ಹೋಟೆಲ್ ‌ಮಾಲೀಕನ ಮೇಲೆ ಇನ್ಸ್​ಪೆಕ್ಟರ್​ ಹಲ್ಲೆ.. ದೃಶ್ಯ ಸಿಸಿಟಿವಿಯಲ್ಲಿ ಸೆರೆ.. ವಿಡಿಯೋ

author img

By

Published : Sep 24, 2021, 4:16 PM IST

Updated : Sep 24, 2021, 4:31 PM IST

Hotel Owners Association

ಕೋವಿಡ್​ನಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಪೊಲೀಸರು ಈ ರೀತಿ ಹೋಟೆಲ್​ಗೆ ನುಗ್ಗಿ ಮಾಲೀಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಹಲ್ಲೆ ಮಾಡಿರುವ ಇನ್ಸ್​ಪೆಕ್ಟರ್​ ಮೇಲೆ ಕ್ರಮ‌ಕೈಗೊಳ್ಳಬೇಕು..

ಮೈಸೂರು : ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಾನೆ ಎಂದು ಹೋಟೆಲ್​ಗೆ ನುಗ್ಗಿ ಮಾಲೀಕನ ಮೇಲೆ ಇನ್ಸ್​ಪೆಕ್ಟರ್​ ಹಲ್ಲೆ ಮಾಡಿರುವ ಘಟನೆ ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೋಟೆಲ್ ‌ಮಾಲೀಕನ ಮೇಲೆ ಇನ್ಸ್​ಪೆಕ್ಟರ್​ ಹಲ್ಲೆ

ನಗರದ ಬಂಬೂ ಬಜಾರ್​ನ ಬಿಗ್ ಗ್ರಿಲ್ ಹೋಟೆಲ್​ನ ಮಾಲೀಕ ಜಾವೇದ್ ಅಹ್ಮದ್ ಖಾನ್ ಎಂಬುವರು ರಾತ್ರಿ 10 ಗಂಟೆವರೆಗೂ ಹೋಟೆಲ್ ತೆರೆದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮಂಡಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ರಘು ಬುಧವಾರ ರಾತ್ರಿ ಹೋಟೆಲ್​ಗೆ ನುಗ್ಗಿ ಮಾಲೀಕನಿಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದೀಯಾ? ಎಂದು ಕ್ಯಾಶ್ ಕೌಂಟರ್​ನಲ್ಲೇ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕಮಿಷನರ್​ ಭೇಟಿ ಮಾಡಿ ಮನವಿ

ಕೋವಿಡ್​ನಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಪೊಲೀಸರು ಈ ರೀತಿ ಹೋಟೆಲ್​ಗೆ ನುಗ್ಗಿ ಮಾಲೀಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಈ ಸಂಬಂಧ ಹಲ್ಲೆ ಮಾಡಿರುವ ಇನ್ಸ್​ಪೆಕ್ಟರ್​ ಮೇಲೆ ಕ್ರಮ‌ಕೈಗೊಳ್ಳಬೇಕೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಘಟನೆ ಕುರಿತ ಸಿಸಿಟಿವಿ ದೃಶ್ಯವನ್ನು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರಿಗೆ ನೀಡಿದ್ದಾರೆ.

ಓದಿ: ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳ ರಕ್ಷಣೆ ಪ್ರಶ್ನೆಯೇ ಇಲ್ಲ: ಮಾಧುಸ್ವಾಮಿ ಭರವಸೆ

Last Updated :Sep 24, 2021, 4:31 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.