ಸುತ್ತುಕಟ್ಟೆ ಬಳಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ ಪ್ರಕರಣಕ್ಕೆ ಟ್ವಿಸ್ಟ್

author img

By

Published : Oct 16, 2021, 8:48 PM IST

Mandya sutkatte unknown person dead body found case updates

ಮೃತ ರವಿ ಹಾಗೂ ಸುಬ್ರಮಣ್ಯ ಎಂಬಾತ ಬೆಲಸಿಂದ ಕಿರು ಅರಣ್ಯ ಪ್ರದೇಶದ ಸರ್ವೆ ನಂಬರ್ 76ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಣೆ ಮಾಡುತ್ತಿದ್ದ ವೇಳೆ ಚನ್ನರಾಯಪಟ್ಟಣ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋದ ವೇಳೆ ರವಿ ತಾವು ಬಂದ ಬೈಕ್ ಅನ್ನು ಕಬ್ಬಿನಗದ್ದೆಯಲ್ಲಿ ನಿಲ್ಲಿಸಿರುವುದಾಗಿ ತಿಳಿಸಿ ಸ್ಥಳವನ್ನು ತೋರಿಸಿದ್ದಾನೆ..

ಮಂಡ್ಯ : ತಾಲೂಕಿನ ಹುನುಗನಹಳ್ಳಿ ಕಾಲೋನಿಯ ಸುತ್ತುಕಟ್ಟೆ ಬಳಿ ಗುರುವಾರ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ವಶದಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವುದು ದೃಢಪಟ್ಟಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಸಿಐಡಿ ಅಧಿಕಾರಿಗಳು ಶವಾಗಾರ ಹಾಗೂ ಮೃತದೇಹ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಲವು ಮಾಹಿತಿ ಪಡೆದುಕೊಂಡಿದ್ದಾರೆ.

ಮೃತನನ್ನು ಹೊಳೆನರಸೀಪುರ ತಾಲೂಕಿನ ದೊಡ್ಡಬ್ಯಾಗತವಳ್ಳಿ ಗ್ರಾಮದ ರವಿ(46) ಎಂದು ಗುರುತಿಸಲಾಗಿದೆ. ಹೇಮಾವತಿ ಎಡದಂಡೆ ನಾಲೆಯಿಂದ ಕೆರೆಗಳಿಗೆ ಬಿಡುತ್ತಿದ್ದ ನೀರಿನ ಪರಿವೀಕ್ಷಣೆ ಸಮಯದಲ್ಲಿ ಕಿರಿಯ ಎಂಜಿನಿಯರ್ ಎನ್ ಜೆ ಅಭಿಷೇಕ್ ನಾಲೆಯಲ್ಲಿದ್ದ ಶವವನ್ನು ಗಮನಿಸಿ ಬಸರಾಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕೈಗಳನ್ನು ಟವೆಲ್​​ನಿಂದ ಹಿಂದಕ್ಕೆ ಕಟ್ಟಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ, ಯಾರೋ ಕೊಲೆ ಮಾಡಿ ಶವವನ್ನು ನಾಲೆಯಲ್ಲಿ ಬಿಸಾಡಿರಬಹುದೆಂದು ಶಂಕಿಸಲಾಗಿತ್ತು.

ಸ್ಥಳಕ್ಕೆ ಡಿವೈಎಸ್ಪಿ ಟಿ.ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸರಾಳು ಪೊಲೀಸರು, ಎಲ್ಲ‌ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಆಗ ಆರೋಪಿ ರವಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ತಪ್ಪಿಸಿಕೊಂಡು ನಾಲೆಗೆ ಬಿದ್ದು ಪಟ್ಟಿರುವುದು ದೃಢಪಟ್ಟಿದೆ. ಹೀಗಾಗಿ, ಈ ಪ್ರಕರಣವನ್ನು ಕಸ್ಟೋಡಿಯಲ್ ಎಂದು ಪರಿಗಣಿಸಲಾಗಿದೆ.

ಮೃತ ರವಿ ಹಾಗೂ ಸುಬ್ರಮಣ್ಯ ಎಂಬಾತ ಬೆಲಸಿಂದ ಕಿರು ಅರಣ್ಯ ಪ್ರದೇಶದ ಸರ್ವೆ ನಂಬರ್ 76ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಣೆ ಮಾಡುತ್ತಿದ್ದ ವೇಳೆ ಚನ್ನರಾಯಪಟ್ಟಣ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋದ ವೇಳೆ ರವಿ ತಾವು ಬಂದ ಬೈಕ್ ಅನ್ನು ಕಬ್ಬಿನಗದ್ದೆಯಲ್ಲಿ ನಿಲ್ಲಿಸಿರುವುದಾಗಿ ತಿಳಿಸಿ ಸ್ಥಳವನ್ನು ತೋರಿಸಿದ್ದಾನೆ.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೈಕನ್ನು ಗದ್ದೆಯಿಂದ ಹೊರಗೆ ತೆಗೆಯುತ್ತಿದ್ದ ಸಂದರ್ಭದಲ್ಲಿ ಅವರೆಲ್ಲರನ್ನು ದೂರಕ್ಕೆ ತಳ್ಳಿ ತಪ್ಪಿಸಿಕೊಂಡಿದ್ದಾನೆಂದು ಹೇಳಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅಧಿಕಾರಿಗಳಿಂದ ಪರಿಶೀಲನೆ : ರವಿಯ ಶವ ಪತ್ತೆಯಾದ ಹಿನ್ನೆಲೆ ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ, ಮಹಮ್ಮದ್ ಶರೀಫ್, ಇನ್ಸ್ ಪೆಕ್ಟರ್ ಶಂಕರಪ್ಪ ಮಂಡ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವ ಸಿಕ್ಕಿದ ಜಾಗ ಹಾಗೂ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದ್ದರು.

ಇವರ ಜೊತೆಗೆ ಮಂಡ್ಯ ಡಿವೈಎಸ್ಪಿ ಟಿ.ಮಂಜುನಾಥ್, ಬಸರಾಳು ಸಬ್ ಇನ್ಸ್‌ಪೆಕ್ಟರ್ ಜಯಗೌರಿ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಂಡ್ಯ ಜೆಎಂಎಫ್​​ಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ಶವವನ್ನು ವಾರಸುದಾರರ ವಶಕ್ಕೆ ನೀಡಲಾಯಿತು.

ಇದನ್ನೂ ಓದಿ: ಬಲವಂತದ ಮತಾಂತರ ಭೀತಿ: ರಾಜ್ಯದ ಚರ್ಚ್​​ಗಳ ಸರ್ವೆ ನಡೆಸಲು ಗೂಳಿಹಟ್ಟಿ ನೇತೃತ್ವದ ಸಮಿತಿ ಶಿಫಾರಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.