ತಂಬಾಕಿಗೆ ಉತ್ತಮ ಬೆಲೆ ನೀಡುವಂತೆ ಆಗ್ರಹ: ಸಂಸದರನ್ನ ತರಾಟೆಗೆ ತೆಗದುಕೊಂಡ ಬೆಳೆಗಾರರು

author img

By

Published : Sep 24, 2021, 2:13 PM IST

tobacco

ತಂಬಾಕಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಹೆಚ್ಚಿನ ಬೆಲೆ ಕೊಡಿಸಬೇಕೆಂದು ಆಗ್ರಹಿಸಿ ಸಂಸದ ಪ್ರತಾಪ್ ಸಿಂಹಗೆ ತಂಬಾಕು ಬೆಳೆಗಾರರು ಮುತ್ತಿಗೆ ಹಾಕಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗಂಡಿ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು.

ಮೈಸೂರು: ತಂಬಾಕಿಗೆ ಉತ್ತಮ ಬೆಲೆ ಕೊಡಿಸುವಂತೆ ಒತ್ತಾಯಿಸಿ ಸಂಸದ ಪ್ರತಾಪ್ ಸಿಂಹಗೆ ತಂಬಾಕು ಬೆಳೆಗಾರರು ಮುತ್ತಿಗೆ ಹಾಕಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗಂಡಿ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು.

ಇಂದು ತಂಬಾಕು ಹರಾಜು ಮಾರುಕಟ್ಟೆ ಪೂಜೆಗೆಂದು ಆಗಮಿಸಿದ ಸಂಸದ ಪ್ರತಾಪ್ ಸಿಂಹ ಬೆಳ್ಳಂಬೆಳಗ್ಗೆ ಪೂಜೆ ಮಾಡಿ ಹೊರಡುವ ಸಂದರ್ಭದಲ್ಲಿ ಆಗಮಿಸಿದ ರೈತರು, ತಂಬಾಕಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೆಚ್ಚಿನ ಬೆಲೆಯನ್ನು ಕೊಡಿಸಬೇಕೆಂದು ಸಂಸದರ ಜೊತೆ ವಾಗ್ವಾದಕ್ಕೆ ಇಳಿದರು. ಉತ್ತಮ ಬೆಲೆ ಕೊಡಿಸಬೇಕೆಂದು ಆಗ್ರಹಿಸಿ ಸಂಸದರನ್ನು ಸುತ್ತುವರೆದು ಚರ್ಚಿಸಿದರು.

ಸಂಸದ ಪ್ರತಾಪ್ ಸಿಂಹರನ್ನು ತರಾಟೆಗೆ ತೆಗದುಕೊಂಡ ಬೆಳೆಗಾರರು

ಶುಭ‌ ಮುಹೂರ್ತದ ಬಗ್ಗೆ ರೈತರು ಆಕ್ರೋಶ:

ಪ್ರತಿ ವರ್ಷ ಸಾಮಾನ್ಯವಾಗಿ ಹತ್ತು ಗಂಟೆಗೆ ತಂಬಾಕು ಮಾರುಕಟ್ಟೆಗೆ ರೈತರು ಬಂದ ನಂತರ ಪೂಜೆ ಮಾಡಿ ಮಾರುಕಟ್ಟೆ ಆರಂಭಿಸಲಾಗುತ್ತಿತ್ತು. ಆದರೆ, ಈ ಬಾರಿ ಬೆಳಗ್ಗೆ ಮುಹೂರ್ತ ಚೆನ್ನಾಗಿದೆ ಎಂದು ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ.ಹೆಚ್.‌ವಿಜಯಶಂಕರ್ ಜೊತೆ ಆಗಮಿಸಿ ಪಿರಿಯಾಪಟ್ಟಣ ತಾಲೂಕಿನ ಕಗ್ಗಂಡಿ ಹರಾಜು ಕೇಂದ್ರಕ್ಕೆ ಬೆಳಗ್ಗೆ 7 ಗಂಟೆಗೆ ಬಂದು ಪೂಜೆ ಮಾಡಿದರು. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಪೂಜೆ ಮಾಡಿದ ತಕ್ಷಣ ಹರಾಜು ಪ್ರಕ್ರಿಯೆ ಪ್ರಾರಂಭ ಮಾಡಬೇಕು. ‌ಹರಾಜು ಪ್ರಕ್ರಿಯೆ 10 ಗಂಟೆಗೆ ಆರಂಭವಾಗುತ್ತದೆ. ಪೂಜೆ ಮಾಡಿದ ನಂತರ 2 ಗಂಟೆ ಯಾವುದೇ ಹರಾಜು ಪ್ರಕ್ರಿಯೆ ನಡೆಸದೇ ಇರುವುದು ಸರಿಯಲ್ಲ. ಶಾಸ್ತ್ರ ನೋಡಿ ಮಾರ್ಕೆಟ್​ ಮಾಡಲು ಆಗಲ್ಲ, ಒಳ್ಳೆಯ ಮನಸ್ಸಿರಬೇಕು. ಒಳ್ಳೆಯ ದರ ನೀಡಿದರೆ‌ ರೈತನಿಗೆ ಒಳ್ಳೆಯದಾಗುತ್ತದೆ ಎಂದು ರೈತ ಸಂಘದ ಮುಖಂಡ ಲೋಕೇಶ್ ರಾಜೇ ಅರಸ್ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಆರಂಭದಲ್ಲಿಯೇ ತಂಬಾಕು ಕಡಿಮೆ ಬೆಲೆಗೆ ಹರಾಜಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಂಬಾಕು ಬೆಳೆಗಾರರು, ಈ ರೇಟ್ ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಆರಂಭಿಕ ಬೆಲೆ ನೀಡಿಲ್ಲ, ಕೇವಲ 185 ರೂ. ಆರಂಭಿಕ ಬೆಲೆ ನೀಡಲಾಗಿದೆ. ಆದರೆ, ರೈತರ ಖರ್ಚು ಹೆಚ್ಚಾಗಿದ್ದು, ಈ ಬೆಲೆ ಸಾಕಾಗುವುದಿಲ್ಲ ಎಂದು ರೈತ ಸಂಘದ ಮುಖಂಡ ಲೋಕೇಶ್ ರಾಜೆ ಅರಸ್​ನನ್ನು ತರಾಟೆಗೆ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.