ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

author img

By

Published : Nov 22, 2022, 10:41 PM IST

Etv Bharat

ಮಕ್ಕಳನ್ನು ಕಾಲೇಜಿಗೆ ಬಿಡಲು ತೆರಳುವ ವೇಳೆ ಅಪಘಾತ ಸಂಭವಿಸಿ ಒಬ್ಬರು ಮೃತರಾಗಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ರಾಯಚೂರು: ಕಾಲೇಜಿಗೆ ಮಗಳು ಮತ್ತು ಅವಳ ಸ್ನೇಹಿತೆಯನ್ನು ಬಿಡಲು ತೆರಳಿದ ವೇಳೆ ಮಾರ್ಗ ಮಧ್ಯೆ ಸಂಭವಿಸಿದ ಅಪಘಾತಲ್ಲಿ ಒಬ್ಬರು ಮೃತ ಪಟ್ಟಿದ್ದು ,3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಐಬಿ ರಸ್ತೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕಾಲೇಜಿಗೆ ಮಕ್ಕಳನ್ನು ಬಿಡಲು ತೆರಳಿದ್ದ ಎಸ್.ನಿರ್ಲಾಪ್ಪ(58) ಮೃತರಾಗಿದ್ದಾರೆ. ಬೈಕ್​ನಲ್ಲಿದ್ದ ವೀಣಾ ಮತ್ತು ಆಕೆಯ ಸ್ನೇಹಿತೆ ವಾಣಿಶ್ರೀ ಗಾಯಗೊಂದಡಿದ್ದಾರೆ. ಎದುರಿನಿಂದ ಬೈಕ್​ನಲ್ಲಿದ್ದ ಹಿಂಬದಿ ಸವಾರ ಮುರಾರಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್​ ಮಾಡಿದೆ: ಕೋರ್ಟ್​ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.