ದಸರಾ ಗಜಪಡೆಗೆ ವರ್ಣರಂಜಿತ ಬಣ್ಣದ ಚಿತ್ತಾರ: ವಿಡಿಯೋ

author img

By

Published : Sep 28, 2022, 3:59 PM IST

ದಸರಾ ಗಜಪಡೆಗೆ ವರ್ಣರಂಜಿತ ಬಣ್ಣದ ಚಿತ್ತಾರ

ಮೈಸೂರಿನ ಅರಮನೆ ಆವರಣದ ಎದುರು ಗಜಪಡೆಗಳ ಅಂದವನ್ನು ಹೆಚ್ಚಿಸಲು ವರ್ಣರಂಜಿತ ಬಣ್ಣದ ಚಿತ್ತಾರಗಳನ್ನು ಆನೆಯ ಮೇಲೆ ಬಿಡಿಸಲಾಗುತ್ತಿದೆ. ಅದರ ವಿಡಿಯೋ ಸ್ಟೋರಿ ಇಲ್ಲಿದೆ.

ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸುವ ದಸರಾ ಗಜಪಡೆಯ ಅಂದ ಹೆಚ್ಚಿಸಲು ವರ್ಣರಂಜಿತ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ.

ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂಸವಾರಿಯನ್ನು ಆಕರ್ಷಣೆ ಮಾಡುವ ಪ್ರಮುಖ ಆಕರ್ಷಣೀಯ ಕೇಂದ್ರಬಿಂದು ಗಜಪಡೆಗಳು. ಇಂತಹ ಗಜಪಡೆಗಳ ಅಂದವನ್ನು ಹೆಚ್ಚಿಸಲು ವರ್ಣರಂಜಿತ ಬಣ್ಣದ ಚಿತ್ತಾರಗಳನ್ನು ಆನೆಯ ಮೇಲೆ ಬಿಡಿಸಲಾಗುತ್ತದೆ.

ಪ್ರಮುಖವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತಿದ್ದು, ಮುಖ್ಯವಾಗಿ ಆನೆಯ ಸೊಂಡಿಲಿನ ಮೇಲೆ ಗಂಡಭೇರುಂಡ, ಕಿವಿಯ ಮೇಲೆ ಶಂಕ ಚಕ್ರ, ಆನೆಯ ಹಣೆ ಮೇಲೆ ನಾಮ, ಗಂಡು ಆನೆಯ ಎರಡು ಗಂಟೆಗಳ ಮೇಲೆ ಗಿಳಿ ಹಾಗೂ ಅದರ ದೇಹದ ಎರಡು ಕಾಲುಗಳ ಮೇಲೆ ಹೂವು, ಬಳ್ಳಿ, ಎಲೆ ಆಕಾರಗಳನ್ನು ಸಾಂಪ್ರದಾಯಿಕವಾಗಿ, ನೈಸರ್ಗಿಕ ಬಣ್ಣವನ್ನು ಬಳಸಿ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ.

ಜಂಬುಸವಾರಿಯಲ್ಲಿ ಭಾಗವಹಿಸುವ ಆನೆಯ ದೇಹಕ್ಕೆ ಬಣ್ಣ ಹಾಕುತ್ತಿರುವುದು

ಜಂಬೂಸವಾರಿಯ ಹಿಂದಿನ ದಿನದ ರಾತ್ರಿ, ಈ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಇಂದು ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸುವ ಮಹೇಂದ್ರ, ಕಾವೇರಿ ಮತ್ತು ವಿಜಯ ಆನೆಗಳಿಗೆ ಕಳೆದ 15 ವರ್ಷಗಳಿಂದ ಚಿತ್ರಕಲಾ ಶಿಕ್ಷಕ ನಾಗಲಿಂಗಪ್ಪ ರಾ ಬಡಿಗೇರಿ ಅವರು ಚಿತ್ರ ಬಿಡಿಸುತ್ತಿದ್ದಾರೆ.

ಗಜಪಡೆಗೆ ಬಣ್ಣದ ಚಿತ್ತಾರ : 'ಕಳೆದ 15 ವರ್ಷಗಳಿಂದ ದಸರಾ ಗಜಪಡೆಗೆ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತಿದ್ದು, ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಬಲರಾಮ, ಅರ್ಜುನ, ಅಭಿಮನ್ಯು ಆನೆಗಳಿಗೆ ಸೇರಿದಂತೆ ವಿವಿಧ ಗಜಪಡೆಗೆ ಬಣ್ಣದ ಚಿತ್ತಾರವನ್ನು ಬಿಡಿಸಿದ ತೃಪ್ತಿ ನನಗಿದೆ' ಎಂದು ಈಟಿವಿ ಭಾರತ್​ಗೆ ಶಿಕ್ಷಕ ನಾಗಲಿಂಗಪ್ಪ ಅವರು ಮಾಹಿತಿ ನೀಡಿದರು.

ಓದಿ: ಶ್ರೀರಂಗಪಟ್ಟಣ ದಸರಾ: ಅಂಬಾರಿ ಹೊರಲಿರುವ ಮಹೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.