Dysp ವಿರುದ್ಧ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿರುವ ಆರೋಪ.. ಎದ್ದುಬಿದ್ದು ಸಿಎಂಗೆ ಕಂಪ್ಲೇಂಟ್ ಮಾಡಿದ ಮಹಿಳೆ..

author img

By

Published : Oct 15, 2021, 5:31 PM IST

Updated : Oct 15, 2021, 6:18 PM IST

Maheshwari

ಮಂಡ್ಯ ಡಿವೈಎಸ್​ಪಿ ಮಂಜುನಾಥ್ ಅವರು ತಮ್ಮ ಪತಿ ವಕೀಲರು ಎಂಬುದನ್ನು ಪರಿಗಣಿಸದೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ..

ಮಂಡ್ಯ : ಪತಿಗೆ ಹಾಗೂ ತನಗೆ ಡಿವೈಎಸ್​ಪಿಯೊಬ್ಬರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಭೇಟಿಗಾಗಿ ಮುಗಿಬಿದ್ದ ಘಟನೆ ನಗರದಲ್ಲಿ ನಡೆದಿದೆ.

ಡಿವೈಎಸ್​ಪಿ ಮಂಜುನಾಥ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಹಿಳೆ..

ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ದೂರುದಾರರಾದ ಮಹೇಶ್ವರಿ ಎಂಬುವರು, ಮಂಡ್ಯ ಡಿವೈಎಸ್​ಪಿ ಮಂಜುನಾಥ್ ಅವರು ತಮ್ಮ ಪತಿ ವಕೀಲರು ಎಂಬುದನ್ನು ಪರಿಗಣಿಸದೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಅಲ್ಲದೇ, ಪತಿ ಮೇಲೆ ಇದ್ದ ಪ್ರಕರಣವನ್ನು ಕೈಬಿಡಬೇಕಾದರೆ ಹಣ ನೀಡಬೇಕು ಎಂದು ನನಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.

allegation-on-dysp
ಡಿವೈಎಸ್​ಪಿ ವಿರುದ್ಧ ದೂರು

ಈ ಕುರಿತು ಕ್ರಮ ಕೈಗೊಳ್ಳುವಂತೆ ನಾನು ಸಿಎಂ ಭೇಟಿಗೆ ಮುಂದಾದಾಗ ನನ್ನನ್ನು ತಳ್ಳಲಾಯಿತು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಈಗಾಗಲೇ ಎಸ್​ಪಿ ಅವರಿಗೂ ದೂರು ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.

allegation-on-dysp
ಡಿವೈಎಸ್​ಪಿ ವಿರುದ್ಧ ದೂರು

ಓದಿ: ನೀವು ಒಂದು ಕುಟುಂಬ ಹಿನ್ನೆಲೆ ಗಾಯಕರಾಗಿದ್ದೀರಿ : ಸಿದ್ದರಾಮಯ್ಯಗೆ CM ತಿರುಗೇಟು

Last Updated :Oct 15, 2021, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.