ನವರಾತ್ರಿಯಲ್ಲಿ ವಿಶೇಷ ಗೊಂಬೆ ಪೂಜೆ: ಮಹತ್ವ ಮತ್ತು ಐತಿಹ್ಯ

author img

By

Published : Sep 27, 2022, 7:29 PM IST

navarathri-gombe-pooje-at-mysore

ನವರಾತ್ರಿಯ ಸಂದರ್ಭದಲ್ಲಿ ವಿಶೇಷವಾಗಿ ಗೊಂಬೆ ಪೂಜೆ ಆಚರಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಮನೆಮನೆಯಲ್ಲೂ ಗೊಂಬೆ ಇರಿಸಿ ಪೂಜೆ ಮಾಡುವುದು ಸಂಪ್ರದಾಯ.

ಮೈಸೂರು: ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಇರಿಸಿ ಪೂಜೆ ಮಾಡುವುದು ಸಂಪ್ರದಾಯ. ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮೈಸೂರಿನ ರಾಜ ಒಡೆಯರ್ ಅವರು ವಿಜಯನಗರ ಸಂಸ್ಥಾನದಿಂದ ಕರ್ನಾಟಕದ ಸಿಂಹಾಸನಾಧೀಶರಾದ ಮೇಲೆ ಮೈಸೂರು ಸಂಸ್ಥಾನದಲ್ಲಿ ವಿಜಯನಗರದ ಆಚಾರ ವಿಚಾರ ಪರಂಪರೆಗಳನ್ನು ಆಚರಿಸಲು ಪ್ರಾರಂಭಿಸಿದರು.

ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆ : ಇದರಲ್ಲಿ ಪ್ರಮುಖವಾಗಿ ನವರಾತ್ರಿಯ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ಧತಿ ಆಚರಣೆಗೆ ತಂದರು. ಅದೇ ಪದ್ಧತಿ ಇದೀಗ ಹಲವು ಮನೆಗಳಲ್ಲಿ ಹಾಗೂ ಮೈಸೂರಿನ ರಾಜ ವಂಶಸ್ಥರ ಮನೆಗಳಲ್ಲಿ ನಡೆದುಕೊಂಡು ಬಂದಿದೆ.

ನವರಾತ್ರಿಯಲ್ಲಿ ವಿಶೇಷ ಗೊಂಬೆ ಪೂಜೆ : ಮಹತ್ವ ಮತ್ತು ಐತಿಹ್ಯ

ಗೊಂಬೆ ಪೂಜೆ ಮಹತ್ವ ಮತ್ತು ಹಿನ್ನೆಲೆ: ಹಿಂದೆ ಮೈಸೂರು ಸಂಸ್ಥಾನದ ಜನತೆಗೆ ಮಹಾರಾಜರು ಈ ನವರಾತ್ರಿ ಸಂದರ್ಭದಲ್ಲಿ ತಮ್ಮ ಮನೆಗಳಿಗೂ ಬರಲಿ ಎಂಬ ಆಸೆ. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದರ ಸಂಕೇತವಾಗಿ ತಮ್ಮ ಮನೆಗಳಲ್ಲಿ ಪಟ್ಟದ ಗೊಂಬೆ ಇರಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಮೊದಲ ಮೆಟ್ಟಿಲಿನಲ್ಲಿ ರಾಜರಾಣಿ ಇಟ್ಟು, ನಂತರ ಕಳಸ ಅನಂತರ ಬೇರೆ ಬೇರೆ ಗೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.

ಇಲ್ಲಿ ಪ್ರಮುಖವಾಗಿ ನವದುರ್ಗೆಯರು, ದಶಾವತಾರ, ಅಷ್ಟಲಕ್ಷ್ಮಿ ಅವರು, ಸಪ್ತಮಾತ್ರಿಕೆಯರು, ರಾಮಾಯಣ ಮಹಾಭಾರತ ದೃಶ್ಯ ತೋರಿಸುವ ಗೊಂಬೆಗಳು, ಅರಮನೆ ಅಂಬಾರಿ ಆನೆ, ಸೈನಿಕರು ಈ ರೀತಿ ರಾಜ ಪರಂಪರೆಯ ದೇವರುಗಳು ಇತ್ಯಾದಿ ಗೊಂಬೆಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಈ ಗೊಂಬೆ ಪೂಜೆಯ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅರಿಶಿಣ ಕುಂಕುಮವನ್ನು ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

ಕೋವಿಡ್​ ನಂತರ ಗೊಂಬೆಗಳ ಬೇಡಿಕೆ ಹೆಚ್ಚಳ: ಕೋವಿಡ್​ ನಂತರ ಗೊಂಬೆಗಳಿಗೆ ಬೇಡಿಕೆ ಹೆಚ್ಚಿದ್ದು, ರಾಜಸ್ಥಾನ, ಆಂಧ್ರಪ್ರದೇಶ, ಕೋಲ್ಕತ್ತಾ, ತಮಿಳುನಾಡು ಸೇರಿದಂತೆ 12ಕ್ಕೂ ಹೆಚ್ಚು ರಾಜ್ಯಗಳಿಂದ ಗೊಂಬೆಗಳನ್ನು ತರಿಸಲಾಗುತ್ತಿದೆ ಎಂದು ಗೊಂಬೆ ಮನೆ ವ್ಯವಸ್ಥಾಪಕರಾದ ರಘು ಧರ್ಮೇಂದ್ರ ಅವರು ಹೇಳುತ್ತಾರೆ.

ಇದನ್ನೂ ಓದಿ : ಶ್ರೀರಂಗಪಟ್ಟಣ ದಸರಾ: ಅಂಬಾರಿ ಹೊರಲಿರುವ ಮಹೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.