ಕ್ರೀಡಾಂಗಣ ಉನ್ನತೀಕರಣಕ್ಕೆ ಕ್ರೀಡಾ ತಜ್ಞರ ಸಮಿತಿ ರಚನೆ

author img

By

Published : Sep 22, 2021, 8:15 PM IST

vidhanasoudha

ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ವಿವರವಾದ ವರದಿಯನ್ನು ಸಮಿತಿಯು ಸಲ್ಲಿಸಬೇಕು ಎಂದು ಆದೇಶಿಸಿದ ಅವರು, ಸಮಿತಿ ಸದಸ್ಯರು ನೀಡಿದ ವರದಿ ಆಧರಿಸಿ ರಾಜ್ಯದಲ್ಲಿರುವ ಎಲ್ಲ ಕ್ರೀಡಾ ವಸತಿ ನಿಲಯ ಉನ್ನತಿಕರಿಸಲಾಗುವುದು. ಅಲ್ಲದೇ, ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವಂತೆ ವೈಜ್ಞಾನಿಕವಾಗಿ ಉನ್ನತೀಕರಿಸಲಾಗುವುದು..

ಮಂಡ್ಯ : ರಾಜ್ಯದ ಕ್ರೀಡಾ ವಸತಿ ನಿಲಯ ಹಾಗೂ ಜಿಲ್ಲೆಯ ಕ್ರೀಡಾಂಗಣವನ್ನ ಅಂತಾರಾಷ್ಟ್ರೀಯ ದರ್ಜೆಯ ಮಟ್ಟಕ್ಕೆ ಆಧುನೀಕರಣಕ್ಕೆ ವರದಿ ನೀಡಲು ಕ್ರೀಡಾ ತಜ್ಞರ ಸಮಿತಿ ರಚಿಸಲು ಸಚಿವ ಡಾ. ನಾರಾಯಣಗೌಡ ಸೂಚಿಸಿದ್ದರು. ಈ ಹಿನ್ನೆಲೆ ಕ್ರೀಡಾ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಕ್ರೀಡಾಂಗಣ ಹಾಗೂ ವಸತಿ ನಿಲಯದ ಬಗ್ಗೆ ಶಾಸಕರು, ಕ್ರೀಡಾಪಟುಗಳು ಮನವಿ ಮಾಡಿದ ಹಿನ್ನೆಲೆ ಸಚಿವರು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ವೆಂಕಟೇಶ್ ಸೇರಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

sports-expert-committee-formation
ಕ್ರೀಡಾ ತಜ್ಞರ ಸಮಿತಿ ರಚನೆ

ಬಳಿಕ ತಕ್ಷಣವೇ ನುರಿತ ಕ್ರೀಡಾಪಟುಗಳ ಸಮಿತಿ ರಚಿಸಿ, ಕ್ರೀಡಾ ವಸತಿ ನಿಲಯ ಹಾಗೂ ಕ್ರೀಡಾಂಗಣಗಳ ಉನ್ನತೀಕರಣ ಸಂಬಂಧ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಕ್ರೀಡಾಪಟುಗಳು ಹಾಗೂ ಅಧಿಕಾರಿಯನ್ನೊಳಗೊಂಡ 5 ಜನರ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಕ್ರೀಡಾ ತಜ್ಞರ ಸಮಿತಿ ಸದಸ್ಯರು

1. ವಿ.ಆರ್ ರಘುನಾಥ್, ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ ಪ್ರಶಸ್ತಿ ವಿಜೇತರು.

2. ಹೊನ್ನಪ್ಪ ಗೌಡ, ಕಬಡ್ಡಿ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತರು.

3. ಎಸ್. ಅರವಿಂದ್, ಕ್ರಿಕೆಟ್ ಆಟಗಾರ, ಕರ್ನಾಟಕ ರಣಜಿ ತಂಡದ ಬೌಲಿಂಗ್ ಕೋಚ್.

4. ಬಿ.ಜಿ ನಾಗರಾಜು, ಮಾಜಿ ಅಥ್ಲೆಟ್ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತರು.

5. ಡಾ. ಜಿತೇಂದ್ರ ಶೆಟ್ಟಿ, ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

sports-expert-committee-formation
ಕ್ರೀಡಾ ತಜ್ಞರ ಸಮಿತಿ ರಚನೆ
ಕ್ರೀಡಾ ಇಲಾಖೆಯ ಕ್ರಾಂತಿಕಾರಿ ಹೆಜ್ಜೆ : ಒಲಿಂಪಿಕ್, ಏಷ್ಯನ್ ಗೇಮ್ಸ್‌ನಂತಹ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಪದಕ‌ ಗೆಲ್ಲಲು ಅತ್ಯಾಧುನಿಕವಾದ ಸೌಲಭ್ಯ ಕೂಡ ನೀಡಬೇಕು. ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಬೇಕು ಎನ್ನುವ ಬಗ್ಗೆ ಕ್ರೀಡಾ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದರು. ಸಮಿತಿಯು ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ಕ್ರೀಡಾ ವಸತಿ ನಿಲಯಗಳಿಗೆ ಹಾಗೂ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಸ್ಥಿತಿಗತಿಗಳ ಅಧ್ಯಯನ ಮಾಡಬೇಕು. ವೈಜ್ಞಾನಿಕವಾಗಿ ಉನ್ನತೀಕರಣಗೊಳಿಸುವುದಕ್ಕೆ ಏನೇನು ಕ್ರಮ ವಹಿಸಬೇಕು. ಅಂತರಾಷ್ಟ್ರೀಯ ಗುಣಮಟ್ಟಕ್ಕೆ ವ್ಯವಸ್ಥೆಯನ್ನು ಬದಲಾಯಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿಯು ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.

ಎರಡು ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸಿ : ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ವಿವರವಾದ ವರದಿಯನ್ನು ಸಮಿತಿಯು ಸಲ್ಲಿಸಬೇಕು ಎಂದು ಆದೇಶಿಸಿದ ಅವರು, ಸಮಿತಿ ಸದಸ್ಯರು ನೀಡಿದ ವರದಿ ಆಧರಿಸಿ ರಾಜ್ಯದಲ್ಲಿರುವ ಎಲ್ಲ ಕ್ರೀಡಾ ವಸತಿ ನಿಲಯ ಉನ್ನತಿಕರಿಸಲಾಗುವುದು. ಅಲ್ಲದೇ, ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವಂತೆ ವೈಜ್ಞಾನಿಕವಾಗಿ ಉನ್ನತೀಕರಿಸಲಾಗುವುದು. ಆ ಮೂಲಕ ಪ್ಯಾರಿಸ್ ಒಲಿಂಪಿಕ್‍ಗೆ ನಮ್ಮ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಪ್ರಯತ್ನಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ಹೇಳಿದ್ದಾರೆ.

ಓದಿ: ಮಲೆಮಹದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.