ಪಿಎಫ್ಐ ಕೊಪ್ಪಳ ಜಿಲ್ಲಾಧ್ಯಕ್ಷನ ಖಾತೆ ಜಾಲಾಡಲು ಬ್ಯಾಂಕ್​ಗಳಿಗೆ ನೋಟಿಸ್

author img

By

Published : Sep 29, 2022, 1:17 PM IST

Ganagavathi

ಸೆ.23ರಂದು ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ಫೈಯಾಜ್​ ಅವರನ್ನು ಪೊಲೀಸರು ಬಂಧಿಸಿದ್ದು, ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸರು ಅಬ್ದುಲ್​ ಹೊಂದಿರಬಹುದಾದ ಖಾತೆಗಳ ಮಾಹಿತಿಗಾಗಿ ನಗರದ ಸುಮಾರು 20ಕ್ಕೂ ಅಧಿಕ ಬ್ಯಾಂಕ್​ಗಳಿಗೆ ನೋಟಿಸ್​ ನೀಡಿದ್ದಾರೆ.

ಗಂಗಾವತಿ(ಕೊಪ್ಪಳ): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ಫೈಯಾಜ್​ ಅವರ ಕೊಪ್ಪಳದ ಈದ್ಗಾ ಕಾಲೋನಿಯಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ್ದ ಪೊಲೀಸರು ಸೆ.23ರಂದು ಅಬ್ದುಲ್​ ಫೈಯಾಜ್​ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದೀಗ ಮತ್ತೊಂದು ಹೆಜ್ಜೆ ಇರಿಸಿರುವ ಪೊಲೀಸರು ನಗರದಲ್ಲಿ ಫೈಯಾಜ್​ ಹೊಂದಿರಬಹುದಾದ ಬ್ಯಾಂಕಿನ ಖಾತೆಗಳ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ನಗರದ ಸುಮಾರು 20ಕ್ಕೂ ಹೆಚ್ಚು ಬ್ಯಾಂಕುಗಳಿಗೆ ನೋಟಿಸ್ ನೀಡಿರುವ ಪೊಲೀಸರು, ಅಬ್ದುಲ್ ಫೈಯಾಜ್ ಅಬ್ದುಲ್ ನಾಜೀರ್​ಸಾಬ್ ಹೊಂದಿರಬಹುದಾದ ಅಥವಾ ಅವರ ಮೊಬೈಲ್ ಮತ್ತು ಆಧಾರ್ ಕಾರ್ಡ್​ಗೆ ಲಿಂಕ್ ಆಗಿರುವ ಖಾತೆಗಳ ಮಾಹಿತಿ ನೀಡುವಂತೆ ಬ್ಯಾಂಕ್​ಗಳಿಗೆ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ನಾಪತ್ತೆ: ವಿಶೇಷ ತಂಡ ರಚಿಸಿ ಪೊಲೀಸರಿಂದ ತಲಾಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.