ಕೊಪ್ಪಳ: ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಪುಷ್ಪವೃಷ್ಟಿಯ ಸ್ವಾಗತ

author img

By

Published : Sep 25, 2021, 5:34 PM IST

Updated : Sep 25, 2021, 7:47 PM IST

Muslim committee made vaccine campaign

ಕೊಪ್ಪಳದ ನಗರದಲ್ಲಿ ವಿವಿಧ ಮುಸ್ಲಿಂ ಕಮಿಟಿಗಳು ಸೇರಿಕೊಂಡು ಲಸಿಕಾ ಅಭಿಯಾನ ನಡೆಸಿದರು. ಈ ವೇಳೆ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಬರುವವರಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತ ಕೋರಲಾಯಿತು.

ಕೊಪ್ಪಳ: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ವ್ಯಾಕ್ಸಿನ್​ ಪಡೆಯಲು ಉತ್ತೇಜನ ನೀಡಲಾಗುತ್ತಿದೆ. ಅದರಂತೆ ನಗರದಲ್ಲಿ ಲಸಿಕೆ ಪಡೆಯಲು ಬಂದವರಿಗೆ ಪುಷ್ಪವೃಷ್ಟಿ ಮಾಡಲಾಯಿತು.

ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಪುಷ್ಪವೃಷ್ಟಿಯ ಸ್ವಾಗತ

ಇಂದು ನಗರದ ದೇವರಾಜ ಅರಸ್ ಕಾಲೋನಿಯ ಇಲಾಹಿ ಮಸೀದಿ ಸಮಿತಿ, ನೌಜವಾನ್ ಸಮಿತಿ ಹಾಗೂ ಆರೋಗ್ಯ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಯಿತು. ಈ ವೇಳೆ ವ್ಯಾಕ್ಸಿನ್​ ಪಡೆದವರಿಗೆ ಕಮಿಟಿ ಸದಸ್ಯರು ಹೂ ಮಳೆಗೆರೆಯುವ ಮೂಲಕ ಉತ್ತೇಜನ ನೀಡಿದ್ದಾರೆ. ಇದರ ಜೊತೆಗೆ ಒಂದು ನೀರಿನ ಬಾಟಲಿ ಹಾಗೂ ಬಿಸ್ಕೇಟ್​ ನೀಡಿದ್ದಾರೆ. ಇನ್ನು ವಯಸ್ಸಾದವರು ಬಂದರೆ ಅವರಿಗೆ ಉರುಗೋಲು ನೀಡಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಜನರಿಗೆ ವ್ಯಾಕ್ಸಿನ್​ ಹಾಕಲಾಗಿದೆ. ಲಸಿಕಾ ಅಭಿಯಾನದಲ್ಲಿ ಜನರನ್ನು ಪ್ರೇರೇಪಿಸುವ ಇಂತಹ ಕಾರ್ಯಕ್ರಮಗಳು ಸ್ವಾಗತಾರ್ಹ ಕೆಲಸ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಾರಿಗುಂಟು ಯಾರಿಗಿಲ್ಲ.. ಲಸಿಕೆ ಹಾಕಿಸಿಕೊಂಡವರಿಗೆ ಕಿವಿಯೋಲೆ ಜತೆಗೆ ಸೀರೆ..

Last Updated :Sep 25, 2021, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.