ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡಿರುವುದು ಒಳ್ಳೆಯದು: ಸಚಿವ ಖೂಬಾ
Updated on: Aug 19, 2021, 10:20 PM IST

ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡಿರುವುದು ಒಳ್ಳೆಯದು: ಸಚಿವ ಖೂಬಾ
Updated on: Aug 19, 2021, 10:20 PM IST
ಜನಾರ್ದನರೆಡ್ಡಿ ಅವರು ಬಳ್ಳಾರಿಯಿಂದ ಇಷ್ಟುದಿನ ಹೊರಗಡೆ ಇದ್ದರು. ಬಳ್ಳಾರಿಗೆ ಬರಲು ಅವರು ಕಾನೂನು ಹೋರಾಟ ಮಾಡಿದ್ದಾರೆ. ನ್ಯಾಯಾಲಯ ಈಗ ಅವರಿಗೆ ಬಳ್ಳಾರಿಗೆ ಬರಲು ಅನುಮತಿ ನೀಡಿರುವುದು ಒಳ್ಳೆಯದು ಎಂದು ಭಗವಂತ ಖೂಬಾ ಹೇಳಿದರು.
ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರಲು ಕೋರ್ಟ್ ಅನುಮತಿ ನೀಡಿರುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಆಗಮಿಸಿದ ಅವರು ಪ್ರಸಿದ್ದ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದುಕೊಂಡರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನರೆಡ್ಡಿ ಅವರು ಬಳ್ಳಾರಿಯಿಂದ ಇಷ್ಟುದಿನ ಹೊರಗಡೆ ಇದ್ದರು. ಬಳ್ಳಾರಿಗೆ ಬರಲು ಅವರು ಕಾನೂನು ಹೋರಾಟ ಮಾಡಿದ್ದಾರೆ. ನ್ಯಾಯಾಲಯ ಈಗ ಅವರಿಗೆ ಬಳ್ಳಾರಿಗೆ ಬರಲು ಅನುಮತಿ ನೀಡಿರುವುದು ಒಳ್ಳೆಯದು ಎಂದರು .
ಇನ್ನು ಯಾದಗಿರಿಯಲ್ಲಿ ನಾಡ ಬಂದೂಕಿನಿಂದ ಸ್ವಾಗತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಪೊಲೀಸರ ಅಮಾನತು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಕಾರ್ಯಕ್ರಮದಲ್ಲಿರುವುದರಿಂದ ಬಿಡುವಾದಾಗ ಆ ಬಗ್ಗೆ ತಿಳಿದುಕೊಳ್ಳುತ್ತೇನೆ. ಇನ್ನು ದೇಶದಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ಆದರೆ, ಈ ಬಾರಿ ಅಧಿಕ ಮಳೆ ಹಾಗೂ ಬೇಗ ಮಳೆಯಾಗಿದ್ದರಿಂದ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಸಲಾಗುವುದು ಸಚಿವ ಹೇಳಿದರು.
