45 ಕಾರ್ಮಿಕರ ವಜಾ, 16 ಮಂದಿಗೆ ಅಮಾನತು ಶಿಕ್ಷೆ ವಿಧಿಸಿದ ಟೊಯೋಟಾ ಕಂಪನಿಯ ಆಡಳಿತ ಮಂಡಳಿ

author img

By

Published : Oct 2, 2021, 2:45 PM IST

Toyota Kirloskar Motor

ಕಾನೂನು ಬಾಹಿರ ಮುಷ್ಕರ ಹಾಗೂ ಕಾರ್ಮಿಕರ ದುರ್ನಡತೆಯನ್ನ ಗಂಭೀರವಾಗಿ ಪರಿಗಣಿಸಿದ ಕಂಪನಿಯು, ಮುಷ್ಕರ ನಿರತ ತಂಡದ 63 ಸದಸ್ಯರ ವಿರುದ್ಧ ಕ್ರಮಕೈಗೊಂಡು ಅಮಾನತು ಶಿಕ್ಷೆಗೆ ಒಳಪಡಿಸಿದ್ದರು. ಅಮಾನತುಗೊಂಡ ಕಾರ್ಮಿಕರ ವಿಚಾರಣೆಗೆಂದು ನಿವೃತ್ತ ನ್ಯಾಯಾಧೀಶರ ತಂಡ ರಚನೆ ಮಾಡಿ ಕಾರ್ಮಿಕರ ತನಿಖೆ ಮಾಡಲಾಯಿತು..

ರಾಮನಗರ : ಕಾನೂನು ಬಾಹಿರವಾಗಿ ಹೋರಾಟ ಮಾಡಿದ್ದ 45 ಕಾರ್ಮಿಕರನ್ನು ಟೊಯೋಟಾ ಕಂಪನಿಯ ಆಡಳಿತ ಮಂಡಳಿ ವಜಾಗೊಳಿಸಿದೆ. ಅಲ್ಲದೇ 16 ಕಾರ್ಮಿಕರಿಗೆ ಅಮಾನತು‌ ಶಿಕ್ಷೆ ನೀಡಿ ಆದೇಶಿಸಿದೆ.

2020ರ ನವೆಂಬರ್​​ 9ರಂದು ಟಿಕೆಎಂ ನೌಕರರ ಸಂಘವು ಕಂಪನಿಯ ಆವರಣದಲ್ಲಿ ಕಾನೂನು ಬಾಹಿರವಾಗಿ ಮುಷ್ಕರ ಆರಂಭಿಸಿತ್ತು. ಕೆಲಸದ ಅವಧಿ ಮುಗಿದ ನಂತರವೂ ಕಂಪನಿಯ ಆವರಣದಲ್ಲಿ ಅಕ್ರಮವಾಗಿ ಸದರಿ ಮುಷ್ಕರವನ್ನು ಮುಂದುವರೆಸಿ ಕಂಪನಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಸುಮಾರು ತಿಂಗಳವರೆಗೆ ಕಂಪನಿಯ ಮುಂದೆ ಕುಳಿತು ಕಾನೂನು ಬಾಹಿರ ಮುಷ್ಕರ ಮುಂದುವರೆಸಿದ್ದರು.

ಈ ಕಾನೂನು ಬಾಹಿರ ಮುಷ್ಕರ ಹಾಗೂ ಕಾರ್ಮಿಕರ ದುರ್ನಡತೆಯನ್ನ ಗಂಭೀರವಾಗಿ ಪರಿಗಣಿಸಿದ ಕಂಪನಿಯು ಮುಷ್ಕರ ನಿರತ ತಂಡದ 63 ಸದಸ್ಯರ ವಿರುದ್ಧ ಕ್ರಮಕೈಗೊಂಡು ಅಮಾನತು ಶಿಕ್ಷೆಗೆ ಒಳಪಡಿಸಿದ್ದರು. ಅಮಾನತುಗೊಂಡ ಕಾರ್ಮಿಕರ ವಿಚಾರಣೆಗೆಂದು ನಿವೃತ್ತ ನ್ಯಾಯಾಧೀಶರ ತಂಡ ರಚನೆ ಮಾಡಿ ಕಾರ್ಮಿಕರ ತನಿಖೆ ಮಾಡಲಾಯಿತು. ‌

ಇದನ್ನೂ ಓದಿ: ಕೊಪ್ಪಳದಲ್ಲಿ ಸರಣಿ ಕಳ್ಳತನ: ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸತತ ಮೂರು ತಿಂಗಳ ತನಿಖೆ ನಡೆಸಿದ ಮೇಲೆ ಕಾರ್ಮಿಕರದ್ದೇ ತಪ್ಪು ಎಂದು ನಿರ್ಧರಿಸಿ 45 ಕಾರ್ಮಿಕರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಉಳಿದಂತೆ 16 ಮಂದಿ ಕಾರ್ಮಿಕರಿಗೆ ಅಮಾನತು ಶಿಕ್ಷೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.