ತೆರಿಗೆ ವಂಚಿಸಿ ಒಂದೇ ನಂಬರ್​​​​ನಲ್ಲಿ ಸಂಚರಿಸುತ್ತಿದ್ದ ಮೂರು ಬಸ್​ ಆರ್​ಟಿಒ ವಶ

author img

By

Published : Aug 17, 2021, 2:23 PM IST

Updated : Aug 17, 2021, 2:23 PM IST

RTO seized 3 buses which has same number plate

ಕೋಲಾರದ ಮುಳಬಾಗಿಲು, ಬೇತಮಂಗಲ ಸೇರಿದಂತೆ ಆಂಧ್ರ ಕಡೆ ಒಂದೇ ನಂಬರ್​​​​ ಬಳಸಿ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪತ್ತೆ ಹಚ್ಚಲಾಗಿದೆ.

ಕೋಲಾರ: ಇಂದು ಬೆಳಗ್ಗೆ ಆರ್​​​ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೇ ನಂಬರ್​​​ನಲ್ಲಿ ಸಂಚರಿಸುತ್ತಿದ್ದ ಮೂರು ಖಾಸಗಿ ಬಸ್​​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರ್​​ಟಿಒ ಇಲಾಖೆಗೆ ತೆರಿಗೆ ವಂಚನೆ ಮಾಡಿ, ಒಂದೇ ನಂಬರ್ ಪ್ಲೇಟ್ ಬಳಕೆ ಮಾಡಿ ಓಡಾಡುತ್ತಿದ್ದ ಖಚಿತ ಮಾಹಿತಿ ಪಡೆದ ಅಪರ ಸಾರಿಗೆ ಆಯುಕ್ತ ನರೇಂದ್ರ ಓಲೇಕಾರ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.

ಕೋಲಾರದ ಮುಳಬಾಗಿಲು, ಬೇತಮಂಗಲ ಸೇರಿದಂತೆ ಆಂಧ್ರ ಕಡೆ ಒಂದೇ ನಂಬರ್​​​​ ಬಳಸಿ ಗ್ರಾಮೀಣ ಭಾಗದಲ್ಲಿ ಈ ವಾಹನಗಳು ಸಂಚರಿಸುತ್ತಿದ್ದವು. ಕೆಎ 06ಡಿ 4815 ನಂಬರ್​​​​ನ ಮೂರು ಬಸ್‌ಗಳ​ ಜೊತೆ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

Last Updated :Aug 17, 2021, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.