ಹೆಚ್.ಡಿ.ಕೋಟೆ: ಹಾಡಿಯ ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ ಹಂಸಲೇಖ
Published on: Jun 23, 2022, 5:50 PM IST |
Updated on: Jun 23, 2022, 5:57 PM IST
Updated on: Jun 23, 2022, 5:57 PM IST

ಹೆಚ್.ಡಿ.ಕೋಟೆ: ಹಾಡಿಯ ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ ಹಂಸಲೇಖ
Published on: Jun 23, 2022, 5:50 PM IST |
Updated on: Jun 23, 2022, 5:57 PM IST
Updated on: Jun 23, 2022, 5:57 PM IST
ಸಂಗೀತ ನಿರ್ದೇಶಕ ಹಂಸಲೇಖ ಇಂದು ತಮ್ಮ ಹುಟ್ಟುಹಬ್ಬವನ್ನು ಹೆಚ್.ಡಿ.ಕೋಟೆಯ ಬೊಮ್ಮಲಾಪುರ ಹಾಡಿಯ ಜನರೊಂದಿಗೆ ಆಚರಿಸಿಕೊಂಡರು.
ಮೈಸೂರು: ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು ತಮ್ಮ ಹುಟ್ಟುಹಬ್ಬವನ್ನು ಹೆಚ್.ಡಿ.ಕೋಟೆಯ ಬೊಮ್ಮಲಾಪುರ ಹಾಡಿಯ ಜನರೊಂದಿಗೆ ಕೇಕ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ.
ಹಾಡಿಯ ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ ಹಂಸಲೇಖ
ಇದೇ ಸಂದರ್ಭದಲ್ಲಿ ಹಾಡಿಯ ಮಕ್ಕಳ ಸಂಗೀತ ಪ್ರತಿಭೆಯನ್ನು ಗುರುತಿಸಲು ಸ್ವತಃ ಹಂಸಲೇಖ ಅವರೇ ಹಾರ್ಮೋನಿಯಂ ಹಿಡಿದು ಮಕ್ಕಳ ಧ್ವನಿ, ಸ್ವರ ಪರೀಕ್ಷೆ ಮಾಡಿದರು. ಆದಿವಾಸಿ ಜನರಿಗೆ ಸರ್ಕಾರದ ವತಿಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪತ್ನಿ ಲತಾ ಹಂಸಲೇಖ ಮತ್ತು ತಂಡದ ಸದಸ್ಯರು ಜೊತೆಗಿದ್ದರು.
ಇದನ್ನೂ ಓದಿ: ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋಸೀಟ್' ಬಿಡುಗಡೆಗೆ ಮುಹೂರ್ತ ಫಿಕ್ಸ್

Loading...