ಸರ್ಕಾರಿ ಕಚೇರಿಯಲ್ಲಿ ಲಂಚಾವತಾರ.. ಗ್ರಾಮ ಪಂಚಾಯತ್​ ಪಿಡಿಓ, ಕಾರ್ಯದರ್ಶಿ ಎಸಿಬಿ ಬಲೆಗೆ

author img

By

Published : Jan 13, 2022, 4:40 PM IST

ACB trap secretary, PDO when getting bribes

ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್​ ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರುಲ್ಲಾ ಹಕ್ ಅವರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರು ಜಯ ಕುಮಾರ್ ಎಂಬುವವರಿಗೆ 6000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.

ಕೊಪ್ಪಳ: ಲಂಚ ಪಡೆಯುವಾಗ ಗ್ರಾಮ ಪಂಚಾಯತ್​ ಪಿಡಿಓ ಹಾಗೂ ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತ್​ ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರುಲ್ಲಾ ಹಕ್ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳು.

ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತ್​ ಪಿಡಿಓ, ಕಾರ್ಯದರ್ಶಿ

ಆಸ್ತಿಗೆ ಸಂಬಂಧಿಸಿದಂತೆ 11ಬಿ ಮಾಡಿಕೊಡಲು ಬಂಡಿಬಸಪ್ಪ ಕ್ಯಾಂಪ್ ನಿವಾಸಿ ವಿಜಯ ಕುಮಾರ್ ಎಂಬುವರಿಗೆ 6000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ವಿಜಯಕುಮಾರ್ ಅವರಿಂದ ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಸಿನಿಮೀಯ ಸ್ಟೈಲ್​ನಲ್ಲಿ ಚೇಸಿಂಗ್​.. ಮಂಗಳೂರಲ್ಲಿ ಕಳ್ಳರ ಹಿಡಿದ ಪೊಲೀಸ್​-ವಿಡಿಯೋ

ಕೊಪ್ಪಳ ಎಸಿಬಿ ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನ ಹಾಗೂ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರುಲ್ಲಾ ಹಕ್​ರನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.