ಹೆಚ್​​.ಡಿ ಕೋಟೆ: ಭೀಮನಕೊಲ್ಲಿ ಮಹದೇಶ್ವರನ ದರ್ಶನ ಪಡೆದ ಸೋನಿಯಾ ಗಾಂಧಿ

author img

By

Published : Oct 5, 2022, 6:52 PM IST

Sonia Gandhi offering Dasara Prayers

ಕರ್ನಾಟಕಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ, ಹೆಚ್.ಡಿ ಕೋಟೆ ತಾಲೂಕಿನ ಬೇಗೂರು ಗ್ರಾಮದ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮೈಸೂರು: ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ವಿಜಯದಶಮಿ ನಿಮಿತ್ತ, ಹೆಚ್ ಡಿ ಕೋಟೆ ತಾಲೂಕಿನ ಬೇಗೂರು ಗ್ರಾಮದ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಆರೆಂಜ್​ ಕೌಂಟಿ ರೆಸಾರ್ಟ್​ನಲ್ಲಿದ್ದ ಸೋನಿಯಾ ಗಾಂಧಿ ರಸ್ತೆ ಮಾರ್ಗವಾಗಿ ಭೀಮನಕೊಲ್ಲಿ ದೇವಸ್ಥಾನಕ್ಕೆ ಬಂದರು. ಸ್ಥಳೀಯ ಶಾಸಕರಾಗಿರುವ ಅನಿಲ್​ ಚಿಕ್ಕಮಾದು ಇವರ ಜೊತೆಗಿದ್ದರು. ಸೋನಿಯಾ ಅವರು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಪಾರ್ಥನೆ ಸಲ್ಲಿಸಿದರು. ಅಲ್ಲದೇ ಮಾದೇಶ್ವರನಿಗೆ ಹಾರ ಸಮರ್ಪಿಸಿದರು.

  • ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ವಿಜಯದಶಮಿಯ ನಿಮಿತ್ತ ಹೆಚ್.ಡಿ ಕೋಟೆಯ, ಬೇಗೂರು ಗ್ರಾಮದ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.#BharatJodoYatra pic.twitter.com/OHGFY9Hju1

    — Karnataka Congress (@INCKarnataka) October 5, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಕಾಂಗ್ರೆಸ್​ ವತಿಯಿಂದ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಹಿನ್ನೆಲೆ ಸೋನಿಯಾ ಗಾಂಧಿ ಸೋಮವಾರ ಮೈಸೂರಿಗೆ ಬಂದಿದ್ದಾರೆ. ಮೈಸೂರಿಗೆ ಆಗಮಿಸಿದ ಗಾಂಧಿ ಅವರು ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

Sonia Gandhi offering Dasara Prayers
ಭೀಮನಕೊಲ್ಲಿ ಮಹದೇಶ್ವರನ ದರ್ಶನ ಪಡೆದ ಸೋನಿಯಾ

ಎರಡು ದಿನಗಳ ವಿರಾಮದ ನಂತರ ಯಾತ್ರೆ ಗುರುವಾರ ಪುನಾರಂಭವಾಗಲಿದ್ದು, ಇದರಲ್ಲಿ ಅವರು ಭಾಗವಹಿಸಲಿದ್ದಾರೆ. ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಈ ಹಿಂದೆ ಚುನಾವಣಾ ಸಮಯದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಿರಲಿಲ್ಲ.

ಇದನ್ನೂ ಓದಿ: ಮೈಸೂರಿಗೆ ಇಂದು ಸೋನಿಯಾ ಗಾಂಧಿ: ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಮಡಿಕೇರಿಯತ್ತ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.