ಲಾರಿ ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
Published on: Dec 3, 2022, 8:10 PM IST

ಲಾರಿ ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
Published on: Dec 3, 2022, 8:10 PM IST
ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಯರಗೇರಾ ಗ್ರಾಮದ ಹತ್ತಿರ ಸಂಭವಿಸಿದೆ.
ರಾಯಚೂರು: ರಾಯಚೂರು - ಮಂತ್ರಾಲಯ ಹೆದ್ದಾರಿಯ ಯರಗೇರಾ ಗ್ರಾಮದ ಸಾಯಿಬಾಬಾ ದೇವಾಸ್ಥಾನದ ಹತ್ತಿರ ಸಂಜೆ ವೇಳೆಗೆ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಮಂತ್ರಾಲಯದಿಂದ ರಾಯಚೂರಿಗೆ ಹೊರಟಿದ್ದ ದ್ವಿಚಕ್ರ ವಾಹನ ಹಾಗೂ ರಾಯಚೂರಿನಿಂದ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಮೃತರು ರಾಯಚೂರು ನಗರದ ಮಡ್ಡಿಪೇಟೆ ನಿವಾಸಿಗಳಾದ ಪ್ರವೀಣ್, ಶರತ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ದಟ್ಟ ಮಂಜಿನಿಂದ ಅವಾಂತರ.. ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ

Loading...