ರಥವನೇರಿದ ಶ್ರೀ ಗುರು ರಾಘವೇಂದ್ರ ರಾಯರು.. ಮಂತ್ರಾಲಯದಲ್ಲಿ ಉತ್ತರಾರಾಧನೆ ವೈಭವ..

author img

By

Published : Aug 25, 2021, 3:32 PM IST

Updated : Aug 25, 2021, 3:39 PM IST

Raghavendra Swamy Chariot festival in Mantralaya

ರಥೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಚಾಲನೆಗೂ ಮುನ್ನ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥರು ಆಶೀರ್ವಚನ ನೀಡಿದರು..

ರಾಯಚೂರು : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಉತ್ತಾರಾರಾಧಾನೆ ನಿಮಿತ್ತವಾಗಿ ಮಹಾ ರಥೋತ್ಸವ ನಡೆಯಿತು. ಶ್ರೀಮಠದ ರಥ ಬೀದಿಗಳಲ್ಲಿ ಪ್ರಹ್ಲಾದ ರಾಜರ ಮೂರ್ತಿಯನ್ನು ಇರಿಸಿ‌ ಮಹಾ ರಥೋತ್ಸವ ನೆರವೇರಿಸಲಾಯಿತು. ವಿವಿಧ ಕಲಾ ತಂಡಗಳು, ವಾದ್ಯ-ಮೇಳಗಳೊಂದಿಗೆ ವೈಭವದ ರಥೋತ್ಸವ ಜರುಗಿತು.

ರಥವನೇರಿದ ಶ್ರೀ ಗುರು ರಾಘವೇಂದ್ರ ರಾಯರು..

ಶ್ರೀಗುರು ರಾಯರು ಬೃಂದಾವನಸ್ಥರಾಗಿ‌ 350 ವರ್ಷಗಳು ಸಂದಿವೆ. ಉತ್ತಾರಾರಾಧನೆ ವಿಶೇಷವಾಗಿ ಮೂಲ ಬೃಂದಾವನಕ್ಕೆ ಪುಷ್ಪಾಂಲಕಾರ ಮಾಡಲಾಗಿತ್ತು. ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಯಿತು.

ರಥೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಚಾಲನೆಗೂ ಮುನ್ನ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.

ಓದಿ : ರಾಯರ 350ನೇ ಆರಾಧನಾ ಮಹೋತ್ಸವ: ಸಿಂಗಾರಗೊಂಡ ಮಂತ್ರಾಲಯ

Last Updated :Aug 25, 2021, 3:39 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.