತಿಳಿಸಿತ್ತು.

ಆದ್ರೆ, ಹೈಕೋರ್ಟ್ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೆಟ್​ ಲಿಮಿಟೆಡ್ ಇತ್ತೀಚಿಗೆ ಹಾಕಿದ್ದ ಅರ್ಜಿ ವಜಾಗೊಳಿಸಿ ಸರ್ಕಾರಿ ಜಾಗವನ್ನ ವಶಕ್ಕೆ ಪಡೆಯುವಂತೆ ಆದೇಶ ಹೊರಡಿಸಿತ್ತು. ಸರ್ಕಾರಕ್ಕೆ ಹಣವನ್ನ ಪಾವತಿಸದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗವನ್ನ ವಶಕ್ಕೆ ಪಡೆದುಕೊಂಡು ಅಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಈ ಸರ್ಕಾರಿ‌ ಜಾಗದಲ್ಲಿ ಗಾಲ್ಫ್, ರಸ್ತೆ, ವಿಲ್ಲಾ ನಿರ್ಮಾಣ ಮಾಡಿಕೊಳ್ಳಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.