ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಸಿಗದ ಅನುಮತಿ: ಗಣೇಶ ನಿಮಜ್ಜನವೇ ಮುಂದೂಡಿಕೆ

author img

By

Published : Sep 19, 2021, 7:19 AM IST

koppal

ಕೊಪ್ಪಳದಲ್ಲಿ ಪ್ರತಿಷ್ಠಾಪಿಸಲಾಗಿದ್ದ 'ಕೊಪ್ಪಳ್​ ಕಾ ರಾಜಾ' ಗಣೇಶಮೂರ್ತಿ ನಿಮಜ್ಜನ ಮಾಡಲು ಸಂಘಟಕರು ಕಳೆದ ದಿನ ನಿರ್ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ.‌ ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ನಡೆಯಬೇಕಿದ್ದ ನಿಮಜ್ಜನ ಮೆರವಣಿಗೆಯನ್ನು ಸಂಘಟಕರು ಸೋಮವಾರಕ್ಕೆ ಮುಂದೂಡಿದ್ದಾರೆ.

ಕೊಪ್ಪಳ: ಗಣೇಶ ಮೂರ್ತಿ ನಿಮಜ್ಜನದ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಕೊನೆಗೆ ನಿಮಜ್ಜನವನ್ನೇ ಸಂಘಟಕರು ಮುಂದೂಡಿದ್ದಾರೆ.

ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ 'ಕೊಪ್ಪಳ್​ ಕಾ ರಾಜಾ' ಗಣೇಶಮೂರ್ತಿ ನಿಮಜ್ಜನ ಮಾಡಲು ಸಂಘಟಕರು ಶನಿವಾರ ನಿರ್ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ.‌ ಡಿಜೆ ಬಳಸದಂತೆ ಸಂಘಟಕರಿಗೆ ಸೂಚನೆ ನೀಡಿತ್ತು.

ಗಣೇಶ ನಿಮಜ್ಜನವನ್ನೇ ಮುಂದೂಡಿದ ಸಂಘಟಕರು

ಡಿಜೆಗೆ ಅನುಮತಿ‌ ನೀಡುವಂತೆ ಸಂಘಟಕರು ಜಿಲ್ಲಾಡಳಿತ, ಪೊಲೀಸರಿಗೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ಜಿಲ್ಲಾಡಳಿತ ತಿರಸ್ಕಾರ ಮಾಡಿತ್ತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ನಡೆಯಬೇಕಿದ್ದ ನಿಮಜ್ಜನ ಮೆರವಣಿಗೆಯನ್ನು ಸಂಘಟಕರು ಸೋಮವಾರಕ್ಕೆ ಮುಂದೂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.