ಮೈಷುಗರ್ ಉಳಿವಿಗಾಗಿ ಮಳವಳ್ಳಿ ಶಾಸಕ ಕೆ. ಅನ್ನಿದಾನಿ ಪಾದಯಾತ್ರೆ

author img

By

Published : Oct 12, 2021, 10:22 PM IST

mla-k-annadani-padaytre-for-my-sugar-factory

ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಮತ್ತು ಸರ್ಕಾರಿ ಸ್ವಾಮ್ಯದಲ್ಲೇ ಈ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಕೆ.ಅನ್ನದಾನಿ ಇಂದು ಸರ್ಕಾರದ ಗಮನ ಸೆಳೆಯಲು ಮಳವಳ್ಳಿಯಿಂದ ಮಂಡ್ಯಕ್ಕೆ ಕಾರ್ಯಕರ್ತರ ಜೊತೆ ಪಾದಯಾತ್ರೆ ಮಾಡಿದರು.

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಮತ್ತು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಕೆ.ಅನ್ನದಾನಿಯವರು ಇಂದು ಸರ್ಕಾರದ ಗಮನ ಸೆಳೆಯಲು ಪಕ್ಷದ ನೂರಾರು ಕಾರ್ಯಕರ್ತರ ಜೊತೆ ಸೇರಿ ಪಾದಯಾತ್ರೆ ನಡೆಸಿದರು.

ಮೈಷುಗರ್ ಉಳಿವಿಗಾಗಿ ಮಳವಳ್ಳಿ ಶಾಸಕ ಕೆ. ಅನ್ನಿದಾನಿ ಪಾದಯಾತ್ರೆ

ಪಾದಯಾತ್ರೆಗೂ ಮುನ್ನ ಪಕ್ಷದ ಮುಖಂಡರ ಜೊತೆ ಮಳವಳ್ಳಿ ಪಟ್ಟಣದ ಗಂಗಾಂಧರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ರು. ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ, ಮಾತನಾಡಿದ ಶಾಸಕ ಅನ್ನದಾನಿಯವರು, ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣ ಮಾಡದಂತೆ ಜಿಲ್ಲೆಯ ಎಲ್ಲಾ ಶಾಸಕರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ನಾನು ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೆ. ಅದರಂತೆ ಇಂದು ಪಾದಯಾತ್ರೆ ಮಾಡುತ್ತಿರುವುದಾಗಿ ಶಾಸಕ ಡಾ. ಕೆ. ಅನ್ನದಾನಿ ತಿಳಿಸಿದರು.

ಇನ್ನು ಪಾದಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸೇರಿದಂತೆ ಅನ್ನದಾನಿ ಅ ಭಿಮಾನಿಗಳು ಪಟಾಕಿ ಸಿಡಿಸಿದ್ರು. ನೂರಾರು ಸಂಖ್ಯೆಯಲ್ಲಿದ್ದ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪಾದಯಾತ್ರೆ ಆರಂಭವಾಗಿದ್ದು, ಮಳವಳ್ಳಿ ಪಟ್ಟಣ ಹಿಟ್ಟನಹಳ್ಳಿಕೊಪ್ಪಲು, ಚಿಕ್ಕಮಲಗೂಡು ಮಾರ್ಗವಾಗಿ ಮಂಡ್ಯಕ್ಕೆ ಆಗಮಿಸಿದರು. ಬಳಿಕ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.