ರಾಯರ 350ನೇ ಆರಾಧನಾ ಮಹೋತ್ಸವ: ಸಿಂಗಾರಗೊಂಡ ಮಂತ್ರಾಲಯ

author img

By

Published : Aug 24, 2021, 8:05 AM IST

Updated : Aug 24, 2021, 10:56 AM IST

aradhana-mahostava-in-mantrayala-raghavendra-matt

ಕೋವಿಡ್ ಭೀತಿಯ ನಡುವೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಮಧ್ಯಾರಾಧಾನ ಮಹೋತ್ಸವ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

ರಾಯಚೂರು: ಇಂದು ರಾಯರ ಮಧ್ಯಾರಾಧನೆ. ಇದಕ್ಕಾಗಿ‌ ಮಠದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 350ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನಡೆಯಲಿದ್ದು, ಪೀಠಾಧಿಪತಿ ಸುಭುದೇಂದ್ರ ತೀರ್ಥರು ನೆರವೇರಿಸಲಿದ್ದಾರೆ.

ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಿಸಲಾಗಿದೆ. ಮಠದಿಂದ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಬರಮಾಡಿಕೊಂಡು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಿದ್ದಾರೆ. ತಿರುಪತಿ ತಿರುಮಲ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾಧಿಕಾರಿ‌ ಧರ್ಮರೆಡ್ಡಿ‌ ವಸ್ತ್ರವನ್ನು ತಿರುಮಲದಿಂದ‌ ತಂದ ಬಳಿಕ,‌ ಮಠದ ಪೀಠಾಧಿಪತಿ‌ ಸುಭುದೇಂದ್ರ ತೀರ್ಥರು ಧಾರ್ಮಿಕ ಸಂಪ್ರದಾಯದಂತೆ ವಾದ್ಯ ಮೇಳದೊಂದಿಗೆ ಪ್ರದಕ್ಷಿಣೆ ಹಾಕಿದ ಬಳಿಕ ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿಸಿದರು.

ರಾಯರ 350ನೇ ಮಧ್ಯಾರಾಧನಾ ಮಹೋತ್ಸವ

ಈ ವೇಳೆ ಟಿಟಿಡಿಯಿಂದ ಶೇಷ ವಸ್ತ್ರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ಅವರನ್ನು ಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಪೀಠಾಧಿಪತಿಗಳು ಭಕ್ತರಿಗೆ ಆಶೀರ್ವಚನ ನೀಡಿದರು.

Last Updated :Aug 24, 2021, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.