ಮೈಸೂರು ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಸೌಲಭ್ಯ: ನಾಳೆಯೇ ಖರೀದಿಸಿ

author img

By

Published : Sep 28, 2022, 9:01 PM IST

gold-card-facility-to-watch-mysore-dasara

ಮೈಸೂರು: ಮೈಸೂರು ದಸರಾ 2022 ವೀಕ್ಷಣೆಗಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಗೋಲ್ಡ್ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ.

ಮೈಸೂರು: ಮೈಸೂರು ದಸರಾ 2022 ವೀಕ್ಷಣೆಗಾಗಿ ವಿದೇಶಿ, ದೇಶಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಗೋಲ್ಡ್ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ. ಆನ್​ಲೈನ್ ಮುಖಾಂತರ ಗೋಲ್ಡ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಗೋಲ್ಡ್ ಕಾರ್ಡ್ ಪಡೆಯಲು www.mysoredasara.gov.in ಆನ್​ಲೈನ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್ ಬೆಲೆ 4,999 ರೂಪಾಯಿ ಆಗಿದೆ. ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು. ಒಮ್ಮೆ ಆನ್​ಲೈನ್ ಪಾವತಿ ದೃಢೀಕರಿಸಿದ ಬಳಿಕ ಪ್ರವಾಸಿಗರು ಗೋಲ್ಡ್ ಕಾರ್ಡ್ ಅನ್ನು ನಾಳೆ (ಸೆ. 29) ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ಮೈಸೂರಿನ ಮಯೂರ ಹೋಟೆಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯಲ್ಲಿ ಪಡೆಯಬಹುದು.

ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಹಣ ಪಾವತಿ ನಂತರ ಸ್ವೀಕೃತವಾಗುವ ಇ - ಮೇಲ್ ಪ್ರತಿ ಹಾಗೂ ಯಾವುದಾದರೊಂದು ಐಡಿ ಪ್ರೂಫ್ ಅನ್ನು ಕಡ್ಡಾಯ ಹಾಜರುಪಡಿಸಬೇಕು. ಗೋಲ್ಡ್ ಕಾರ್ಡ್​ ಪಡೆದವರಿಗೆ ದಸರಾ ಜಂಬೂಸವಾರಿ ವೀಕ್ಷಣೆ, ಪಂಜಿನ ಕವಾಯತು, ಬನ್ನಿಮಂಟಪ ವೀಕ್ಷಣೆ, ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೆಂಟ್ ಫಿಲೋಮಿನ ಚರ್ಚ್, ರೈಲ್ವೆ ಮ್ಯೂಸಿಯಂ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟಿಗೆ ಒಮ್ಮೆ ಮಾತ್ರ ಉಚಿತ ವೀಕ್ಷಣೆಗೆ ಅವಕಾಶವಿದೆ.

ಇದನ್ನೂ ಓದಿ: ಶಿವಮೊಗ್ಗ ದಸರಾ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಿದ ಕಾಫಿನಾಡು ಚಂದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.