ಕುಷ್ಟಗಿಯ ನಾರಿನಾಳ‌ದಲ್ಲಿ ಚಿನ್ನದ ನಿಕ್ಷೇಪ ಪತ್ತೆ.. ಮುಂದುವರೆದ ಸಂಶೋಧನೆ..

author img

By

Published : Oct 15, 2021, 7:38 PM IST

gold sediment found in koppala and Research going on

ಒಂದು ಮೂಲದ ಪ್ರಕಾರ ಬಂಗಾರದ ನಿಕ್ಷೇಪ ಇದೆಯಾದರೂ ಉತ್ಪಾದನೆಗಿಂತ ಖರ್ಚು ಹೆಚ್ಚಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಬೇಕೆಂದರೆ ಬಂದಿರುವ ವಿಜ್ಞಾನಿಗಳು ಸದ್ಯ ದಸರಾ ಹಬ್ಬಕ್ಕೆ ಊರಿಗೆ ಹೋಗಿದ್ದಾರೆ ಎಂಬುದಾಗಿ ಶೆಡ್​ನಲ್ಲಿದ್ದ ರಂಗಸ್ವಾಮಿ ಎಂಬ ವ್ಯಕ್ತಿ ತಿಳಿಸಿದ್ದಾರೆ..

ಕುಷ್ಟಗಿ (ಕೊಪ್ಪಳ): ಕೇಂದ್ರ ಭೂಗರ್ಭ ಇಲಾಖೆಯ ಸಂಶೋಧನಾ ಸಿಬ್ಬಂದಿ ತಾಲೂಕಿನ ನಾರಿನಾಳ‌ ಗ್ರಾಮದಲ್ಲಿ ಬಿಡಾರ ಹೂಡಿದೆ. ಚಿನ್ನದ ನಿಕ್ಷೇಪ ಪತ್ತೆಯಲ್ಲಿ‌ ಈ ತಂಡ ನಿರತವಾಗಿದೆ. ಆದ್ರೆ, ಈ ತಂಡ ತನ್ನ ಪಾಡಿಗೆ ಚಿನ್ನದ ಅದಿರು ಪರೀಕ್ಷೆ ಕಾರ್ಯ ನಡೆಸಿದ್ದರೂ ಜನ ಏನೇನೋ ವದಂತಿಗಳು ಹಬ್ಬಿಸುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ.

ಕಳೆದ ಒಂದು ವಾರದಿಂದ ನಾರಿನಾಳ ಹೊರವಲಯದ ಸ.ನಂ.31, 32ರಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಮಣ್ಣನ್ನು ಅಗೆದು ಪರೀಕ್ಷೆ ನಡೆಸಿದ್ದಾರೆ. ಸಮಾರು 150 ಅಡಿಯಷ್ಟು ಒಳಗಿನ ಮಣ್ಣನ್ನು ಅಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ.

ಒಂದು ಮೂಲದ ಪ್ರಕಾರ ಬಂಗಾರದ ನಿಕ್ಷೇಪ ಇದೆಯಾದರೂ ಉತ್ಪಾದನೆಗಿಂತ ಖರ್ಚು ಹೆಚ್ಚಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಬೇಕೆಂದರೆ ಬಂದಿರುವ ವಿಜ್ಞಾನಿಗಳು ಸದ್ಯ ದಸರಾ ಹಬ್ಬಕ್ಕೆ ಊರಿಗೆ ಹೋಗಿದ್ದಾರೆ ಎಂಬುದಾಗಿ ಶೆಡ್​ನಲ್ಲಿದ್ದ ರಂಗಸ್ವಾಮಿ ಎಂಬ ವ್ಯಕ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ: 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆ

ಕಳೆದ ಇಪ್ಪತ್ತು ವರ್ಷಗಳ ಹಿಂದೆ, ಇಲ್ಲಿನ ಸಮೀಪದ ಗಾಣಗಿತ್ತಿ ಗುಡ್ಡದ ಸುತ್ತಮುತ್ತ ಬಂಗಾರದ ನಿಕ್ಷೇಪ ಇದೆ ಎಂಬ ಅನುಮಾನದ ಮೇಲೆ ಸತತ ಆರು ತಿಂಗಳ ಕಾಲ ಶೋಧ ಕಾರ್ಯ ನಡೆದಿತ್ತು.

ಆವಾಗಲೂ ಉತ್ಪಾದನೆಗಿಂತ ಖರ್ಚು ಜಾಸ್ತಿ ಆಗುತ್ತದೆ ಎಂಬ ಕಾರಣಕ್ಕೆ ಶೋಧ ಕಾರ್ಯ ಕೈ ಬಿಡಲಾಗಿತ್ತು. ಈ ಕುರಿತು ತಹಶೀಲ್ದಾರ್ ಎಂ.ಸಿದ್ದೇಶ್ ಪ್ರತಿಕ್ರಿಯಿಸಿ ಕುಷ್ಟಗಿ ತಾಲೂಕಿನ ನಾರಿನಾಳ‌ ಗ್ರಾಮದ ಹೊರವಲಯದಲ್ಲಿ ಚಿನ್ನ ನಿಕ್ಷೇಪದ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.