ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

author img

By

Published : Sep 29, 2021, 11:48 AM IST

Updated : Sep 29, 2021, 3:53 PM IST

three-from-same-family-killed-for-family-dispute-matters

ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಮೂವರನ್ನು ಹತ್ಯೆ ಮಾಡಲಾಗಿದೆ. ಮನಯಳಿಯನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಮೂವರನ್ನು ಕೊಲೆ ಮಾಡಿರುವ ಘಟನೆ ರಾಯಚೂರಿನ ಹೊರವಲಯದ ಯರಮರಸ್​ ಕ್ಯಾಂಪ್​​​ನಲ್ಲಿ ನಡೆದಿದೆ.

ಮನೆ ಅಳಿಯ ಸಾಯಿ ಎಂಬಾತನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದವರನ್ನು ಸಂತೋಷಿ(45) ವೈಷ್ಣವಿ(18) ಮತ್ತು ಆರತಿ(16)ಎಂದು ಗುರುತಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

ನಿನ್ನೆ ರಾತ್ರಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೈದರಾಬಾದ್ ಮೂಲದ ಸಂಬಂಧಿಕರ ಹುಡುಗನಾದ ಸೌರಬ್ ಅಲಿಯಾಸ್ ಸಾಯಿ ಎಂಬಾತನಿಗೆ ತನ್ನ ಹಿರಿಯ ಮಗಳು ವೈಷ್ಣವಿಯನ್ನ 6 ತಿಂಗಳ ಹಿಂದೆ ವಿವಾಹ ಮಾಡಿ ಕೊಡಲಾಗಿತ್ತು. ಬಳಿಕ ಪತಿ-ಪತ್ನಿಯ ನಡುವೆ ಮನಸ್ತಾಪ ಉಂಟಾಗಿ ಗಲಾಟೆ ನಡೆಯುತಿತ್ತು. ಜೊತೆಗೆ ಪತ್ನಿ ವೈಷ್ಣವಿ ಆತನಿಗೆ ವಿಚ್ಛೇದನ ನೋಟಿಸ್ ಸಹ ನೀಡಿದ್ದಳು. ನಿನ್ನೆ ರಾತ್ರಿ ಸಹ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿ ಪತ್ನಿಯೂ ಸೇರಿ ಅತ್ತೆ ಹಾಗೂ ನಾದಿನಿಯನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗ್ತಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ

ನೆರೆಮನೆಗೆ ಕೊನೆಯ ಕರೆ

ಪತ್ನಿ ವೈಷ್ಣವಿಯೊಂದಿಗೆ ಹೊಂದಾಣಿಕೆ ಇರಲಿಲ್ಲ, ಪದೇಪದೆ ಜಗಳ ಆಡುತ್ತಿದ್ದರು ಎಂದು ನೆರೆ ಮನೆಯವರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಕೊಲೆಯಾಗುವ ಮುನ್ನ ನೆರೆಮನೆಯವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆದರೆ ರಾತ್ರಿಯಾಗಿರುವ ಕಾರಣ ಕರೆ ಸ್ವೀಕರಿಸಿಲ್ಲ. ಬೆಳಗ್ಗೆ ಮರಳಿ ಕರೆ ಮಾಡಿದರೆ ಯಾರು ಕರೆ ಸ್ವೀಕರಿಸಿಲ್ಲ. ಅನುಮಾನ ಬಂದು ಮನೆ ಬಳಿ ಹೋಗಿ ಪರಿಶೀಲಿಸಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಅರೆಸ್ಟ್

Last Updated :Sep 29, 2021, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.