ಕನಕಗಿರಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ಪತ್ತೆ

author img

By

Published : Sep 10, 2022, 12:24 PM IST

Updated : Sep 10, 2022, 1:37 PM IST

kn_GVT_01_12_Illige

ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಇದೀಗಾ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದಿವೆ.

ಗಂಗಾವತಿ(ಕೊಪ್ಪಳ): ತಾಲೂಕಿನ ಕನಕಗಿರಿ ಕ್ಷೇತ್ರ ಇತ್ತೀಚೆಗೆ ನಡೆದ ಕೋಮು ಘರ್ಷಣೆ ಹಾಗೂ ಪಿಎಸ್ಐ ಹಗರಣದ ಹಣಕಾಸಿನ ವ್ಯವಹಾರದ ಸುದ್ದಿಯಲ್ಲಿರುವಾಗಲೇ ಇದೀಗ ಬೃಹತ್ ಪ್ರಮಾಣದ ಅಕ್ರಮ ಮರಳುಗಣಿಗಾರಿಕೆ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಕನಕಗಿರಿ ತಾಲ್ಲೂಕಿನ ಕ್ಯಾರಿಹಾಳ, ಉದ್ದಿಹಾಳ ಮತ್ತು ನವಲಿ ಗ್ರಾಮದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ದಿನಕ್ಕೆ ನೂರಾರು ಟ್ರಾಕ್ಟರ್​ಗಳಲ್ಲಿ ಅಕ್ರಮ ಮರಳು ಸಾಗಿಸಲಾಗುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯದೆ ಮತ್ತು ತೆರಿಗೆ ಪಾವತಿಸದೆ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕಟ್ಟಡ ನಿರ್ಮಾಣಕ್ಕೆ ನಿರುಪಯುಕ್ತವಾದ ಮತ್ತು ಅತ್ಯಂತ ಕಳಪೆಗುಣಮಟ್ಟದಿಂದ ಕೂಡಿರುವ ಫಿಲ್ಟರ್ ಸ್ಯಾಂಡ್ (ಮಣ್ಣನ್ನು ನೀರಿನಿಂದ ತೊಳೆದ ಬಳಿಕ ಉಳಿಯುವ ಶೇಷ ಪದಾರ್ಥ) ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಸನಿತ್, ನವಲಿಯಲ್ಲಿ ಮರಳು ಗಣಿಗಾರಿಕೆಗೆ ಒಂದು ಅಧಿಕೃತ ಪಾಯಿಂಟ್ ಇದ್ದು, ಮಿಕ್ಕಿರುವ ಬಗ್ಗೆ ನಮ್ಮ ಗಮನಕ್ಕಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಚಿಕ್ಕಮಗಳೂರು : ಅಕ್ರಮ ಗೋಮಾಂಸ ಅಡ್ಡೆ ಮೇಲೆ ಪೊಲೀಸರ ದಾಳಿ

Last Updated :Sep 10, 2022, 1:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.