ವೈಕುಂಠ ಏಕಾದಶಿ ಆಚರಣೆಗೆ ಕೊರೊನಾ ಬ್ರೇಕ್: ದೇವರ ಫೋಟೋ ಹೊರಗಿಟ್ಟು ಪೂಜೆ ಸಲ್ಲಿಸಿದ ಭಕ್ತರು

author img

By

Published : Jan 13, 2022, 7:14 PM IST

Break for the Vaikuntha Ekadashi Celebration

ವೈಕುಂಠ ಏಕಾದಶಿಗೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ ಶ್ರೀರಂಗನ ದೇಗುಲ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ ದೇವರ ದರ್ಶನ ಪಡೆಯಲು ಬಂದಂತಹ ಭಕ್ತಾದಿಗಳು ದೇವರ ಪೋಟೋವನ್ನು ಹೊರಗಿಟ್ಟು ಪೂಜೆ ಸಲ್ಲಿಸಿದರು.

ಮಂಡ್ಯ: ಕೊರೊನಾ ಹಿನ್ನೆಲೆ ವೈಕುಂಠ ಏಕಾದಶಿ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಹಾಗಾಗಿ ಭಕ್ತರು ದೇವರ ಫೋಟೋವನ್ನು ಹೊರಗಿಟ್ಟು ಪೂಜೆ ಸಲ್ಲಿಸಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ದೇವರ ಫೋಟೋ ಹೊರಗಿಟ್ಟು ಪೂಜೆ ಸಲ್ಲಿಸಿದ ಭಕ್ತರು

ವೈಕುಂಠ ಏಕಾದಶಿಗೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ ಶ್ರೀರಂಗನ ದೇಗುಲ ಬಂದ್ ಮಾಡಲಾಗಿತ್ತು. ದೇವರ ದರ್ಶನ ಪಡೆಯಲು ಬಂದಂತಹ ಭಕ್ತಾದಿಗಳು ದೇವರ ಫೋಟೋವನ್ನು ಹೊರಗಿಟ್ಟು ಪೂಜೆ ಸಲ್ಲಿಸಿದರು. ಬೀದಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಹಬ್ಬದಲ್ಲಿ ಮೈಮರೆಯುವುದು ಬೇಡ, ಕೋವಿಡ್​ ನಿಯಮ ಪಾಲಿಸೋಣ: ಜನತೆಗೆ ಬಿಎಸ್​ವೈ ಕರೆ

ಕೊರೊನಾ ಮೂರನೇ ಅಲೆ ತಡೆಯುವಂತೆ ಏಕಾದಶಿಯಂದು ಭಕ್ತರು ವೆಂಕಟೇಶ್ವರನಲ್ಲಿ ಪ್ರಾರ್ಥನೆ ಮಾಡಿದರು. ನೂರಾರು ಭಕ್ತರು ಬೀದಿಯಲ್ಲಿ ಕೂರಿಸಿರೋ ವೆಂಕಟೇಶ್ವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.